ಬೈಲಹೊಂಗಲದಲ್ಲಿ ೧೬ ರಿಂದ ೧೮ ರ ವರೆಗೆ ರಾಷ್ಟçಮಟ್ಟದ ವೀರಶೈವ ಅರ್ಚಕ ಪುರೋಹಿತರ ಕಾರ್ಯಾಗಾರ

ಬೈಲಹೊಂಗಲ ೯- ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಹಾಗೂ ವೈದಿಕ ಚಾರಿಟೆಬಲ್ ಟ್ರಸ್ಟ್ ಬೆಂಗಳೂರು ಇವುರುಗಳ ಸಹಯೋಗದಲ್ಲಿ ರಾಷ್ರö್ಟಮಟ್ಟದ ವೀರಶೈವ ಅರ್ಚಕ ಪುರೋಹಿತ ಹಾಗೂ ಆಗಮಿಕರ ಕಾರ್ಯಾಗಾರವು ಇದೇ  ಜನೆವರಿ ೧೬ ರಿಂದ ೧೮ ವರೆಗೆ ಜರುಗಲಿದೆ ಎಂದು ಡಾ.ಮಹಾಂತಯ್ಯ ಶಾಸ್ರಿö್ತ ಆರಾದ್ರಿಮಠ ಹೇಳಿದರು.
ಅವರು ಶುಕ್ರವಾರ ಪತ್ರಿಕೆಯೊಂದಿಗೆ ಮಾತನಾಡಿ, ಡಾ.ಕೆ.ಎನ್. ರಾಜಕುಮಾರ ಶಾಸ್ರಿö್ತಗಳವರ ಸಾರಥ್ಯದಲ್ಲಿ ನೂತನ ಗೃಹ ಪ್ರವೇಶ ಕುರಿತು ಈ ಕಾರ್ಯಾಗಾರವು ಶ್ರೀ ಸುಜ್ಞಾನ ಬಸವೇಶ್ವರ ಕಲ್ಯಾಣ ಮಂಟಪ ವಿಜಯನಗರ ಮನುವನ ಮೆಟ್ರೊ ಸ್ಟೇಶನ್ ಪಕ್ಕ ಬೆಂಗಳೂರಿನಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ನಾಡಿನ ಶಿವಾಚಾರ್ಯರು ಮತ್ತು ಅನೇಕ ಗಣ್ಯಮಾನ್ಯರು ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯ ವ್ಯಕ್ತಿಗಳಿಗೆ ಹಾಗೂ ಗುರು ವೀರಕ್ತಮಠಾಧಿಪತಿಗಳಿಗೆ  ಮತ್ತು ವೈದಿಕತ್ವದಲ್ಲಿ ಸಾಧನೆಗೈದ ಸಾಧಕರಿಗೆ ರಾಷ್ರಿö್ಟÃಯ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗುವುದು.  ಸಮಾರೋಪ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವೇರಿಸುವರು. ಸಚಿವ ಬಿ.ಶ್ರೀರಾಮಲು ಹಾಗೂ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ ಅಧ್ಯಕ್ಷತೆ ವಹಿಸುವರು ಎಂದರು.
ಬೆಳಗಾವಿ ಜಿಲ್ಲೆಯ ವೀರಶೈವ ಅರ್ಚಕರು ಮತ್ತು ಪುರೋಹಿತರು ೩ ದಿನಗಳ ಕಾಲ ನಡೆಯುವ ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಡಾ.ಮಹಾಂತಯ್ಯ ಶಾಸ್ರಿö್ತ ಆರಾದ್ರಿಮಠ ಮೊ.೯೯೪೫೨೬೯೮೮೦, ಸಂಗಯ್ಯ ಶಾಸ್ರಿö್ತಗಳು ಮೊ.೯೮೪೫೯೩೪೩೯೧ ಸಂಪರ್ಕಿಸಲು ಕೋರಲಾಗಿದೆ.

Leave A Reply

Your email address will not be published.