Belagavi

ಕುಂದಾನಗರಿಯ ಇಬ್ಬರು ಯುವತಿಯರು ನಾಪತ್ತೆ


ಬೆಳಗಾವಿ : ಜಿಲ್ಲೆಯ ಅಲತಗಾ ಗ್ರಾಮದ ನಿವಾಸಿಯಾದ ಸುರೇಶ್ ರಾಮು ಗುಗ್ರೇಟಕರ ಮಗಳಾದ ಜ್ಯೋತಿ ಸುರೇಶ ಗುಗ್ರೇಟಕರ ಜನವರಿ ೧೧ ರಂದು ರಾತ್ರಿ ೧.೨೦ ಗಂಟೆಯಿಂದ ನಾಪತ್ತೆಯಾಗಿದ್ದಾಳೆ. ಫಿರ್ಯಾದೆದಾರರು ಸಂಬಂಧಿಗಳನ್ನು ವಿಚಾರಿಸಿದರೂ ಯಾವುದೇ ಸುಳಿವು ಇಲ್ಲದ ಕಾರಣ ಬೆಳಗಾವಿ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಯಸ್ಸು ೨೬, ಉದ್ದ ಮುಖ, ಉದ್ದ ಮೂಗು, ಮೈ ಬಣ್ಣ ಕಪ್ಪು ಕೆಂಪು ಬಣ್ಣದ ಚೂಡಿದಾರ ಧರಿಸಿದ್ದು, ಹಿಂದಿ ಹಾಗೂ ಮರಾಠಿ ಭಾಷೆ ಮಾತನಾಡುತ್ತಾಳೆ. ಸುಳಿವು ಸಿಕ್ಕಲ್ಲಿ ಬೆಳಗಾವಿ ಜಿಲ್ಲೆಯ ಕಾಕತಿ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು ಎಂದು ಕಾಕತಿ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನೊಂದು ಕಡೆ ಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಎ.ಪಿ.ಎಮ್.ಸಿ ಯಾರ್ಡ ಗೌಸಿದ್ದನ ಮಡ್ಡಿ ನಿವಾಸಿಯಾದ ಇಸ್ಮಾಯಿಲ್ ಚಾಂದಾಸಾಬ ಪಕಾಲಿ ಅವರ ಮಲ ಮಗಳಾದ ಯಾಸ್ಮೀನ ರಾಜೆಸಾನ ಬಾಗವಾನ ಡಿಸೆಂಬರ್ ೧೬, ೨೦೨೧ ರಂದು ಅಥಣಿಯಿಂದ ಶಹಾಪುರಕ್ಕೆ ಹೋಗುವಾಗ ವಿಜಯಪುರ ಬಸ್ ನಿಲ್ದಾಣದಲ್ಲಿ ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೋದ ಯಾಸ್ಮೀನ ಮರಳಿಲ್ಲ.

ಫಿರ್ಯಾದೆದಾರರು ಸಂಬಂಧಿಗಳನ್ನು ವಿಚಾರಿಸಿದರು ಯಾವುದೇ ಸುಳಿವು ಇಲ್ಲದ ಕಾರಣ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಯಸ್ಸು ೧೮, ಮೈಯಿಂದಾ ಸಾಧಾರಣ, ಕೆಂಪು ಮೈಬಣ್ಣ, ಉದ್ದುಮುಖ, ನಿಟಾದ ಮೂಗು, ತಲೆಯಲ್ಲಿ ಕಪ್ಪು ಕುದಲು, ಮೂಗಿನಲ್ಲಿ ಮೂಗುತಿ, ೫ ಅಡಿ ಎತ್ತರ, ಗುಲಾಬಿ ಬಣ್ಣದ ಟಾಪ್, ಪರ್ಪಲ್ ಕಲರ್ ಪ್ಯಾಂಟ್, ಕಪ್ಪು ಬಣ್ಣದ ಬುರ್ಕಾ, ಬೂದಿ ಬಣ್ಣದ ಸ್ಕಾರ್ಪ ಧರಿಸಿದ್ದು, ಕನ್ನಡ, ಹಿಂದಿ ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ. ಸುಳಿವು ಸಿಕ್ಕಲ್ಲಿ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Leave a Reply