Belagavi

ಭಾರತೀಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದವರು ಸ್ವಾಮಿ ವಿವೇಕಾನಂದರು


ಬೆಳಗಾವಿ: ಬ್ರಿಟಿಷರು ದುರಾಡಳಿತ ಮಾತ್ರ ನಡೆಸದೆ ಭಾರತದಲ್ಲಿ ವಿದೇಶಿ ಸಂಸ್ಕøತಿ ಹೇರಲು ಮುಂದಾದಾಗ, ಭಾರತೀಯತೆ ಸನಾತನ ಸಂಸ್ಕøತಿಗೆ ಕುತ್ತು ಬಂದಾಗ ಅದನ್ನು ಭಾರತೀಯರಲ್ಲಿ ಮಾತ್ರವಲ್ಲದೆ ಸಮಸ್ತ ವಿಶ್ವದಲ್ಲಿ ಭಾರತದ ಸನಾತನ ಧರ್ಮ ಮತ್ತು ಚಿಂತನೆಯನ್ನು ಹರಡುವಂತೆ ಮಾಡಿದವರಲ್ಲಿ ಸ್ವಾಮಿ ವಿವೇಕಾನಂದರು ಅಗ್ರಗಣ್ಯರು ಎಂದು ನ್ಯಾಯವಾದಿಗಳಾದ ವಿಜಯ ಮಹೇಂದ್ರಕರ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ನೇತೃತ್ವದಲ್ಲಿ ಬುಧವಾರ ವಿವಿಯ ಕುವೆಂಪು ಸಭಾಂಗಣದಲ್ಲಿ ಜರುಗಿದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಬ್ರಿಟಿಷರು ವ್ಯವಸ್ಥಿತವಾಗಿ ವೇದ, ಉಪನಿಷತ್ತು, ಭಗವದ್ಗೀತೆ ಮತ್ತು ಭಾರತೀಯ ತತ್ವಜ್ಞಾನ ಕನಿಷ್ಠವಾಗಿದೆ ಮತ್ತು ಅಪ್ರಸ್ತುತವಾಗಿದೆ ಎಂದು ಭಾರತೀಯರಲ್ಲಿ ಮೂಡಲು ಅನೇಕ ಯೋಜನೆಗಳನ್ನು ರೂಪಿಸಿದರು. ರೋಮನ್ ಮತ್ತು ಗ್ರೀಕ್ ಸಂಸ್ಕøತಿ ಜಗತ್ತಿನಲ್ಲಿ ಶ್ರೇಷ್ಠ ಎಂದು ಸಾರಲು ಮುಂದಾಗಿದ್ದರು. ಈ ಎಲ್ಲ ಯೋಜನೆಗಳನ್ನು ವಿಫಲವಾಗುವಂತೆ ಮಾಡುವುದರಲ್ಲಿ ಸ್ವಾಮಿ ವಿವೇಕಾನಂದರ ಪಾತ್ರ ಅನನ್ಯವಾಗಿದೆ ಎಂದು ಹೇಳದರು.


