Belagavi

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ದೊರೆಯಲಿ : ಕರ್ನಲ್ ಡಾ. ಪರುಶರಾಮ ನಾಯಿಕ


ಮೂಡಲಗಿ: ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದರಿಂದ ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗುತ್ತದೆ. ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸಬಾರದು ಎಂದು ಕರ್ನಲ್ ಡಾ. ಪರುಶರಾಮ ನಾಯಿಕ ಹೇಳಿದರು.
ತಾಲ್ಲೂಕಿನ ಹೊಸಟ್ಟಿ ಗ್ರಾಮದಲ್ಲಿ ಗಂಗಮ್ಮತಾಯಿ ಸಿದ್ದಪ್ಪ ನಾಯಿಕ ಇವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಪುಣ್ಯಸ್ಮರಣೆ ದಿನ ಕೊಡುವ ರೂ. ೧೦ ಸಾವಿರ ನಗದು ಹಣ ಹಾಗೂ ಪ್ರಶಸ್ತಿ ಪತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು ಗ್ರಾಮೀಣ ಹೆಣ್ಣು ಮಕ್ಕಳ ಉನ್ನತ ಶಿಕ್ಷಣವನ್ನು ಕಲಿಯಲಿಕ್ಕೆ ಪಾಲಕರು ಅನುಕೂಲ ಮಾಡಿಕೊಡಬೇಕು ಎಂದರು.
ಶಿಕ್ಷಣ ಪ್ರೇಮಿಯಾಗಿದ್ದ ಮಾತೋಶ್ರೀ ಗಂಗಮ್ಮತಾಯಿ ನಾಯಿಕ ಅವರ ಹೆಸರಲ್ಲಿ ಹೊಸಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೭ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಳ್ಳುವ ಹೆಣ್ಣು ಮಕ್ಕಳಿಗೆ ನಗದು ಹಣವನ್ನು ಕೊಡುತ್ತಿದ್ದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತಮ್ಮ ತಾಯಿ ನೆನಪಿನಲ್ಲಿ ಪ್ರತಿ ವರ್ಷವೂ ಮುಂದುವರಿಯುವುದು ಎಂದರು.
ಪ್ರಸಕ್ತ ವರ್ಷದ ೭ನೇ ತರಗತಿಯ ಫಲಿತಾಂಶದಲ್ಲಿ ಅನಿತಾ ರಾಮಪ್ಪ ತಿಪ್ಪೇರ ಮತ್ತು ಕಾವೇರಿ ಮಾಳಪ್ಪ ಕಾರದಗಿ ಇಬ್ಬರು ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದರಿAದ ತಲಾ ರೂ. ೫ ಸಾವಿರ ನಗದು ಹಣವನ್ನು ಸಮಾರಂಭದಲ್ಲಿ ವಿತರಿಸಿದರು.
ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು, ಗ್ರಾಮದ ಹಿರಿಯರು, ಶಿಕ್ಷಕರು ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಗೆ ನಗದು: ಕಾರ್ಯಕ್ರಮದಿಂದ ಪ್ರೇರಣೆಗೊಂಡು ಅರ್ಜುನ ಮಹಾದೇವ ನಾಯಿಕ ಅವರು ಬರುವ ವರ್ಷದಿಂದ ಹೊಸಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೭ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಳ್ಳುವ ವಿದ್ಯಾರ್ಥಿಗೆ ರೂ. ೫ ಸಾವಿರ ನಗದು ಕೊಡುವುದಾಗಿ ಪ್ರಕಟಿಸಿದರು.


Leave a Reply