vijayapur

ಕೋವಿಡ್-೧೯ ಲಸಿಕೆ ಪೂರ್ವಾಭ್ಯಾಸ ಶಾಂತಿಯುತವಾಗಿ ಯಶಸ್ವಿ: ಲ್ಲಾಧಿಕಾರಿ ಪಿ. ಸುನೀಲ್ ಕುಮಾರ್


ವಿಜಯಪುರ ಜ.೯: ಜಿಲ್ಲೆಯ ೧೫೩೧೮ ಆರೋಗ್ಯ ಕಾರ್ಯಕರ್ತರಿಗೆ ಪ್ರಥಮ ಹಂತದಲ್ಲಿ ನೀಡಲು ಉದ್ದೇಶಿಸಲಾಗಿರುವ ಕೋವಿಡ್-೧೯ ಲಸಿಕೆಯ ಪೂರ್ವಾಭ್ಯಾಸ ಶಾಂತಿಯುತ ಮತ್ತು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿAದು ಪತ್ರಿಕಾಗೋಷ್ಠಿ ನಡೆಸಿದ ಅವರು ಜಿಲ್ಲೆಯ ಖಾಸಗಿ, ೮೯೧೦ ಹಾಗೂ ಸರ್ಕಾರಿ, ೬೪೦೮ ಸೇರಿದಂತೆ ಒಟ್ಟು ೧೫೩೧೮ ಆರೋಗ್ಯ ಕಾರ್ಯಕರ್ತರಿಗೆ ಪ್ರಥಮ ಹಂತದಲ್ಲಿ ನೀಡಲು ಉದ್ದೇಶಿಸಲಾಗಿರುವ ಕೋವಿಡ್-೧೯ ಲಸಿಕೆ ಪೂರ್ವಾಭ್ಯಾಸ ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದ್ದು, ೯೭ ಕೋಲ್ಡ್ಚೈನ್, ಪಾಯಿಂಟ್ಸ್ಳನ್ನು ಗುರುತಿಸಲಾಗಿದ್ದು ೧೦ ಂಇಈI ಮ್ಯಾನೇಜ್ಮೆಂಟ್ ಕೇಂದ್ರಗಳನ್ನು ಸಹ ಗೊತ್ತುಪಡಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಖಾಸಗಿ ಮತ್ತು ಸರಕಾರಿ ೧೧೩ ಲಸಿಕಾ ಸ್ಥಳಗಳನ್ನು ಗುರುತಿಸಲಾಗಿದ್ದು, ಪ್ರತಿ ಲಸಿಕಾ ಕೇಂದ್ರದಲ್ಲಿ ಚುನಾವಣೆ ಮಾದರಿಯಲ್ಲಿ ೫ ಜನ ಸಿಬ್ಬಂದಿ, ಕೋ-ವಿನ್ ತಂತ್ರಾAಶದಲ್ಲಿ ನೊಂದಣಿ, ಲಸಿಕೆ ನಂತರದಲ್ಲಿ ಆಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಅಬ್ಸರ್ವೇಷನ್ ಕೊಠಡಿ ಸ್ಥಾಪಿಸಿ ಪರಿಶೀಲನೆ ಮತ್ತು ಮುಂದಿನ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪೂರ್ವಾಭ್ಯಾಸ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಹೇಳಿದರು.
ಹಂತ-೨ ಮತ್ತು ಹಂತ ೩ ರಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸುವುದು, ಸರಕಾರದ ನಿಯಮ ಮತ್ತು ನಿರ್ದೇಶನಗಳ ಅನ್ವಯ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಕೋವಿಡ್ ೧೯ ಲಸಿಕೆ ಲಭ್ಯವಾದ ತಕ್ಷಣ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಗರ ಮತ್ತು ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಗಂಟಲು ದ್ರವ ಪಡೆಯುವ ವ್ಯವಸ್ಥೆ ಕಲ್ಪಿಸುವ ಮೂಲಕ ಒಂದೇ ಕಡೆ ಆಗುವಂತಹ ಒತ್ತಡ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿ ಕಳೆದ ೧೫ ದಿನಗಳಲ್ಲಿ ಖಖಿ-Pಅಖ ಗಂಟಲು ದ್ರವ ಮಾದರಿ ಸಂಗ್ರಹಣೆಯಲ್ಲಿ ಶೇ.೧೨೦ ರಷ್ಟು ಸಾಧನೆ ಮಾಡಲಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಇತ್ತೀಚೆಗೆ ಸಂಬAವಿಸಿದ ಪ್ರವಾಹ ಸಂದರ್ಭದಲ್ಲಿ ಜೀವಹಾನಿಯಾದ ೧೪ ಜನ ಕುಟುಂಬಸ್ಥರಿಗೆ ತಲಾ ೫ ಲಕ್ಷ ರೂ, ಗಳಂತೆ ಪರಿಹಾರ ಮತ್ತು ಜಾನುವಾರು ಹಾನಿಗೆ ಹಾಗೂ ಮನೆ ಹಾನಿಗೆ ಸಂಬAಧಪಟ್ಟAತೆ ಪರಿಹಾರ ವಿತರಿಸಲಾಗಿದೆ. ಕೃಷಿ ಹಾಗೂ ತೋಟಗಾರಿಕಾ ಬೆಳೆ ಹಾನಿಗೆ ಸಂಬAಧಪಟ್ಟAತೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ೧೬೫ ತೊಗರಿ ಖರೀದಿ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದ್ದು ೬೬,೩೩೨ ರೈತರು ನೋಂದಣಿ ಮಾಡಲಾಗಿದ್ದು. ಅದರಂತೆ ಹಕ್ಕಿಜ್ವರ ಕೇರಳದಲ್ಲಿ ಕಂಡುಬAದಿದ್ದು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಆದಾಗಿಯೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಆಮದು ಆಗಬಹುದಾದ ಕೋಳಿ ಉತ್ಪನ್ನಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ತಂಡಗಳನ್ನು ಸಹ ರಚಿಸಲಾಗಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಖಖಖಿ “ರಾಪಿಡ್ ರೆಸ್ಪಾನ್ಸ್ ಟೀಮ್” ಸನ್ನದುಗೊಳಿಸಿ ತರಬೇತಿ ನೀಡಲಾಗಿದೆ. ವಲಸೆ ಪಕ್ಷಿಗಳ ,ಜಲಸಂಪನ್ಮೂಲಗಳ ಸ್ಥಳ, ವ್ಯಾಪ್ತಿಯಲ್ಲಿ ಪಕ್ಷಿಗಳ ಸಾವು, ಕಂಡುಬAದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ . ಇಂತಹ ಯಾವುದೇ ಪ್ರಕರಣಗಳು ಈವರೆಗೆ ಕಂಡುಬAದಿಲ್ಲ. ಪ್ರತಿದಿನ ತೀವ್ರ ನಿಗಾ ಇಡಲಾಗಿದೆ ಎಂದು ಅವರು ಹೇಳಿದರು.
ಹಲಸಂಗಿ ಗೆಳೆಯರ ಬಳಗ ಪ್ರತಿಷ್ಠಾನ ವ್ಯಾಪ್ತಿಯಲ್ಲಿ ಕಾವ್ಯ ಮತ್ತು ಶೋಧನೆ ಹಾಗೂ ಜಾನಪದ ಸಾಹಿತ್ಯ ಪ್ರಶಸ್ತಿ ಗಳ ಪಾರದರ್ಶಕ ಆಯ್ಕೆಗೆ ವಿಶೇಷ ಗಮನ ನೀಡುವ ನಿಟ್ಟಿನಲ್ಲಿ ಮುಂಬರುವ ವರ್ಷದಿಂದ ವಿಜಯಪುರ ಜಿಲ್ಲೆಯಲ್ಲಿ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲಾಗುವ ಚಿಂತನೆ ಹೊಂದಲಾಗಿದೆ ಎಂದು ಅವರು ಹೇಳಿದರು.
ವಿಜಯಪುರ ನಗರದ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ನಗರದ ೯ ಕೆಟ್ಟಿರುವ ರಸ್ತೆಗಳ ಗುಂಡಿ ಮುಚ್ಚಿ ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳ ನಗರ ವಿಕಾಸ ಯೋಜನೆ ಅಡಿ ೪೫ ಕೋಟಿ ರೂಗಳ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ೧೫ ಕೋಟಿ ರೂಗಳ ಕಾಮಗಾರಿ ಟೆಂಡರ್ ಕರೆಯಲಾಗಿದೆ. ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ ಅಡಿ ಸರ್ಕಾರಕ್ಕೆ ಕಳಿಸಿದೆ. ೧೪ನೇ ಹಣಕಾಸು ಯೋಜನೆಯಡಿಯ ಅಂದಾಜು ೮ ಕೋಟಿ ರೂಗಳ ಅನುದಾನ ನ್ಯಾಯಾಲಯ ನಿರ್ದೇಶನ ಅನ್ವಯ ಬ್ಲಾಕ್ ಆಗಿದ್ದು ಇದರ ಕ್ಲಿಯರನ್ಸಗೆ ನ್ಯಾಯಾಲಯ ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಖುರನಾಪುರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣಕ್ಕೆ ಸಂಬAಧಿಸಿದAತೆ ಪ್ರಥಮ ಹಂತದ ಕಾಮಗಾರಿಗೆ ಟೆಂಡರ್ ನಿಗದಿಯಾಗಿದ್ದು ನಿಲ್ದಾಣದ ಭೂಮಿಪೂಜೆ ಮಾನ್ಯ ಮುಖ್ಯ ಮಂತ್ರಿಗಳಿAದ ದಿನಾಂಕ ನಿಗದಿಯ ಬಗ್ಗೆ ನಿರೀಕ್ಷೆಯಲ್ಲಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಅಭಿವೃದ್ಧಿ ಮತ್ತು ಸುಧಾರಣೆಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಅವಶ್ಯಕ ಮಾಹಿತಿ ನೀಡಿದರು.


Leave a Reply