Belagavi

ಅಮ್ಮಣಗಿಯ ಮಲಿಕಾರ್ಜುನ ದೇವರ ಜಾತ್ರೆ ರದ್ದು


ಸಂಕೇಶ್ವರ: ಮುಂಬೈ-ಕರ್ನಾಟಕ ಭಾಗದ ಐತಿಹಾಸಿಕ ಪ್ರಸಿದ್ದ ಸಂಕೇಶ್ವರ ಸಮೀಪದ ಅಮ್ಮಣಗಿಯ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆಯನ್ನು ಈ ವರ್ಷ ಕೊವಿಡ್ ಕಾರಣದಿಂದ ರದ್ದು ಪಡಿಸಲಾಗಿದೆ ಎಂದು ಮಲ್ಲಿಕಾರ್ಜುನ ದೇವರ ಟ್ರಸ್ಟ ಕಮಿಟಿ ತಿಳಿಸಿದೆ.
ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ವಿವರ ನೀಡಿದ ಕಮಿಟಿಯ ಅಧ್ಯಕ್ಷ ಎಲ್.ಎ.ಪಾಟೀಲ ಅವರು ಜನವರಿ ೧೩ ರಿಂದ ೧೭ರ ವರೆಗೆ ನಡೆಯುವ ಸಾರ್ವಜನಿಕ ಮಲ್ಲಿಕಾರ್ಜುನ ದೇವರ ಜಾತ್ರೆಯನ್ನು ಸರ್ಕಾರದ ಆದೇಶದನ್ವಯ ರದ್ದುಗೊಳಿಸಲಾಗಿದೆ. ಕುಸ್ತಿ, ದನಗಳ ಪ್ರದರ್ಶನ, ಅಂಗಡಿಗಳು, ನಾಟಕಗಳು ಯಾವುದೂ ಇರುವುದಿಲ್ಲ. ಆದರೆ ಐದು ದಿನಗಳ ಕಾಲ ಧಾರ್ಮಿಕ ವಿಧಿಗಳು ಆಂತರಿಕವಾಗಿ ನಡೆಯುವವು ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿ.ಬಿ.ಮಂಜರಗಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಸುನೀಲ ಪರ್ವತರಾವ, ಸುರೇಶ ಹುಣಚಾಳಿ ಉಪಸ್ಥಿತರಿದ್ದರು.


Leave a Reply