ಅತೀ ಶೀಘ್ರವೇ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಶಾಪನೆ  : ಗೋವಿಂದ ಕಾರಜೋಳ

0

ವಿಜಯಪುರ: ನಗರಸ ವಿಮಾನ ನಿಲ್ದಾಣ ಕಾಮಗಾರಿಗೆ ಸಂಕ್ರಾAತಿ ಬಳಿಕ ಅತೀ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಬಿ. ಎಸ್. ಯಡಯೂರಪ್ಪನವರಿಂದ ಶಂಕುಸ್ಥಾಪನೆಯಾಗಲಿದೆ ಎಂದು ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳರವರು ಮುಧೋಳ ಪ್ರವಾಸಿ ಮಂದಿರದಲ್ಲಿ ನಮ್ಮ ವಿಮಾನ ನಿಲ್ದಾಣ ಹೋರಾಟ ಸಮಿತಿಯು ನಿಲ್ಧಾಣದ ಶಂಕುಸ್ಥಾಪನೆಯ ಬಗ್ಗೆ ಭೇಟಿಯಾಗಲು ಹೋದಾಗ ಈ ವಿಷಯ ತಿಳಿಸಿದರು. ಟೆಂಡರ ಕೊಡುವ ಮುಂಚೆ ಅವರ ಹಿನ್ನೆಲೆ ಹಾಗೂ ಅವರ ಸಾಮರ್ಥವನ್ನು ಸರಕಾರವು ಪರಿಶೀಲಿಸಿ ಟೆಂಡರನ್ನು ನೀಡಬೇಕು, ಟೆಂಡರ ಪಡೆದು ಅರ್ಧಕ್ಕೆ ನಿಲ್ಲುವ ಕೆಲಸ ಆಗಬಾರದು ಯಾಕೆಂದರೆ ಕಳೆದ ೧೦ ವರ್ಷದ ಹಿಂದೆ ನಡೆದ ಟೆಂಡರ್ ಪ್ರಕ್ರಿಯೆ ಪುನಃ ಮರುಕಳಿಸಬಾರದು. ಇಷ್ಟು ವರ್ಷ ವಿಜಯಪುರ ಜನತೆ ವಿಮಾನ ನಿಲ್ದಾಣದಿಂದ ವಂಚಿತರಾಗಿದ್ದಾರೆ ವಿಮಾನ ನಿಲ್ದಾಣವನ್ನು ಅಧುನಿಕವಾಗಿ ಹಾಗೂ ಆಕರ್ಷಕವಾಗಿ ನಿರ್ಮಾಣವಾಗಬೇಕೆಂದು ನಮ್ಮ ಮನವಿ. ಸಮೀತಿಯ ಅಧ್ಯಕ್ಷರಾದ ಸತೀಶ ವಿಶ್ವನಾಥ ಭಾವಿ ಹಾಗೂ ಕಾರ್ಯದರ್ಶಿ ಈರಣ್ಣ ಅಳ್ಳಗಿ ಇವರು ಸಚಿವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಮ್ಮ ಸಮೀತಿಯ ಪದಾಧಿಕಾರಿಗಳಾದ ಶ್ರೀ ಈರಣ್ಣ ಅಳ್ಳಗಿ, ಸಾಗರ ಮೊಗಲಿ, ಶ್ರೀ ಬಸಯ್ಯ ಎಮ್ಮಿಮಠ, ಅಂಬಾದಾಸ ಜೋಶಿ, ಮಹೇಶ ಭಾವಿ, ಮಹೇಶ ಜಾಲವಾದಿ ಇನ್ನಿತರರು ಉಪಸ್ಥಿತರಿದ್ದರು

- Advertisement -

- Advertisement -

Leave A Reply

Your email address will not be published.