Belagavi

೧೨ ರಂದು ಪತ್ರಿಕಾ ಗೋಷ್ಠಿ


ಬೈಲಹೊಂಗಲ ೯: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಸಾ:ಕಾಗವಾಡದಲ್ಲಿ
ನಡೆಯುತ್ತಿರುವ, ೧೪ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ
ನಿಮಿತ್ಯ ಈ ಪತ್ರಿಕಾ ಗೋಷ್ಠಿಯನ್ನು ಆಯೋಜಿಸಲಾಗಿದೆ. ಬೆಳಗಾವಿಯ ನೆಹರು
ನಗರದಲ್ಲಿರುವ, ಕನ್ನಡ ಭವನದಲ್ಲಿ ಮಂಗಳವಾರ ದಿನಾಂಕ:೧೨/೦೧/೨೦೨೧
ರಂದು ಮಧ್ಯಾಹ್ನ:೧೨:೦೦ ಗಂಟೆಗೆ, ಪತ್ರಿಕಾ ಗೋಷ್ಠಿಯನ್ನು
ಆಯೋಜಿಸಲಾಗಿದೆ. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ,
ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ೧೪ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ
ಸಮ್ಮೇಳನದ ವಿವರಗಳನ್ನು ನೀಡಲಿದ್ದಾರೆ. ಕಾರಣ ತಾವು ಪತ್ರಿಕಾ
ಗೋಷ್ಠಿಗೆ ಆಗಮಿಸಬೇಕೆಂದು ಗೌರವ ಕಾರ್ಯದರ್ಶಿ ಜ್ಯೋತಿ ಬದಾಮಿ
ತಿಳಿಸಿದ್ದಾರೆ.


Leave a Reply