ಔಷಧ ಮಾರಾಟಗಾರರಿಂದ ನಾಳೆ ರಾಜ್ಯದಾದ್ಯಂತ ಮನವಿ ನೀಡಿಕೆ

0

ಬೆಳಗಾವಿ : ಔಷಧ ಮಾರಾಟಕ್ಕೆ ಕಾರ್ಪೊರೇಟ್ ಮಳಿಗೆಗಳಾದ ಅಪೋಲೋ ಮೆಡ್+, ನೆಟ್ ಮೆಡ , ವೆಲ್ ನೆಸ್ , ಫಾರೆವರ್ ಮುಂತಾದ ಮಳಿಗೆಗಳಿಗೆ ಅನುಮತಿ ನೀಡಬಾರದು ಎಂದು ಬೆಳಗಾವಿ ಡಿಸ್ಟ್ರಿಕ್ಟ್ ರಿಟೇಲ್ ಫಾರ್ಮಸಿ ಅಸೋಸಿಯೇಷನ್ ವತಿಯಿಂದ ನಾಳೆ ರಾಜ್ಯದಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳು, ಎಲ್ಲ ತಹಶೀಲ್ದಾರರು ಮತ್ತು ಎಲ್ಲಾ ಶಾಸಕರುಗಳ ಮೂಲಕ   ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಸಂಘದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಸಿದ್ದಣ್ಣ ಮುನವಳ್ಳಿ (ಅಂಕಲಗಿ) ಅವರು ತಿಳಿಸಿದ್ದಾರೆ .

ಈ ಮಳಿಗೆಗಳು ಶೇಕಡಾ 15 ರಿಂದ 25 ವರೆಗೆ ಅವಾಸ್ತವಿಕ ರಿಯಾಯಿತಿಯನ್ನು ಔಷಧ ಮಾರಾಟದಲ್ಲಿ ನೀಡುತ್ತಿವೆ .ಆದರೆ ಈ ಹಿಂದಿನಿಂದಲೂ ಪಾರಂಪರಿಕವಾಗಿ ಅಂಗಡಿಗಳನ್ನು ನಡೆಸುತ್ತಿರುವವರಿಗೆ ಡ್ರಗ್ಸ್ ಪ್ರೈಸ್ ಕಂಟ್ರೋಲ್ ಆರ್ಡರ್ 1995 ( DPCO 1995) ರ ಪ್ರಕಾರ ಶೇ 16% 18 % ಮಾತ್ರ ಲಾಭ ಇರಬೇಕು ,ಆದರೆ ಕಾರ್ಪೊರೇಟ್ ಮಳಿಗೆಗಳು ಮಾತ್ರ ನಡೆಸುತ್ತಿರುವ ಈ ಅವೈಜ್ಞಾನಿಕ ಮತ್ತು ಅವಾಸ್ತವಿಕ ಅನಾರೋಗ್ಯಕರ ಸ್ಪರ್ಧೆ ನಡೆಸುತ್ತಿರುವುದರಿಂದ ಈ ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿರುವ ರಿಟೇಲ್ ಔಷಧಿ ಅಂಗಡಿಗಳು ಮುಚ್ಚುವ ಸ್ಥಿತಿಗೆ ಬಂದಿವೆ .ಇದರೊಂದಿಗೆ ಆನ್ ಲೈನ್ ಮಾರಾಟ ಕೂಡ ನಡೆಯುತ್ತಿರುವುದು ದುರ್ದೈವದ ಸಂಗತಿ ಎಂದವರು ಹೇಳಿದ್ದಾರೆ .
( Drugs and cosmetics act 1945) ಔಷಧಿ ಮತ್ತು ಕಾಂತಿವರ್ಧಕ ಕಾಯ್ದೆ 1945 ರ ಪ್ರಕಾರ ಔಷಧಿ ನಿಯಂತ್ರಣ ಇಲಾಖೆಯಿಂದ ಪರವಾನಿಗೆ ಪಡೆದು ಕೊಂಡವರಿಗೆ ಮಾತ್ರ ಔಷಧ ಮಾರಾಟ ಮಾಡುವ ಅಧಿಕಾರ ಇರುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ವೈದ್ಯರು ಪರವಾನಿಗೆ ಇಲ್ಲದೆ ಬೃಹತ್ ಪ್ರಮಾಣದಲ್ಲಿ ರೋಗಿಗಳಿಗೆ ತಾವೇ ಔಷಧಿ ಮಾರಾಟ ಮಾಡುತ್ತಿದ್ದಾರೆ .ಇದರಿಂದ ರಿಟೇಲ್ ಔಷಧಿ ಮಾರಾಟ ಗಾರರಿಗೆ ಅಷ್ಟೇ ಅಲ್ಲ ಸರ್ಕಾರಕ್ಕೂ ಕೂಡ ಟ್ಯಾಕ್ಸ್ ರೂಪದಲ್ಲಿ ಬರಬೇಕಾದ ರೆವಿನ್ಯೂ ಬಾರದೆ ಬೃಹತ್ ಪ್ರಮಾಣದ ಹಾನಿ ಉಂಟಾಗುತ್ತಿದೆ ಎಂದು ಸಿದ್ದಣ್ಣ ಮುನವಳ್ಳಿ ವಿವರಿಸಿದ್ದಾರೆ .
2019 ರ ಏಪ್ರಿಲ್ 01ರಂದು ಈ ಸಂಬಂಧ ಪಂಜಾಬ್ ಸರ್ಕಾರವು ಆದೇಶವೊಂದನ್ನು ಜಾರಿಗೊಳಿಸಿ 1ರಿಟೇಲ್ ಔಷಧಿ ಅಂಗಡಿಯಿ೦ದ 500 ವ್ಯಾಪ್ತಿಯಲ್ಲಿ ಮತ್ತೊಂದು ಔಷಧಿ ಅಂಗಡಿಗೆ ಅನುಮತಿ ನೀಡಬಾರದೆಂದು ನಿಯಮವನ್ನು ರೂಪಿಸಿತು,ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಕೂಡ ಸರ್ಕಾರ ನಿಯಮವನ್ನು ರೂಪಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ .
ಕೋವಿಡ-19 ಸಂದರ್ಭದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ ಎಲ್ಲಾ ರಿಟೇಲ್ ಅಂಗಡಿಕಾರರನ್ನು ಕೊರೋನಾ ವಾರಿಯರ್ಸ್ ಎಂದು ಸರ್ಕಾರ ಮಾನ್ಯತೆ ಕೊಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ .

- Advertisement -

- Advertisement -

Leave A Reply

Your email address will not be published.