BallaryBelagaviGadagkarwar uttar kannadaKoppalState

ಬರಹ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಸಮುದಾಯಗಳ ಅಸ್ಮಿತೆಯ ಪ್ರತಿಕ


ಶಿರಸಂಗಿ: ಬರಹ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಸಮುದಾಯಗಳ ಅಸ್ಮಿತೆಯ ಪ್ರತಿಕವಾಗಿದವೆ ಎಂದು ದಾರವಾಡ ಆಕಾಶವಾಣಿ ನಿರ್ದೇಶಕರಾದ ಡಾ,ಬಸು ಬೆವಿನಗಿಡದ ಹೇಳಿದರು.
ಅವರು ಮಯ ಪ್ರಕಾಶನ ಕವiಲಾಪುರ(ಬೆಣ್ಣೂರ) ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಹಾಗೂ ಸಂಶೋಧಕರ ವೇದಿಕೆ ಮತ್ತು ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ(ರಿ) ಶಿರಸಂಗಿ. ಉತ್ತರ ಕರ್ನಾಟಕ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ(ರಿ) ಬೆಂಗಳೂರ ಇವರ ಸಹಯೋಗದಲ್ಲಿ ವಿಶ್ವಕರ್ಮರ ಶಕ್ತಿಪೀಠವಾದ ಶಿರಸಂಗಿಯ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ನಡೆದ ವಿಶ್ವಕರ್ಮ ಯುವ ಬರಹಗಾರರಿಗಾಗಿ 2ದಿನದ ರಾಜ್ಯ ಮಟ್ಟದ ಕಾವ್ಯ ಕಥಾ ಕಮ್ಮಟದÀ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
ಸೃಜನಶೀಲ ಬರಹ ಕಾಲದ ಜೊತೆಗೆ ನಡೆಯುವ ಸ್ಪರ್ಧೆಯಂತಿದ್ದು, ಕಚ್ಚಾ ಸಾಮಗ್ರಿಗಳ ಸಂಗ್ರಹದ ಶುದ್ಧಿಕರಿಸುವ ಕೆಲಸ ಯುವ ಬರಹಗಾರರದಾಗಬೇಕು. ನಾವೇಲ್ಲಾ ಪ್ರೀತಿಯ ಜಾತಿಗಾರರು ಇಲ್ಲಿ ವಿಚಾರಗಳ ಸಂಗಮ ಸಂವೇದನಾಶೀಲದ ಅನುಭವ ಅನಾವರಣವಾಗಬೇಕು, ಈ ಕಮ್ಮಟಗಳು ಕ್ರೀಯಾಶೀಲತೆಯನ್ನು ಬೆಳೆಸುತ್ತವೆ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕರ್ನಾಟಕ ಶಿಲ್ಪಕಲಾ ಅಕಾಡಮಿಯ ಅಧ್ಯಕ್ಷರಾದ ವೀರಣ್ಣ ಅರ್ಕಸಾಲಿವರು ಮಾತನಾಡಿ ಜ್ಞಾನದ ಹಸಿವು ನಿಗಿಸುವ ಶಕ್ತಿ ಬರಹಕ್ಕೆ ಮಾತ್ರ ಇದೆ ಎಂದರು. ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷರಾದ ಪ್ರೊ ಪಿ.ಬಿ.ಬಡಿಗೇರ ಅವರು ಮಾತನಾಡಿ ಸಮಾಜ ಏಳಿಗೆಗಾಗಿ ಸದಾ ಸಿದ್ದರಿದ್ದೆವೆ ಎಂದರು.
ಸಮಾರಂಭದ ಅಧ್ಯಕ್ಷತೆವನ್ನು ವಹಿಸಿಮಾತನಾಡಿದ ಕಮ್ಮಟದ ನಿರ್ದೇಶಕರಾದ ಡಾ.ವೀರೇಶ ಬಡಿಗೇರ ಮಾತನಾಡಿ ಸಮುದಾಯದ ಯುವ ಮನಸ್ಸುಗಳಿಗೆ ಚೈತನ್ಯ ತುಂಬುವ ಕಾರ್ಯಗಳಾಗಬೇಕಾಗಿವೆ, ವಿಶ್ವಕರ್ಮರು ಜಾತಿವಾದಿಗಳಲ್ಲ ಎಲ್ಲ ಸಮುದಾಂiÀiಗಳ ಜೊತೆ ಬೆರೆತವರು, ವಿಶ್ವಕರ್ಮ ಸಮುದಾಯದಲ್ಲಿ ಅತಿಯಾದ ಸ್ವಾಭಿಮಾನ ಇಂದು ನಮಗೆ ಮುಳುವಾಗಿದೆ. ನಮ್ಮೊಳಗಿನ ಮಾನಸಿಕ ವ್ಯವಸ್ಥೆಯನ್ನು ಸರಿಪಡಿಸಿಕೊಂಡು ಎಲ್ಲ ಬಿಗುಮಾನಗಳನ್ನು ಬಿಟ್ಟು ಜೋತೆಗುಡಿ ಕೆಲಸ ಮಾಡುವ ಕಾರ್ಯದ ಜವಾಬ್ದಾರಿ ಸಮುದಾಯದ ಮುಂದೆ ಇದೆ. ಅಲ್ಲದೆ ಇಂದು ವ್ಯಕ್ತಿಗತ ಸಂಘಟನೆಗಿಂತ ಸಮಾಜಮುಖಿ ಸಂಘಟನೆಯ ಅವಶ್ಯಕತೆ ಇದೆ ಎಂದರು.
ಬಸವಾಜ ಬಡಿಗೇರ ಬೋರಗಿ ಪ್ರಾರ್ಥಿಸಿದರೆ, ಚಂದ್ರಶೇಖರ ಕಾಳನ್ನವರ ಸ್ವಾಗತಿಸಿದರು.
ಕಾರ್ಯಕರಮದಲ್ಲಿ ಚಂದ್ರಶೇಖರ ಆರ,ವೇದಪಾಠಕ,ಅರವಿಂದ ಪತ್ತಾರ. ಶ್ರೀಕಾಂತ ಪತ್ತಾರ. ಸಿ.ಪಿ ಮಾಯಾಚಾರಿ.ವಿರುಪಾಕ್ಷ ಬಡಿಗೇರ.ಬೀಮಶೇನ ಬಡಿಗೇರ.ಹನಮಂತಗೌಡ ಕಲ್ಮನಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಸರ್ವ ಸದಸ್ಯರು ಹಾಗೂ ಕಮ್ಮಟದ ಸಂಚಾಲಕರಾದ ಮನು ಪತ್ತಾರ ಪತ್ತಾರ.ಪ್ರಹ್ಲಾದ ಪತ್ತಾರ.ಅರುಣಕುಮಾರ .ವಿಶ್ವನಾಥ ಪತ್ತಾರ. ಸಂಗಮೇಶ ಬಡಿಗೇರ ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.


Leave a Reply