ಹಕ್ಕಿ ಜ್ವರ ಜನರಲ್ಲಿ ಜಾಗೃತಿ ಅಗತ್ಯ

0

ಗದಗ : ಕೊರೊನಾ ಮಹಾ ಮಾರಿಯಿಂದ ಈಗಾಗಲೆ ಬೆಸತ್ತಿರುವ ಜನಕ್ಕೆ ಈಗ ಹಕ್ಕಿಜ್ವರ ಎನ್ನುವ ಮತ್ತೊಂದು ಸಾಂಕ್ರಾಮಿಕ ರೋಗ ಈಗಾಗಲೆ ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲಪ್ರದೇಶ ಹಾಗೂ ಕೇರಳ ರಾಜ್ಯದಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದೆ.
ಹಕ್ಕಿಜ್ವರ ಪಕ್ಷಿಯಿಂದ ಪಕ್ಷಿಗೆ ಹರಡುವ ಸಾಂಕ್ರಾಮಿಕ ಸೊಂಕಾಗಿದ್ದು ಅನಾರೋಗ್ಯಕ್ಕೆ ಇಡಾದ ಹಕ್ಕಿಯ ಸಂಪರ್ಕಕ್ಕೆ ಮನುಷ್ಯ ಬಂದಾಗ ಇದಕ್ಕೆ ಮನುಷ್ಯ ತುತ್ತಾದಾಗಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 1997 ರಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲಿ ಎಚ್5ಎನ್1 ವೈರಸ್ ಪತ್ತೆಯಾಗಿತ್ತು. ಈ ಸೊಂಕು ತಗುಲಿದ 2 ರಿಂದ 7 ದಿನಗಳೊಳಗೆ ರೋಗ ಲಕ್ಷಣಗಳು ಕಂಡು ಬರುತ್ತವೆ ಜ್ವರ, ಕೆಮ್ಮು, ತಲೆನೋವು, ಗಂಟಲುನೋವು, ಸ್ನಾಯುನೋವು ಹಾಗೂ ಸೌಮ್ಯ ರೀತಿಯ ಕಣ್ನಿನ ಸೊಂಕಿಗು ಒಳಪಡಬಹುದು.
ಸಧ್ಯಕ್ಕೆ ಈ ಹಕ್ಕಿ ಜ್ವರ ಮನುಷ್ಯರಲ್ಲಿ ಕಂಡು ಬಂದರೆ ಯಾವುದೇ ಲಸಿಕೆ ಲಭ್ಯವಿರುವುದಿಲ್ಲ. ಹೀಗಾಗಿ ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಸರಿಯಾಗಿ ಬೇಯಿಸಿ ತಿನ್ನಬೇಕು ಅದೇ ರೀತಿ ಸತ್ತ ಅಥವಾ ಸಾಯುವ ಪರಿಸ್ಥಿತಿಯಲ್ಲಿರುವ ಹಕ್ಕಿಯ ಹತ್ತಿರ ಹೋಗಬಾರದು ಹಾಗೂ ಮುಟ್ಟಬಾರದು. ಆ ಹಕ್ಕಿಯು ಸೊಂಕಿಗೆ ಒಳಗಾಗಿರುವ ಸಾಧ್ಯತೆ ಇರುತ್ತದೆ.
ಈ ಹಿನ್ನೆಲೆ ಜಿಲ್ಲೆಯಲ್ಲಿ ಎಲ್ಲಿಯಾದರೂ ಹಕ್ಕಿಜ್ವರದ ಪ್ರಕರಣಗಳು ಹಾಗೂ ಅಸ್ವಾಭಾವಿಕ ಹಕ್ಕಿಗಳ ಸಾವು ಅದರಲ್ಲೂ ವಿಶೇಷವಾಗಿ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯಲ್ಲಿ ಹಕ್ಕಿಗಳು ವಲಸೆ ಬರುತ್ತಿದ್ದು, ಆ ಸ್ಥಳದಲ್ಲಿ  ಅಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಜಿಲ್ಲಾ ಸಮೀಕ್ಷಣಾ ಘಟಕಕ್ಕೆ ಮಾಹಿತಿ ತಿಳಿಸಲು ಜಿಲ್ಲಾ ಸಮೀಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

- Advertisement -

Leave A Reply

Your email address will not be published.