ಮುದ್ರಣಕಾರರ ಒಗ್ಗಟ್ಟು ಪ್ರಶಂಸನೀಯ : ಗವಿಶ್ರೀ

0

ಕೊಪ್ಪಳ, ಜ. ೧೧: ಕೊಪ್ಪಳ ಜಿಲ್ಲೆಯ ಮುರದಣಕಾರರ ಒಗ್ಗಟ್ಟು ನಿಜವಾಗಲೂ ಶ್ಲಾಘನೀಯ, ಇದನ್ನು ಇನ್ನಷ್ಟು ವಿಶಾಲವಾಗಿ ಬೆಳೆಸಲು ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕರೆ ನೀಡಿದರು.
ಅವರು ನಗರದ ಶ್ರೀ ಗವಿಮಠ ಆವರಣದಲ್ಲಿ ಕೊಪ್ಪಳ ಜಿಲ್ಲಾ ಮುದ್ರಣ ಮಾಲೀಕರ ವಿವಿದೋದ್ದೇಶ ಸೇವಾ ಸಂಘದಿAದ ಹೊರತಂದಿರುವ ನೂತನ ವರ್ಷದ ಬಹುವರ್ಣದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು. ಕ್ಯಾಲೆಂಡರ್ ವಿನ್ಯಾಸ ಚನ್ನಾಗಿದೆ, ಇನ್ನಷ್ಟು ಅರಿಯದ ಚಿತ್ರಗಳನ್ನು ಮತ್ತು ಕೊಟೇಶನ್‌ಗಳನ್ನು ಹಾಕಿದರೆ ಇನ್ನಷ್ಟು ಸೊಗಸಾಗಿರುತ್ತೆ ಎಂದರು. ಇದೇ ವೇಳೆ ನೆರೆದಿದ್ದ ಮುದ್ರಣ ಮಾಲೀಕರ ಸಂಘದ ಸದಸ್ಯರ ಜೊತೆಗೆ ಜಾತ್ರೆಯ ಕುರಿತು ಚರ್ಚಿಸಿ ಅಭಿಪ್ರಾಯ ಪಡೆದುಕೊಂಡರು. ಈ ವೇಳೆ ಸಂಘದ ಜಿಲ್ಲಾ ಗೌರವಾಧ್ಯಕ್ಷ ಹಸನಸಾಬ್ ಹಿರೇಮಸೂತಿ, ಅಧ್ಯಕ್ಷ ಶರಣಪ್ಪ ನಾಯಕ್, ಕಾರ್ಯಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಉಪಾಧ್ಯಕ್ಷ ಚನ್ನಬಸಪ್ಪ ರೋಣದ, ಪ್ರಧಾನ ಕಾರ್ಯದರ್ಶಿ ರಾಜಶೇಖರ್ ತಂಬ್ರಳ್ಳಿಮಠ, ಮಾಧ್ಯಮ ಪ್ರತಿನಿಧಿ ರುದ್ರಗೌಡ ಪಾಟೀಲ್, ಆನಂದ ಜಿ. ಗೊಂಡಬಾಳ, ರಾಜಾಹುಸೇನ್ ಕಾತರಕಿ, ಮಲ್ಲಿಕ್ ಜಾನ್, ಸಿದ್ದಣ್ಣ ಏಳುರೊಟ್ಟಿ ಇತರರು ಇದ್ದರು.

- Advertisement -

- Advertisement -

Leave A Reply

Your email address will not be published.