Belagavi

ರೈನಾಪೂರ ಪ್ರತ್ಯೇಕ ಗ್ರಾಮ ಪಂಚಾಯತಿಗೆ ಅಗ್ರಹ


ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ರೈನಾಪೂರ ಗ್ರಾಮವನ್ನು ಸೊಪ್ಪಡ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಕೈಬಿಟ್ಟು ಹೊಸದಾಗಿ ರೈನಾಪೂರ ಪಂಚಾಯಿತಿನ್ನಾಗಿ ರಚನೆ ಮಾಡಲು ರೈನಾಪೂರ ಗ್ರಾಮದ ಮುಖಂಡರು ವಿಧಾನ ಸಭಾ ಉಪಸಭಾಪತಿಗಳಾದ ಆನಂದ ಚಂ. ಮಾಮನಿಯವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಗ್ರಾ ಪಂ ಅಧ್ಯಕ್ಷರಾದ ಸುರೇಶ ಬಂಟನೂರ, ಎ ಪಿ ಎಂ ಸಿ ಉಪಾಧ್ಯಕ್ಷರಾದ ಚಂದ್ರಶೇಖರ ಅಳಗೋಡಿ, ಪಿ ಕೆ ಪಿ ಎಸ್ ಅಧ್ಯಕ್ಷರಾದ ವಿಠ್ಠಲ ಬಂಟನೂರ, ರಂಗಪ್ಪ ಅಣ್ಣಿಗೇರಿ, ಫಕ್ಕೀರಪ್ಪ ಹೊಸಮನಿ, ಶ್ರೀಕಾಂತ ಕರಿಗಣ್ಣವರ, ಬಿ ಆರ್ ಗಂಗರಡ್ಡಿ, ಸಂಗಯ್ಯ ಕುಂಬಾರಗೇರಿಮಠ ಉಪಸ್ಥಿತರಿದ್ದರು.

(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply