Belagavi

ಸಾಹಿತ್ಯ ಕ್ಷೇತ್ರಕ್ಕೆ ಮುಲ್ಲಾರ ಕೊಡುಗೆ ಅಪಾರ : ತಿಮ್ಮಾಪೂರ


ಬೈಲಹೊಂಗಲ ೯- ಐತಿಹಾಸಿಕ ನಾಡಿನಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಗೌರವ ತಂದು ಕೊಟ್ಟ ಖ್ಯಾತಿ ಹಿರಿಯ ಸಾಹಿತಿ ದಿ. ಹಾಜಿ ಎಂ.ಆರ್.ಮುಲ್ಲಾ ಅವರಿಗೆ ಸಲ್ಲುತ್ತದೆ ಎಂದು ಬೆಳಗಾವಿಯ ಅಂಜುಮನ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಚ್.ಐ.ತಿಮ್ಮಾಪೂರ ಹೇಳಿದರು.
ಅವರು ಪಟ್ಟಣದ ಇಂಚಲ ಕ್ರಾಸ್‌ನ ಎಂಎಎ ಹೈಸ್ಕೂಲನ ಈದ್ಗಾ ಮೈದಾನದಲ್ಲಿ ನಡೆದ ರಾಷ್ಟç ಪ್ರಶಸ್ತಿ ವಿಭೂಷಿತ, ಮಕ್ಕಳ ಸಾಹಿತಿ ಎಂ.ಆರ್.ಮುಲ್ಲಾ ಅವರ ಸಾಧನೆ ಕುರಿತಾದ ಭವ್ಯ ಆದರ್ಶಗಳ ಶಿಕ್ಷಕ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸರಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅವರು ತಮ್ಮ ಮಕ್ಕಳಂತೆಯೇ ವಿದ್ಯಾರ್ಥಿಗಳನ್ನು ಪ್ರೀತಿಸಿ ಸರ್ವಾಂಗಿನ ಪ್ರಗತಿಗೆ ಶ್ರಮಿಸಿದ ಪ್ರಯುಕ್ತ ರಾಷ್ಟç, ರಾಜ್ಯ ಪ್ರಶಸ್ತಿಗೆ ಭಾಜನರಾದದ್ದು ಈ ನಾಡಿಗೆ ಹೆಮ್ಮೆಯಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷೆö್ಯ ಮಂಗಲಾ ಮೆಟಗುಡ್ಡ್ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿ, ಸಂಸಾರ, ಸೇವೆ, ಸಾಹಿತ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಮುಲ್ಲಾ ಅವರು ತಮ್ಮ ಜೀವನವನ್ನು ಸಾರ್ಥಕಗೊಳಿಸಿದ್ದಾರೆ. ಹಿಂದು ಮುಸ್ಲಿಮ್ ಭಾವೈಕ್ಯತೆಗೆ ಸದಾ ಶ್ರಮಿಸಿ ಹಲವಾರು ಸಾಹಿತಿಕ ಕೃತಿಗಳನ್ನು ರಚಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಕಿರಿಯ ಸಾಹಿತಿ, ಬರಹಗಾರರಿಗೆ ಮಾರ್ಗದರ್ಶಕರಾಗಿದ್ದ ಅವರು ಇನ್ನೂ ಬಾಳಿ ಬದುಕಬೇಕಾಗಿತ್ತು. ಈ ನಿಟ್ಟಿನಲ್ಲಿ ಭವ್ಯ ಆದರ್ಶಗಳ ಶಿಕ್ಷಕ ಕೃತಿ ಅವರ ಸಾಧನೆಗಳ ಪ್ರತಿಬಿಂಬವಾಗಿ ಹೊರ ಹೊಮ್ಮಿದೆ ಎಂದರು.
ಬೆಳಗಾವಿಯ ಇಮಾಮ ವ ಖತೀಬ ಶಾಯಿ ಮಸ್ಜೀದನ ಮುಪ್ತಿ ಕಾಸೀಮ ಸಾಹೇಬ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಶಾಸಕ ಮಹಾಂತೇಶ ಕೌಜಲಗಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪತ್ರಿ ಬಸವೇಶ್ವರ ಅನುಭವ ಮಂಟಪದ ಅದ್ಯಕ್ಷೆö್ಯ ಪ್ರೇಮಕ್ಕ ಅಂಗಡಿ ಅವರು ಭವ್ಯ ಆದರ್ಶಗಳ ಶಿಕ್ಷಕ ಕೃತಿ ಪರಿಚಯ ಮಾಡಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಲೋಕಸಭಾ ಸದಸ್ಯ ಎಸ್.ಬಿ.ಶಿದ್ನಾಳ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಬೆಳವಡಿಯ ಶ್ರೀ ಸೋಮೇಶ್ವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಗುರುಪುತ್ರಪ್ಪ ಹೊಸಮನಿ, ಕಸಾಪ ತಾಲೂಕಾಧ್ಯಕ್ಷೆö್ಯ ಗೌರಾದೇವಿ ತಾಳಿಕೋಟಿಮಠ, ಹಿರಿಯ ಪತ್ರಕರ್ತ, ಶಿಕ್ಷಣ ತಜ್ಞ ಈಶ್ವರ ಹೋಟಿ, ನಿವೃತ ಶಿಕ್ಷಕಿ ಅನ್ನಪೂರ್ಣಾ ಕನೋಜ, ಮಹಾಂತ ಪ್ರತಿಷ್ಠಾನದ ಅದ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ಅಂಜುಮನ ಇಸ್ಲಾಂ ಹಾಗೂ ಜಾಮೀಯಾ ಮಸ್ಜೀದ ಅಧ್ಯಕ್ಷ ಡಾ.ಐಜಾಜ ಬಾಗೇವಾಡಿ, ಉತ್ತರ ಕರ್ನಾಟಕ ಅಟೋ ಚಾಲಕರ ಮತ್ತು ಮಾಲಿಕರ ಸಂಘದ ಅಧ್ಯಕ್ಷ ರಪೀಕ್ ಬಡೇಘರ, ಕಜಾಪ ತಾಲೂಕಾಧ್ಯಕ್ಷ ಚಂದ್ರಶೇಖರ ಕೊಪ್ಪದ, ನಿವೃತ ಉಪನ್ಯಾಸಕ ಮಹಮದ್‌ಶಫಿ ಗೋವೆ, ರಾಮದುರ್ಗದ ಕಾಂಗ್ರೆಸ್ ಧುರೀಣ ಅಬ್ದುಲ್‌ಗನಿ ಮನಿಯಾರ ಆಗಮಿಸಿದ್ದರು.
ಸಾಹಿತಿ ಎಂ.ಆರ್.ಮುಲ್ಲಾ ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು. ಗ್ರಂಥ ರಚಿಸಿದ ಡಾ.ಎಚ್.ಐ.ತಿಮ್ಮಾಪೂರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು. ಮೊಹಶೀನ ಮುಲ್ಲಾ ಸ್ವಾಗತಿಸಿದರು. ಶಿಕ್ಷಕ ಸಂಗಮೇಶ ಖನ್ನಿನಾಯ್ಕರ ನಿರೂಪಿಸಿ, ವಂದಿಸಿದರು.


Leave a Reply