Belagavi

ಜ.17 ರಂದು “ಮೌಡ್ಯದ ಮರೆಯಲಿ” ಚಿತ್ರ ಉದ್ಘಾಟನೆ ಮತ್ತು ಪ್ರದರ್ಶನ


8ಬೆಳಗಾವಿ : ರೀತಿ ನೀತಿಯ ಹೆಸರಲ್ಲಿ ಕುಡಿಯುವ ನೀರಿಗೂ ಜಾತಿಯತೆ ಮಾಡುವ ಮನಸ್ಸುಗಳ ವಿರುದ್ಧದ ಹೋರಾಟದ ಕಥೆ. ಸಮಾನತೆಗಾಗಿ ಒಂದು ಸಮೂಹದ ಪರದಾಟವನ್ನು ತೋರಿಸುವ ಚಿತ್ರ “ಮೌಡ್ಯದ ಮರೆಯಲಿ”

ಸಂಪ್ರದಾಯದ ಹೆಸರಿನಲ್ಲಿ ತಾರತಮ್ಯತೆ ಮಾಡುವ ಒಂದು ಗ್ರಾಮದಲ್ಲಿ ಮೂಲಭೂತವಾಗಿ ಸಿಗುವ ಕುಡಿಯುವ ನೀರಿಗೂ ಯಾವ ರೀತಿ ಹೋರಾಟವಾಗುತ್ತದೆ ಎನ್ನುವುದನ್ನು ಚಿತ್ರಪೂರ್ತಿ ವಿಮರ್ಶಾತ್ಮಕವಾಗಿ ತೋರಿಸಲಾಗಿದೆ ಇನ್ನು ಸಿನೇಮಾದಲ್ಲಿ ಪ್ರೀತಿ, ಪ್ರೇಮ, ಸ್ನೇಹ ಮತ್ತು ಹಾಡುಗಳು ವೀಕ್ಷಕರನ್ನು ಸೆಳೆಯುತ್ತವೆ ಒಟ್ಟಿನಲ್ಲಿ ಒಂದು ಸ್ಯಾಂಡಲ್ ವುಡ್ ಚಿತ್ರಕ್ಕೆ ಸಮನಾಗಿ “ಮೌಡ್ಯದ ಮರೆಯಲಿ ಚಿತ್ರ” ಕಲಾತ್ಮಕ ಚಿತ್ರ ಇಲ್ಲಿದೆ.

ಪ್ರಕಾಶ ಕುರಗುಂದ ಅವರು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದಾರೆ. ಶ್ರೀ ಪರಮಾನಂದ ಪ್ರೊಡಕ್ಷನ್ಸ್ ವತಿಯಿಂದ ಈ ಮೌಡ್ಯದ ಮರೆಯಲಿ ಕಲಾತ್ಮಕ ಚಿತ್ರವನ್ನು ಜ.17 ರಂದು ಸಾಯಂಕಾಲ 4 ಗಂಟೆಗೆ ಬೆಳಗಾವಿಯ ಕುಮಾರ ಗಂದರ್ವ ಸಭಾಭವನದಲ್ಲಿ ಉದ್ಘಾಟನೆ ಮತ್ತು ಪ್ರದರ್ಶನ ಮಾಡಲಾಗುತ್ತಿದ್ದು, ಪ್ರವೇಶ ದರ 100 ರೂಪಾಯಿ ಇರುತ್ತದೆ. ತಮ್ಮೆಲ್ಲರಿಗೂ ಹೃದಯ ಪೂರ್ವಕ ಸ್ವಾಗತ.


Leave a Reply