ವೀರಶೈವ ಲಿಂಗಾಯತರಿಗೆ ಎಂ.ಪಿ.ಟಿಕೇಟ್ ನೀಡಿ ಶ್ರೀಮತಿ ರತ್ನಪ್ರಭಾ ಬೆಲ್ಲದ ಒತ್ತಾಯ

0

ಬೆಳಗಾವಿ: ಬೆಳಗಾವಿಯಲ್ಲಿ ತೆರವಾಗಿರುವ ಎಂ.ಪಿ.ಟಿಕೆಟ್‌ನ್ನು ವೀರಶೈವ ಲಿಂಗಾಯತರಿಗೆ ನೀಡುವ ಮೂಲಕ ಲಿಂಗೈಕ್ಯ ಸುರೇಶ ಅಂಗಡಿಯವರ ಸ್ಥಾನವನ್ನು ತುಂಬುವAತಾಗಬೇಕೆAದು ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ ಅವರು ಒತ್ತಾಯಿಸಿದ್ದಾರೆ.
ಬೆಳಗಾವಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಬೆಳೆಯುತ್ತಿರುವ ಸಂದರ್ಭದಲ್ಲಿ ಬಿಜೆಪಿಯ ಪಾಳಯದಲ್ಲಿ ಈ ಕುರಿತು ಹೆಚ್ಚಿನ ತುರುಸು ಪ್ರಾರಂಭಗೊAಡಿದೆ, ರಾಷ್ಟç ಹಾಗೂ ರಾಜ್ಯ ಬಿಜೆಪಿಯ ನಾಯಕರು ಯಾವುದೇ ಪ್ರಭಾವಕ್ಕೆ ಒಳಗಾಗದೆ ವೀರಶೈವ ಹಾಗೂ ಲಿಂಗಾಯತ ಸಮಾಜದಕ್ಕೆ ನ್ಯಾಯ ಒದಗಿಸಬೇಕೆಂದು ಶ್ರೀಮತಿ ರತ್ನಪ್ರಭಾ ಬೆಲ್ಲದ ಅವರು ವಿನಂತಿಸಿದ್ದಾರೆ.
ಬೆಳಗಾವಿಯಲ್ಲಿ ಸುರೇಶ ಅಂಗಡಿಯವರು ಸಾಕಷ್ಟು ಒಳ್ಳೆಯ ಕೆಲಸಕಾರ್ಯಗಳನ್ನು ಮಾಡಿ ಜನಪ್ರೀತಿಯನ್ನು ಪಡೆದುಕೊಂಡಿದ್ದರು. ಅವರ ಅಕಾಲ ಅಗಲಿಕೆ ಜಿಲ್ಲೆಯನ್ನು ತಲ್ಲಣಗೊಳಿಸಿತು. ಈಗ ತೆರವಾಗಿರುವ ಸ್ಥಾನಕ್ಕೆ ವೀರಶೈವ ಲಿಂಗಾಯತ ಸಮುದಾಯದವರಿಗೇ ಸ್ಥಾನವನ್ನು ಕಲ್ಪಿಸಿಕೊಡುವ ಮೂಲಕ ಸಮಾಜದ ಆಶಯವನ್ನು ಉಳಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

- Advertisement -

- Advertisement -

Leave A Reply

Your email address will not be published.