ಸ್ವಾಮಿ ವಿವೇಕಾನಂದರು ಸಂಸ್ಕøತ ಮತ್ತು ಇಂಗ್ಲೀಷ್ ಭಾಷೆಯ ಪಾಂಡಿತ್ಯ ಹೊಂದಿದ್ದರು. ಅವರು ತಮ್ಮ ಯೌವನಾವಸ್ಥೆಯಲ್ಲಿಯೇ ವೇದ, ಉಪನಿಷತ್ತು, ಭಗವದ್ಗೀತೆ, ಪಾನೀನಿ ವ್ಯಾಕರಣ ಮತ್ತು ಪತಂಜಲಿ ಯೋಗದ ಕುರಿತಾಗಿ ಅಧ್ಯಯನಗೈದಿದ್ದರು. ಹಾಗಾಗೀ ಭಾರತೀಯ ಸಂಸ್ಕøತಿಯನ್ನು ವಿದೇಶಿ ನೆಲದಲ್ಲಿ ಅವರ ಭಾಷೆಯಲ್ಲಿಯೆ ತಿಳಿಯುವಂತೆ ವಿಶ್ವಕ್ಕೆ ಸಾರಿದರು. ಬ್ರಿಟಿಷರು ಭಾರತದಲ್ಲಿ ಮತ ಪ್ರಚಾರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿದಾಗ, ಹಸಿದವರಿಗೆ ತತ್ವಜ್ಞಾನ ನೀಡಬೇಡಿ, ಅವರಿಗೆ ಅನ್ನ ನೀಡಿ ಎಂದು ಕಟುವಾಗಿ ಟೀಕಿಸಿ, ಬ್ರಿಟಿಷರ ಶೋಷಣೆಯನ್ನು ಖಂಡಿಸಿದ್ದರು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪ್ರೊ. ಬಸವರಾಜ ಪದ್ಮಶಾಲಿ ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಕರ ಪ್ರೇರಣೆಯಾಗಿದ್ದಾರೆ. ಅವರ ಚಿಂತನೆ ಮತ್ತು ಜೀವನದ ಆದರ್ಶಗಳನ್ನು ಯುವ ಜನಾಂಗ ಅಳವಡಿಸಿಕೊಂಡರೆ, ಜೀವನ ಯಶಸ್ಸು ಹೊಂದುವುದರಲ್ಲಿ ಯಾವುದೇ ಸಂದೇಹವಿಲ್ಲ. ಸ್ವಾಮಿ ವಿವೇಕಾನಂದರು ಕೇವಲ 39 ವರ್ಷ ಮಾತ್ರ ಜೀವಿಸಿದ್ದಾರೆ. ಆದರೆ ಅವರ ಕಾರ್ಯ, ಸಾಧನೆ ಮೂಲಕ ನಾವೆಲ್ಲರೂ ಪ್ರೇರಣೆ ಪಡೆಯುತ್ತಿದ್ದೇವೆ ಎಂದರು.

ವಿದ್ಯಾರ್ಥಿಗಳಾದ ಬಸವರಾಜ ಅಂಕಲಗಿ, ಪ್ರವೀಣ ಮುಧೋಳ ಸ್ವಾಮಿ ವಿವೇಕಾನಂದರ ಕುರಿತಾಗಿ ಮಾತನಾಡಿದರು.ಮೌಲ್ಯಮಾಪನ ಕುಲಸಚಿವ ಡಾ. ವೀರನಗೌಡ ಪಾಟೀಲ, ಹಣಕಾಸು ಅಧಿಕಾರಿ ಪ್ರೊ. ಡಿ.ಎನ್.ಪಾಟೀಲ, ಪ್ರೊ. ಎಸ್.ಎಂ ಹುರಕಡ್ಲಿ, ಪ್ರೊ. ವಿನಾಯಕ ಬಂಕಾಪುರ, ಪ್ರೊ. ಬಿ.ಎಸ್.ನಾವಿ, ಪ್ರೊ. ವೈ.ಎಸ್. ಬಲವಂತಗೋಳ, ಪ್ರೊ. ಯರಿಸ್ವಾಮಿ ಭಾಗವಹಿಸಿದ್ದರು.ಪ್ರಭು ಸುಣಗಾರ ಪ್ರಾರ್ಥಿಸಿದರು. ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ಸಂಯೋಜಕ ಡಾ.ಪ್ರಕಾಶ ಕಟ್ಟಿಮನಿ ಸ್ವಾಗತಿಸಿದರು. ಡಾ.ಶಿವಲಿಂಗಯ್ಯ ಗೋಠೆ ನಿರೂಪಿಸಿದರು. ಮಂಜು ಕಾಳೆ ವಂದಿಸಿದರು.


Leave a Reply