ಗಂಗಾವತಿ ಉಪವಿಭಾಗ ಹೆರಿಗೆ ಆಸ್ಪತ್ರೆಯಲ್ಲಿ ಕೋ ವ್ಯಾಕ್ಸಿನ್ ಲಸಿಕೆ ಬಗ್ಗೆ ಅಣಕು ಪ್ರದರ್ಶನ

0

ಕೋ ವ್ಯಾಕ್ಸಿನ್ ಹಾಕಿಸುವ ಕುರಿತು ಅಣಕು ಪ್ರದರ್ಶನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಹಾಗೂ ಉಪವಿಭಾಗ ಆಸ್ಪತ್ರೆ ಗಂಗಾವತಿ ಇವರ ಸಹಯೋಗದೊಂದಿಗೆ ಇಂದು ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಣಕು ಪ್ರದರ್ಶನವನ್ನು ಆಯೋಜಿಸಲಾಗಿತ್ತು ವ್ಯಾಕ್ಸಿನ್ ನೀಡಿದಾಗ ಆಗುವ ತೊಂದರೆಗಳನ್ನು ಸರಿಪಡಿಸಲು ಇದು ತುಂಬಾ ಸಹಕಾರಿಯಾಗುತ್ತದೆ ಕಾರ್ಯಕ್ರಮದಲ್ಲಿ ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಈಶ್ವರ ಸವಡಿ ಅವರು ಕೋ ವ್ಯಾಕ್ಸಿನ್ ಬಗ್ಗೆ ವಿಶ್ಲೇಷಣೆ ಮಾಡಿದರು ಮಹಾಮಾರಿ ಕರೋನ ವಿರುದ್ಧ ಹೋರಾಟಕ್ಕೆ ಭಾರತ ದೇಶ ಕೋವಿಡ್ 19 ವಿರುದ್ಧ ಲಸಿಕೆ ಪ್ರಯೋಗ ಪರೀಕ್ಷೆ ಎನ್ನು ಮೊದಲು ಅಣಕು ಪ್ರದರ್ಶನ ನಮ್ಮ ಗಂಗಾವತಿ ತಾಲೂಕಿನ ಉಪವಿಭಾಗ ಹೆರಿಗೆ ಆಸ್ಪತ್ರೆಯಲ್ಲಿ ನಮ್ಮ ಜಿಲ್ಲಾ ವೈದ್ಯಾಧಿಕಾರಿ ಡಾ.ಮಹೇಶ್ ಅವರ ನೇತೃತ್ವದಲ್ಲಿ ಈ ದಿನ ಅಣಕು ಪ್ರದರ್ಶನ ಪ್ರಾರಂಭ ಮಾಡಿದ್ದೇವೆ ಇಲ್ಲಿ ನಮ್ಮ ಆಸ್ಪತ್ರೆಯ ಸಿಬ್ಬಂದಿಗಳ 25 ಜನ ಈಗಾಗಲೇ ರಿಜಿಸ್ಟರ ಆಗಿರುವರು ಕೋ ವ್ಯಾಕ್ಸಿನ್ ಹಾಕುವಂತ ಅಣಕು ಪ್ರದರ್ಶನ ಅವರ ಆಧಾರ್ ಕಾರ್ಡ್ ತಂದ ಮೇಲೆ ರಿಜಿಸ್ಟರ್ ಮಾಡುವುದರ ಮೂಲಕ ವ್ಯಾಕ್ಸಿನ್ ಹಾಕಿದ್ದೇವೆ ಎಂದು ಅವರ ಮೊಬೈಲ್ ಮುಖಾಂತರ ರಿಜಿಸ್ಟರ್ ಆಗುತ್ತದೆ ಅವರ ಮೊಬೈಲಿಗೆ ಮೆಸೇಜ್ ಬರುತ್ತದೆ ಆಗ ವ್ಯಾಕ್ಸಿನ್ ಲಸಿಕೆ ಹಾಕಿದಮೇಲೆ ಅವರನ್ನು 30 ನಿಮಿಷ ಅವರನ್ನು ಆಸ್ಪತ್ರೆಯಲ್ಲಿಟ್ಟುಕೊಂಡು ಅವರನ್ನು ನೋಡಿ ಅವರಿಗೆ ಏನಾದರೂ ತೊಂದರೆ ಇದೆ ಎಂದು ನೋಡಿಕೊಂಡು ಅವರಿಗೆ ಏನಾದರೂ ತೊಂದರೆ ಇಲ್ಲ ಅಂದರೆ ಅವರನ್ನು ಮನೆಗೆ ಕಳಿಸಿಕೊಡುತ್ತಾರೆ ಅಕಸ್ಮಾತಾಗಿ ಅವರಿಗೆ ತೊಂದರೆ ಬಂದರೆ ತಕ್ಷಣ ಅವರಿಗೆ ಚಿಕಿತ್ಸೆ ಕೊಡುವಂತ ವ್ಯವಸ್ಥೆ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಚಿಕಿತ್ಸೆಗೆ ರೆಡಿಯಾಗಿರುತ್ತಾರೆ ಎಂದು ಡಾಕ್ಟರ್ ಈಶ್ವರ ಸವಡಿ ಕೋ ವ್ಯಾಕ್ಸಿನ್ ಬಗ್ಗೆ ವಿಶ್ಲೇಷಣೆ ಮಾಡಿದರು ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿಗಳಾದ ಡಾಕ್ಟರ್ ಮಹೇಶ್ ಎಂಜಿ ಅವರು ಭಾಗವಹಿಸಿದರು ಗಂಗಾವತಿ ಉಪವಿಭಾಗ ಆಸ್ಪತ್ರೆಯ 25 ಸಿಬ್ಬಂದಿಗಳು ಈ ಸಂದರ್ಭದಲ್ಲಿ ಇದ್ದರು ಬಂದಂತ ಶಿಬಿರಾರ್ಥಿಗಳಿಗೆ ಮಾಹಿತಿ ವಿನಿಮಯ ಮಾಡಿದರು

- Advertisement -

- Advertisement -

Leave A Reply

Your email address will not be published.