Belagavi

ಮೂಡಲಗಿ ತಾಲೂಕ ಲಿಂಗಾಯತ ಕಂಬಾರ-ಬಡಿಗೇರ ಕ್ಷೇಮಾಭಿವೃದ್ಧಿ ಸಂಘ


ಮೂಡಲಗಿ: ಅಖಿಲ ಕರ್ನಾಟಕ ಲಿಂಗಾಯತ ಕಂಬಾರ-ಬಡಿಗೇರ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಆಶ್ರಯದಲ್ಲಿ ಮೂಡಲಗಿ ತಾಲೂಕ ಘಟಕ ಉದ್ಘಾಟನಾ ಸಮಾರಂಭ ಪಟ್ಟಣದ ಲಕ್ಷಿö್ಮÃ ನಗರದ ಕರೇಮ್ಮಾ ದೇವಿ ದೇವಸ್ಥಾನದಲ್ಲಿ ಜರುಗಿತು.
ಸಮಾರಂಭದ ಸಾನಿಧ್ಯ ವಹಿಸಿದ ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿಗಳು ಮಾತನಾಡಿ, ಮೂಡಲಗಿ ತಾಲೂಕ ಸಂಘವನ್ನು ಪ್ರಾರಂಭಿಸಿರುವುದು ಶಾಘನೀಯವಾದ್ದು, ಸಂಘಟಕರು ಆರಂಭ ಶೂರರಾಗದೆ ಆರಾದ್ಯರಾದರೇ ಸಂಘ ಸ್ಥಾಪಸಿರುವುದಕ್ಕೆ ಸಾರ್ಥಕತೆಯಾಗುತ್ತದೆ, ಸಂಘಟಕರು ಎಲ್ಲ ಸಮಾಜದವರೊಂದಿಗೆ ಉತ್ತಮ ಬಾಂದ್ಯವ ಹೊಂದಿ ಸಮಾಜದ ಕಡುಬಡವರಿಗೆ ಸಹಾಯ ಸಹಕಾರ ನೀಡಿ ಅವರ ಅಭಿವೃದ್ಧಿಗೆ ದುಡಿಯಬೇಕು ಎಂದರು.
ಸAಘದಿAದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಪ್ರೋತ್ಸಹ ನೀಡಿ ಅವರ ಒಬ್ಬ ಒಳ್ಳೆಯ ವಿದ್ಯಾರ್ಥಿಯನಾಗಿ ಮಾಡುವಂತ ಕೆಲಸವಾಗಬೇಕು, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಕಂಬಾರ-ಬಡಿಗೇರರು ಅವಶ್ಯವಾಗಿದ್ದಾರೆ ಆದರೆ ಸಂಘವನ್ನು ಕಟ್ಟಿ ಕೆಲಸ ಮಾಡಬೇಕಾದರೇ ನಾನು, ನನ್ನಿಂದ ಎಂಬಾನೆ ಮತ್ತು ಅಧಿಕಾರದ ಆಸೆಯ ಸ್ವಾರ್ಥವನ್ನು ಸಂಘಟನೆಯಿAದ ಹೊರಗಿಟ್ಟರೆ ಮಾತ್ರ ಸಂಘ ಹೆಮ್ಮರವಾಗಿ ಬೆಳೆಯಲು ಸಾಧ್ಯ ಎಂದರು.
ಸ್ಥಳೀಯ ನ್ಯಾಯವಾದಿ ಎಂ.ಆಯ್.ಬಡಿಗೇರ ಮಾತನಡಿ, ದೇಶದ ಬೆನ್ನೇಲಬು ರೈತರಿಗೆ ಆಶ್ರಯವಾಗಿರುವಂತ ಸಮಾಜ ಆ ರೈತರ ಆಶ್ರಯದಲ್ಲಿ ಬೆಳೆದ ನಮ್ಮ ಸಮಾಜವನ್ನು ಸರಕಾರ ಮಟ್ಟದಲ್ಲಿ ತೋರಿಸಿಕೊಳ್ಳಬೇಳಬೇಕು ಮತ್ತು ಸಮಜಕ್ಕೆ ಹಿತವನ್ನು ಬಯಸುವ ಒಂದು ಸಂಘ ನಿರ್ಮಾಣವಾಗಿದೆ ಎಂದರು.
ಸAಘಟನೆಯ ರಾಜ್ಯಧ್ಯಕ್ಷ ಎಂ.ಎಸ್.ಬಡಿಗೇರ, ಈಶ್ವರ ಕಂಬಾರ, ಡಾ.ಅನೀಲ ಪಾಟೀಲ ಮತ್ತಿತರು ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಶಿವಾನಂದ ಶ್ರೀಗಳು ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿ ವಿತರಿಸಿ ಆಶಿರ್ವದಿಸಿದರು. ಸಮಾರಂಭದಲ್ಲಿ ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ಡಾ.ಎಸ್.ಆಯ್.ಬಡಿಗೇರ, ಹಿಂದೂಳಿದ ವರ್ಗಗಳ ಮತ್ತು ಅಲ್ಪಸಂಖ್ಯಾರ ಇಲಾಖೆಯ ನಿವೃತ ಅಧಿಕಾರಿ ಬಸವರಾಜ ಕಂಬಾರ. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರಬಸು ಕಂಬಾರ, ಮೂಡಲಗಿ ತಾಲೂಕಾಧ್ಯಕ್ಷ ಸಿದ್ದೇಶ್ವರ ಬಡಿಗೇರ, ಉಪಾಧ್ಯಕ್ಷ ಸಿದ್ದಾರೂಢ ಬಡಿಗೇರ, ಕಾರ್ಯದರ್ಶಿ ಶಿವಾನಂದ ಬಡಿಗೇರ, ಮೂಡಲಗಿ ಸಹಕಾರಿ ಬ್ಯಾಂಕಿನ ನಿರ್ದೇಶಕ ರುದ್ರಪ್ಪ ವಾಲಿ, ಅನ್ವರ ನದಾಪ್ ಮತ್ತು ಸಂಘಟೆಯ ಪದಾಧಿಕಾರಿಗಳು ಹಾಗೂ ವಿವಿಧ ಜಿಲ್ಲೆಯ ತಾಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕ ಬಸವರಾಜ ಸಸಾಲಟ್ಟಿ ಮತ್ತು ಸಿದ್ಧೇಶ ಕಂಬಾರ ನಿರೂಪಿಸಿದರು, ಬಸವರಾಜ ಬಡಿಗೇರ ಸ್ವಾತಿಸಿದರು. ಈರಣ್ಣಾ ಕಂಬಾರ ವಂದಿಸಿದರು.


Leave a Reply