Belagavi

ಕಿತ್ತೂರುನಲ್ಲಿ ಕಟ್ಟಡ ಕಾರ್ಮಿಕನ ಭೀಕರ ಹತ್ಯೆ : ರಸ್ತೆ ಪಕ್ಕ ಶವ ಪತ್ತೆ


ಬೈಲಹೊಂಗಲ ತಾಲೂಕಿನ ಮರೀಕಟ್ಟಿ ಗ್ರಾಮದ ರಮೇಶ್ ಮಾದಿಗರ (36) ಕೊಲೆಯಾದ ದುರ್ದೈವಿ. ರಮೇಶ್ ಹಿರೇಬಾಗೇವಾಡಿಯಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕಿತ್ತೂರಲ್ಲಿ ಕೆಲಸ ಇದೆ ಎಂದು ಹೇಳಿ‌ ಮನೆಯಿಂದ ತೆರಳಿದ್ದ ಎನ್ನಳಾಗಿದೆ.

ಕೊಲೆಗೆ ಇನ್ನೂ  ನಿಖರ ಕಾರಣ‌ ತಿಳಿದು ಬಂದಿಲ್ಲ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ರಮೇಶ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Leave a Reply