ಮಂತ್ರಿಗಳ ಕಾರುಗಳು ಮತ್ತು ಡಿಸೇಲ

0

ಬೆಳಗಾವಿ ; ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಕಾರಿಗೆ ಸಾರಿಗೆ ಸಂಸ್ಥೆಯ ಪೆಟ್ರೋಲ್ ಬಂಕ್ ನಿ೦ದ ಡಿಸೇಲ ಹಾಕಿಸಿದ್ದು ದೊಡ್ಡ ಸುದ್ದಿಯಾಯಿತು .
ಮಂತ್ರಿಗಳಿಗೆ ಸೇರಿದ ಕಾರು ಖಾಸಗಿಯೋ ಅಥವಾ ಸರ್ಕಾರಿಯೋ ಅನ್ನುವದು ಸಹ ಇನ್ ಡೈರೆಕ್ಟಾಗಿ ಚರ್ಚೆಗೆ ಬಂತು .ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಉಪಮುಖ್ಯಮಂತ್ರಿಗಳು ಮುಜುಗುರಕ್ಕೆ ಒಳಗಾಗಿದ್ದು ಆಶ್ಚರ್ಯವೇನಲ್ಲ .ಪಾಪ ಮಂತ್ರಿಗಳಿಗೆ ಗೊತ್ತಿಲ್ಲದಂತೆ ಕಾರು ಚಾಲಕ ಡೀಸೆಲ್ ಹಾಕಿ ಸಿದ್ಧನಂತೆ ! ಹೀಗಾಗಿ ಮಂತ್ರಿಗಳ ತಪ್ಪೇನೂ ಇಲ್ಲ !! ಡಿಸೇಲ್ ಹಾಕಿಸಲು ಚಾಲಕನಿಗೆ ದುಡ್ಡು ಸಹ ನೀಡಲಾಗಿತ್ತು !!! ಮಂತ್ರಿಗಳ ಮೇಲಿನ ಗೌರವವೊ, ಪ್ರೀತಿಯೊ , ಭಯವೋ ಒಟ್ಟಿನಲ್ಲಿ ಮಂತ್ರಿಗಳು ಹೇಳಿದ್ದರೋ ? ಇಲ್ಲವೋ ? ಸಾರಿಗೆ ಸಿಬ್ಬಂದಿ ಮಂತ್ರಿಗಳ ಕಾರಿಗೆ ಡೀಸೆಲ್ ಹಾಕಿದ್ದಾರೆ .ಈಗ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತಾರಂತೆ ಮಂತ್ರಿಗಳು !!!
ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಬೇಕು , ಎಲ್ಲ ಮಂತ್ರಿಗಳಿಗೂ ಆಯಾ ಇಲಾಖೆಗಳ ಕಡೆಯಿಂದಲೇ ಎಲ್ಲಾ ಸಾರಿಗೆ ಸಂಬಂಧಿ , ಪ್ರವಾಸ ಸಂಬಂಧಿ ಖರ್ಚುಗಳು ನಿಭಾಯಿಸಲ್ಪಡುತ್ತದೆ .ಇದೇನು ಇಂದು ನಡೆದದ್ದಲ್ಲ ,ಬಹಳ ಹಿಂದಿನಿಂದಲೇ ಈ ಅನೌಪಚಾರಿಕ ಪದ್ಧತಿ ಜಾರಿಯಲ್ಲಿದೆ .ಮಂತ್ರಿಗಳು ಖಾಸಗಿ ಕೆಲಸಕ್ಕೆ ಓಡಾಡುವುದು ಕಡಿಮೆಯೇ ಎಂದು ಹೇಳಬಹುದು 24 ಗಂಟೆಯೂ ಅವರು ಸರ್ಕಾರಿ ಕೆಲಸದ ಮೇಲೆಯೇ ಇದ್ದಂತೆ ! ಅವರೇನು 8 ತಾಸು ದುಡಿಯುವ ನೌಕರರಲ್ಲ .ಹೀಗಾಗಿ ಕಾರು ಖಾಸಗಿಯಾದರೇನು ಸರ್ಕಾರಿ ಆದರೆನು ಓಡಾಡುವುದು ಮಂತ್ರಿಗಳು ಮತ್ತು ಅವರ ಆಪ್ತರು ಹೀಗಾಗಿ ಈ ಪದ್ಧತಿಯನ್ನು ಹಿಂದಿನಿಂದ ಬೆಳೆಸಿಕೊಂಡು ಉಳಿಸಿಕೊಂಡು ಬರಲಾಗಿದೆ .ಇದಕ್ಕೆ ಉಪಮುಖ್ಯಮಂತ್ರಿ ಸವದಿಯವರು ಹೊರತಾಗಿಲ್ಲ ,ರಾಜ್ಯದಲ್ಲಿ ಇದು ಮುಂದೆ ನಿಲ್ಲುವುದಿಲ್ಲ ,ಇದೊಂದು ನಿರಂತರ ಪ್ರಕ್ರಿಯೆ .ಕೆಲವು ಮಂತ್ರಿಗಳ ಚಾಲಕರಂತೂ ಹಿರಿಯ ಅಧಿಕಾರಿಗಳೊಂದಿಗೆ ತಾವೇ ಮಂತ್ರಿ ಏನೋ ಎಂಬಂತೆ ಮಾತನಾಡುವುದನ್ನು ಕಂಡಿದ್ದೇನೆ .ಇದೇನು ಒಬ್ಬರ ಕಥೆಯಲ್ಲ ರಾಜ್ಯದಲ್ಲಿರುವ ಬಹುತೇಕ ವಿವಿಐಪಿಗಳ ಕತೆಯೂ ಅಷ್ಟೆ .

