BallaryBelagaviGadagkarwar uttar kannadaKoppalStatevijayapur

ಹೊಸ ರಾಷ್ಟಿಯ ಶಿಕ್ಷಣ ನೀತಿಯ ಬಹು ಶಿಸ್ತೀಯ ಪಠ್ಯಕ್ರಮ


ಬೆಳಗಾವಿ : ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ “ಹೊಸ ರಾಷ್ಟಿçಯ ಶಿಕ್ಷಣ ನೀತಿ-ಚರ್ಚಾ ಕರ‍್ಯಕ್ರಮ” ಜರುಗಿತು.
ಕರ‍್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ. ಅರುಣ ಶಹಾಪೂರ ವಿಧಾನಪರಿಷತ್ತಿನ ಸದಸ್ಯರು ವಾಯುವ್ಯ ಶಿಕ್ಷಕರ ಮತಕ್ಷೇತ್ರ ಅವರು ಆಗಮಿಸಿ ಮಾತನಾಡುತ್ತಾ, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ರಾಷ್ಟಿçಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಸಮಾಜಕ್ಕೆ ಅತೀ ಉಪಯುಕ್ತವಾಗಿದೆ.  ಹೊಸ ರಾಷ್ಟಿçಯ ಶಿಕ್ಷಣ ನೀತಿಯ ೫+೩+೩+೪ ಹಂತಗಳನ್ನು ಒಳಗೊಂಡಿದೆ.  ಶಿಕ್ಷಕರಿಗೆ ತರಬೇತಿ ನೀಡಿ, ವಿದ್ಯಾರ್ಥಿಗಳಿಗೆ ಬೋಧಿಸಲು ಅವಕಾಶ ಕಲ್ಪಿಸಲಾಗಿದೆ.  ಎಲ್ಲಾ ಹಂತಗಳಲ್ಲಿಯೂ ಶಿಕ್ಷಕರನ್ನು ತರಬೇತುಗೊಳಿಸಿ ಶಿಕ್ಷಣ ಬೋಧಿಸುವುದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ.  ಹೊಸ ರಾಷ್ಟಿçಯ ಶಿಕ್ಷಣ ನೀತಿಯು ಬಹು ಶಿಸ್ತೀಯ ಪಠ್ಯಕ್ರಮವನ್ನು ಒಳಗೊಂಡಿರುತ್ತದೆ.  ವಿದ್ಯಾರ್ಥಿಗಳು ಪ್ರಸ್ತುತ ಕಾಲಕ್ಕೆ ತಕ್ಕಂತೆ ವೈಜ್ಞಾನಿಕ ಮತ್ತು ತಾಂತ್ರಿಕ ಜ್ಞಾನಾರ್ಜನೆ ಪಡೆಯುವ ಸದಾವಕಾಶವಿದೆ ಎಂದು ನುಡಿದರು.
ಕರ‍್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ. ರಾಜಶೇಖರ ಪಟ್ಟಣಶೆಟ್ಟಿ ಅವರು ಮಾತನಾಡುತ್ತಾ, ಪದವಿ ಪೂರ್ವ ಶಿಕ್ಷಣ ನೌಕರರ ಆಶೋತ್ತರಗಳಿಗೆ ಸ್ಪಂದಿಸಿ ಶೀರ್ಘವಾಗಿ ಕಾರ್ಯಗಳನ್ನು ಮಾಡಿಕೊಡಲಾಗುತ್ತದೆ ಎಂದು ನುಡಿದರು.
ಪ್ರಾರಂಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ. ಎಸ್.ಜಿ. ನಂಜಪ್ಪನವರ ಅವರು ಸರ್ವರನ್ನು ಸ್ವಾಗತಿಸಿ, ಹೊಸ ರಾಷ್ಟಿçÃಯ ಶಿಕ್ಷಣ ನೀತಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮರಾಠಾ ಮಂಡಲ ಪಿಯು ಕಾಲೇಜಿನ ಪ್ರಾಚಾರ್ಯರಾದ ಡಾ. ಆಯ್.ಸಿ. ಸಾವಂತ ಅವರು ನೌಕರರ ಕುಂದು ಕೊರತೆಗಳನ್ನು ನಿವೇದನೆ ಮಾಡಿದರು.  ಶ್ರೀ. ಜಿಬಿ. ನಾಯ್ಕರ ಪ್ರಾಚಾರ್ಯರು ಪದವಿ ಪೂರ್ವ ಕಾಲೇಜು ಇಟಗಿ ಅವರು ವಂದಿಸಿದರು. ಶ್ರೀಮತಿ. ಅಪೂರ್ವ ಕರಿಕಟ್ಟಿ ಸ್ವಾಗತ ಗೀತೆ ಹಾಡಿದರು.  ಶ್ರೀ. ಎಸ್.ಬಿ. ಬನ್ನಿಮಟ್ಟಿ ಕರ‍್ಯಕ್ರಮ ನಿರೂಪಿಸಿದರು.  ಕಾರ್ಯಕ್ರಮದಲ್ಲಿ ಬೆಳಗಾವಿ ಪದವಿ ಪೂರ್ವ ಕಾಲೇಜುಗಳ ಸುಮಾರು ೬೫ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.


Leave a Reply