BallaryBelagaviGadagkarwar uttar kannadaKoppalStatevijayapur

ಅವಶ್ಯಕತೆ ಇರುವುದನ್ನು ಪೂರೈಸುವ ಬರವಣಿಗೆ ಜಾತಿವಾದಿಯಲ್ಲ- ಸಾಹಿತಿ ರಾಘವೇಂದ್ರ ಪಾಟೀಲ


ಶಿರಸಂಗಿ: ಅವಶ್ಯಕತೆ ಇರುವುದನ್ನು ಪೂರೈಸುವ ಬರವಣಿಗೆ ಜಾತಿವಾದಿಯಲ್ಲ,ಪ್ರಾಮಾಣಿಕ ಅನುಭವದ ಬರವಣಿಗೆ ಮುಖ್ಯ ಎಂದು ನಾಡಿನ ಹಿರಿಯ ಸಾಹಿತಿಗಳಾದ ರಾಘವೇಂದ್ರ ಪಾಟೀಲ ನುಡಿದರು.
ಅವರು ಮಯ ಪ್ರಕಾಶನ ಕವiಲಾಪುರ(ಬೆಣ್ಣೂರ) ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಹಾಗೂ ಸಂಶೋಧಕರ ವೇದಿಕೆ ಮತ್ತು ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ(ರಿ) ಶಿರಸಂಗಿ. ಉತ್ತರ ಕರ್ನಾಟಕ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ(ರಿ) ಬೆಂಗಳೂರ ಇವರ ಸಹಯೋಗದಲ್ಲಿ ವಿಶ್ವಕರ್ಮರ ಶಕ್ತಿಪೀಠವಾದ ಶಿರಸಂಗಿಯ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಯುವ ಬರಹಗಾರರಿಗಾಗಿ 2ದಿನದ ರಾಜ್ಯ ಮಟ್ಟದ ಕಾವ್ಯ ಕಥಾ ಕಮ್ಮಟವನ್ನು ಜ್ಯೋತಿ ಬೇಳಗಿಸುವ ಮೂಲಕ ಉಧ್ಘಾಟನೆ ಮಾಡಿ ಮಾತನಾಡಿದರು.
ಸಮಕಾಲಿನ ಸಾಹಿತ್ಯವೂ ಮಾನವ ಬದುಕಿನÀ ಅನುಭವ ಕಟ್ಟಿಕೊಡುವ ಮೂಲಕ ಸಮಾಜ ಸಮುದಾಯ ಸಂಸ್ಮ್ಕøತಿಯನ್ನು ಅರ್ಥೈಸುವ ಕಾರ್ಯವನ್ನು ಮಾಡಬೇಕಿದೆ, ಹೀಗಾಗಿ ಮನುಷ್ಯ ಮತ್ತು ಸಮುದಾಯಗಳಿಗೆ ಅವಶ್ಯಕತೆ ಪೂರೈಸುವ ಬರವಣಿಗೆ ಜಾತಿವಾದಿಯಾಗುವದಿಲ್ಲಾ,
ಆದರೆ ಬೆರೆ ಜಾತಿಗಳನ್ನು ನಿಂದಿಸುವುದು ತಪ್ಪು, ಜಾತಿವಾದದ ನಿಜವಾದ ಸ್ವರೂಪ ಬದಲಾವಣೆಯಾಗುತ್ತಿರುವದು ಕಳವಳದ ಸಂಗತಿ ಯಾಗಿದೆ, ಇದನ್ನು ಯುವ ಬರಹಗಾರರು ಎಚ್ಚರಿಕೆಯಿಂದ ಅವಲೋಕಿಸಬೇಕಾಗಿದೆ. ಇಂದು ಸಾಹಿತ್ಯದಲ್ಲಿ ಸಂವೇದನಾಶೀಲತೆ ಮಾಯವಾಗಿ ಶೂನ್ಯತೆ ಆವರಿಸುತ್ತಿದೆ ಎಂದರು.
ಸಮುದಾಯಗಳು ಯುವ ಸಾಹಿತಿ ಮತ್ತು ಬರಹಗಾರರಿಗೆ ಸ್ಪೂರ್ತಿನೀಡಿ ತರಬೇತಿ ನಿಡುವುದು ಜಾತಿವಾದವಲ್ಲ.ಅದು ತನ್ನ ಅಸ್ಮಿತೆಯ ಹುಡುಕಾಟವಾಗಿದೆ ಹಿಗಾಗಿ ಡಾ,ವೀರೇಶ ಬಡಿಗೇರ ಅವರು ಮಾಡುತ್ತಿರುವ ಈ ಕಮ್ಮಟ ಶ್ಲಾಘನೀಯ ಎಂದರು.
ಕಮ್ಮಟದಲ್ಲಿ ವಿಶ್ವನಾಥ ಎಸ್ ಪತ್ತಾರ ಅವರುÀ ಸಂಪಾದಿಸಿದ “ಕುಂದಣ”, ಡಾ, ಕೆ,ಅನಂತರಾಮು ಅವರ “ನಾಗಲಿಂಗನ ದಿವ್ಯದಾಮಗಳು” ಪ್ರೋ.ಗುರುನಾಥ ಎಂ ಬಡಿಗೇರ ಅವರ “ಸ್ವರಾಂಕ” ಪುಸ್ತಕಗಳನ್ನು ಹಾಗೂ ಶ್ರೀಶೈಲ ಬಡಿಗೇರ ಅವರು ತಯಾರಿಸಿದ ಒಂದು ಕೋಟಿ ವರ್ಷದ ಕ್ಯಾಲೇಂಡರನ್ನು