BJP  Add

ಈ ವಿವಿಐಪಿಗಳಿಗೆ ತಮ್ಮ ಸುತ್ತಮುತ್ತ ಇರುವವರು ತಮ್ಮ ಹೆಸರಿನಲ್ಲಿ ಏನೆಲ್ಲವನ್ನು ಮಾಡುತ್ತಿರುತ್ತಾರೆ ಎನ್ನುವ ಎಲ್ಲ ವಿಷಯಗಳು ಗೊತ್ತಿರುವುದಿಲ್ಲ ಎನ್ನುವಂತೆಯೂ ಇಲ್ಲ ಮತ್ತು ಎಲ್ಲ ವಿಷಯವೂ ಗೊತ್ತಿರುತ್ತದೆ ಎನ್ನುವಂತೆಯೂ ಇಲ್ಲ .ಎಷ್ಟೋ ಬಾರಿ ಇವರಿಗೆ ಗೊತ್ತಿಲ್ಲದೆ ಇವರ ಕೈಗಳು ಹೊಲಸಾಗಿರುತ್ತವೆ .ಹೀಗಾಗಿ ತಮ್ಮ ಸುತ್ತಮುತ್ತ ಇರುವವರು ಏನು ಮಾಡುತ್ತಾರೆ , ಏನು ಮಾಡುವುದಿಲ್ಲ ಎನ್ನುವುದರತ್ತಲೂ ಗಮನಹರಿಸುವ ಅವಶ್ಯಕತೆ ಇದೆ ಇಲ್ಲದಿದ್ದರೆ ಸಾರ್ವಜನಿಕವಾಗಿ ಮುಖಭಂಗವಾಗುವುದು , ಅಪಮಾನಕ್ಕೊಳಗಾಗುವ ದು ,ಮುಖಭಂಗವಾಗುವುದು ,ಚರಿತ್ರೆ ಹಾಳಾಗುವುದು ತಪ್ಪುವುದಿಲ್ಲ .

- Advertisement -

- Advertisement -

Leave A Reply

Your email address will not be published.