Belagavi

ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆ, ಆಕ್ರೋಶ


ಐನಾಪುರ: ಕಾಗವಾಡ ತಾಲೂಕಿನ ಹಲವು ಗ್ರಾಮಗಳಲ್ಲಿ ರೈತರ ಗೋಳು ಕೆಳುವವರಿಲ್ಲದಂತಾಗಿದೆ ಶಾಸಕ ಶ್ರೀಮಂತ ಪಾಟೀಲ ಅವರ ತಮ್ಮ ಕ್ಷೇತ್ರದಲ್ಲಿ ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಆಗಬಾರದು ಎಂದು ಹೇಳುತ್ತಾ ಬಂದಿದರು ಇಲ್ಲಿ ಮಾತ್ರ ಪಾಲನೆ ಆಗುತ್ತಿಲ ರೈತರು ತಮ್ಮ ಬೆಳೆಗಳಿಗೆ ನೀರು ಉಣಿಸಲು ದಿನದ ಮೊದಲು ಎಳು ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿದ್ದು ಅಧಿಕಾರಿಗಳು ದಿಢೀರನೆ ಅದನ್ನು ಮೂರು ಗಂಟಗೆ ಇಳಿಸಿರುವದರಿಂದ ಐನಾಪುರ ಹಾಗೂ ಸುತ್ತ ಮುತ್ತಲಿನ ಗ್ರಾಮದ ನೂರಾರು ರೈತರು ಇಂದು ಹೆಸ್ಕಾಂ ಕಚೇರಿಗೆ ಬೀಗ ಜಡಿದು ಆಕ್ರೊಶ ಹೊರ ಹಾಕಿದರು. ‌‌

ರೈತ ಕುಮಾರ ಅಪರಾಜ ಮಾತನಾಡಿ ರೈತರು ದೇಶದ ಬೆನ್ನೆಲುಬುವ ಎಂಬುದು ಬರಿ ಗಾದೆ ಮಾತಿನಲ್ಲಿ ಉಳಿದಿದೆ ಸರ್ಕಾರ ಮೊದಲು ಎಳು ತಾಸು ವಿದ್ಯುತ್ ನಿಡುತ್ತಿದ್ದು ಈಗ ದಿಢೀರ್ ಅಂತ ನಿನ್ನೆಯಿಂದ ಅದನ್ನು ಮೂರು ತಾಸಿಗೆ ಇಳಿಸಿದ್ದಾರ ಮೊದಲೇ ಈಭಾಗದಲ್ಲಿ ಪ್ರವಾಹ ಬಂದು ಸಾಕಷ್ಟು ರೈತರು ತೊಂದರೆ ಅನುಭವಿಸುತ್ತಿದೆ ಅದಕ್ಕಾಗಿ ಸರ್ಕಾರ ಕೂಡಲೆ ಗಮನ ಹರಿಸಿ ಎಳು ತಾಸು ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು. ‌


Leave a Reply