ಕೇಂದ್ರ ಸಾಹಿತ್ಯ ಅಕಾಡಮಿಯ ಸದಸ್ಯರಾದ ಡಾ,ಬಾಳಾಸಾಹೇಬ ಲೋಕಾಪುರ ಬಿಡುಗಡೆ ಮಾಡಿ ಮಾತನಾಡಿದ ಅವರು ಕಾವ್ಯವೆನ್ನುವುದು ನಿತ್ಯ ಹೊಸತನವನ್ನು ತೋರಿಸುವುದಾಗಿದ್ದು ಏನು ಬರೆದೆ, ಯಾಕೆ ಬರೆದೆ, ಹೇಗೆ ಬರೆದೆ ಎಂಬ ವಿಚಾರಗಳನ್ನು ಕವಿಯಾದವನು ತಿಳಿದಿರಬೇಕು, ಸೃಜನಶೀಲ ಬರಹಗಾರರಿಗೆ ನಂಬಿಕೆ ಮತ್ತು ಸಂವೇಧನಾಶೀಲತೆ ಅವಶ್ಯವಾಗಿದ್ದು, ಆಯಾ ಕಾಲಘಟ್ಟದ ವಸ್ತುಗಳನ್ನು ಅಬಿವ್ಯೆಕ್ತಗೊಳಿಸಬೇಕು,
ಬಾಗಲಕೋಟೆಯ ಸಾಹಿತಿ ಜೀವಣ್ಣ ಮಸಳಿಯವರು ಬರೆದÀ ಮಹಾಮನು ಅತ್ಯಂತ ಅತ್ಯುತ್ತಮ ಕಾದಂಬರಿ, ಅವರು ವಿಶ್ವಕರ್ಮರ ಸಿದ್ದಾಂತಗಳ ಚರಿತ್ರೆಯನ್ನು ಕಟ್ಟಿಕೊಡಲು ಅವರು ತಮ್ಮ ಬರಹಗಳನ್ನು ಸಂಶೋಧನಾ ರೂಪದಲ್ಲಿ ಹೊರತಂದರು, ಅವರ ಕೊಡುಗೆ ಅಪಾರ, ಹೀಗಾಗಿ ಯುವ ಬರಹಗಾರರು ಸೂಕ್ಷ್ಮ ಸಂವೇದನೆಯನ್ನು ರೂಡಿಸಿಕೊಳ್ಳಿ ಎಂದರು.
ಕಮ್ಮಟದ ಅಧ್ಯಕ್ಷತೆನ್ನು ವಹಿಸಿ ಮಾತನಾಡಿದ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅದ್ಯಕ್ಷರಾದ ಪ್ರೊ, ಪಿ.ಬಿ.ಬಡಿಗೇರ, ವಿಶ್ವಕರ್ಮ ಸಮಾಜದ ಅಸ್ಮಿತೆ ಬೆಳಕಿಗೆ ತರುವ ಕೆಲಸವನ್ನು ಡಾ.ವೀರೇಶ ಬಡಿಗೇರ ಅವರು ಮಾಡುತ್ತಿದ್ದಾರೆ, ಮುಂದೆ ಅಖಿಲ ಭಾರತ ವಿಶ್ವಕರ್ಮ ಸಾಹಿತ್ಯ ಸಾಂಸ್ಕøತಿಕ ಸಮ್ಮೇಳನ ಮಾಡುವ ಸಂಕಲ್ಪವನ್ನು ನಾವೆಲ್ಲಾ ಮಾಡಬೇಕಿದೆ ಎಂದರು.
ದಿವ್ಯಸಾನಿದ್ಯ ವಹಿಸಿ ಆಶೀರ್ವಚನ ನೀಡಿದ ನವಲಗುಂದÀ ನಾಗಲಿಂದಸ್ವಾಮೀ ಮಠದ ಪರಮಪೂಜ್ಯ ಶ್ರೀ ವೀರೇಂದ್ರಸ್ವಾಮಿಗಳು ಸಾಂಸ್ಕøತಿಕವಾಗಿ ಇಂಥ ಕಮ್ಮಟಗಳು ಮೆಲಿಂದ ಮೆಲೆ ನಡೆಸುವದರ ಮೂಲಕ ವಿಶ್ವಕರ್ಮ ಸಮುದಾಯ ಜಾಗೃತಗೊಳ್ಳಬೇಕು ಎಂದರು.
ಕಾರ್ಯಕರಮದಲ್ಲಿ ವೇದಿಕೆ ಮೆಲೆ ಕಾವ್ಯ ಮತ್ತು ಕಥಾ ಕಮ್ಮಟದ ನಿರ್ದೇಶಕರಾದ ಡಾ. ವೀರೇಶ ಬಡಿಗೇರ, ಅತಿಥಿಗಳಾಗಿ ಚಂದ್ರಶೇಖರ ಆರ,ವೇದಪಾಠಕ,ಅರವಿಂದ ಪತ್ತಾರ ಉಪಸ್ಥಿತರಿದ್ದರು.
ಕಮ್ಮಟದ ಸಂಚಾಲಕರಾದ ಮನು ಪತ್ತಾರ ಕಲಕೇರಿ ಪ್ರಸ್ತಾವಿಕ ಮಾತನಾಡಿದರು, ಮಾನಪ್ಪ ಬಡಿಗೇರ ಹಾಗೂ ಪಕೀರಪ್ಪ ಬಡಿಗೇರ ಅವರು ಪ್ರಾರ್ಥನೆ ಮಾಡಿದರೆ ಶ್ರೀಶೈಲ ಬಡಿಗೇರ ವಂದಿಸಿದರು. ಎರಡು ದಿನಗಳ ನಡೆಯವು ಕಮ್ಮಟದಲ್ಲಿ ವಿವಿದ ಜಿಲ್ಲೆಗಳಿಂದ 100ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಘೊಂಡಿದ್ದಾರೆ.


Leave a Reply