Gadag

 ಜ.18 ರಂದು ಗದಗ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಹುದ್ದೆ ಚುನಾವಣೆ


ಗದಗ  : ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಹುದ್ದೆ ರಾಜೀನಾಮೆ ನೀಡಿರುವ ಹಿನ್ನೆಲೆ ತೆರವಾಗಿರುವುದರಿಂದ 5 ವರ್ಷದ ಬಾಕಿ ಉಳಿದಿರುವ ಅವಧಿಗೆ  ಜ.18 ರಂದು ಮಧ್ಯಾಹ್ನ 3 ಘಂಟೆಗೆ ಗದಗ ಜಿಲ್ಲಾ ಪಂಚಾಯತ ಕಾರ್ಯಾಲಯದ ಸಭಾಂಗಣದಲ್ಲಿ ಚುನಾವಣಾ ಸಭೆ ಜರುಗಿಸಲಾಗುವುದು.
ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಿಡಲಾಗಿದೆ. ಸದಸ್ಯರು ಚುನಾವಣೆ ಸಭೆಗೆ ಗೊತ್ತುಪಡಿಸಿದ ಅವಧಿಯ 2 ಘಂಟೆ ಮೊದಲೆ ಅಂದರೆ ಜ.18 ರಂದು ಮದ್ಯಾಹ್ನ 1 ಘಂಟೆಗು ಮುಂಚಿತವಾಗಿ ಪ್ರಾದೇಶಿಕ ಆಯುಕ್ತರು ಬೆಳಗಾವಿ ಅಥವಾ ಗದಗ ಅಪರ ಜಿಲ್ಲಾಧಿಕಾರಿಗೆ ನಮೂನೆ-1 ರಲ್ಲಿ ನಾಮ ನಿರ್ದೇಶನ ಪತ್ರವನ್ನು ಸಲ್ಲಿಸಬಹುದು ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಅಧ್ಯಕ್ಷಾಧಿಕಾರಿಗಳಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಕೋವಿಡ್-19 ಹಿನ್ನೆಲೆ ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಇತ್ಯಾದಿ ಮುಂಜಾಗ್ರತಾ ಕ್ರಮಗಳ ಪಾಲನೆ ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.


Leave a Reply