ಗದಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸೇರಿ ಜಿಲ್ಲೆಯ 5 ಆಸ್ಪತ್ರೆಗಳಲ್ಲಿ 125 ಜನರಿಗೆ ಲಸಿಕಾ ತಾಲೀಮು

0

ಗದಗ  ಜ 8: ಕೋವಿಡ್-19 ಲಸಿಕಾ ಅಭಿಯಾನದ ಯಶಸ್ವಿಗೆ ಪೂರ್ವಭಾವಿಯಾಗಿ ಮತ್ತು ಕೊರೊನಾ ಲಸಿಕೆ ವಿತರಣೆ ವ್ಯವಸ್ಥಿತವಾಗಿ ನೆರವೇರಿಸುವ ಉದ್ದೇಶದಿಂದ ಗದಗ-ಬೆಟಗೇರಿ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ಜಿಲ್ಲೆಯ 5 ನಿಗದಿತ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕಾ ತಾಲೀಮು ಶುಕ್ರವಾರ (ಜ.8)ರಂದು ಜರುಗಿತು.
ತಾಲೂಕು ಆಸ್ಪತ್ರೆ ನರಗುಂದ, ಸಮುದಾಯ ಆರೋಗ್ಯ ಕೇಂದ್ರ ಲಕ್ಷ್ಮೇಶ್ವರ, ರೋಣ ತಾಲೂಕಿನ ನಿಡಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮುಂಡರಗಿ ತಾಲೂಕಿನ ಬಾಗೇವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕಾ ತಾಲೀಮು ಜರುಗಿತು.  ಬೆಳಗ್ಗೆ 9 ಗಂಟೆಯಿಂದ ಪ್ರಾರಂಭವಾಗಿ ಸಂಜೆಯವರೆಗೆ ಜರುಗಿದ ಈ ತಾಲಿಮಿನಲ್ಲಿ ಪ್ರತಿ ಆಸ್ಪತ್ರೆಗಳಲ್ಲಿ 25  ಜನರಂತೆ 125 ಜನರಿಗೆ ಲಸಿಕೆ ನೀಡುವ ತಾಲೀಮು ನಡೆಸಲಾಯಿತು.
ಗದಗ-ಬೆಟಗೇರಿ ನಗರದ ಗದಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಬಸರೀಗಿಡದ, ಆರ್.ಸಿ.ಎಚ್. ಅಧಿಕಾರಿ ಡಾ.ಬಿ.ಎಂ.ಗೊಜನೂರ ಹಾಗೂ ಗದಗ ತಾಲೂಕು ವೈದ್ಯಾಧಿಕಾರಿ ಡಾ.ನೀಲಗುಂದ ಅವರುಗಳು ಲಸಿಕಾ ತಾಲೀಮು ವೀಕ್ಷಿಸಿ ಅಗತ್ಯದ ಮಾರ್ಗದರ್ಶನ ನೀಡಿದರು.

- Advertisement -

- Advertisement -

Leave A Reply

Your email address will not be published.