vijayapur

ಆಕ್ಷೇಪಣೆ ಸಲ್ಲಿಕೆಗೆ ಅವಕಾಶ


ವಿಜಯಪುರ ಜ.೧೧: ಸಮಾಪನೆಗೊಂಡ ಸಹಕಾರಿ ಸಂಘಗಳ ನೋಂದಣಿ ರದ್ದತಿಗಾಗಿ ಕ್ರಮವಿಡಲು ಅವಶ್ಯಕತೆ ಇರುತ್ತದೆ. ನಿಯಮಾನುಸಾರ ಕಾರ್ಯನಿರ್ವಹಿಸದೆ ಇರುವ ಜ್ಯೋತಿ ಮಹಿಳಾ ವಿವಿದೋದ್ದೇಶಗಳ ಸಹಕಾರ ಸಂಘ ನಿ. ಶಿವಣಗಿ ಈ ಸಂಘವನ್ನು ಸ್ಥಾಪನೆಗೊಳಿಸಲಾಗಿದೆ ಎಂದು ಸಮಾಪನಾಧಿಕಾರಿಗಳು, ಜ್ಯೋತಿ ಮಹಿಳಾ ವಿವಿದ್ದೋದ್ದೇಶಗಳ ಸಹಕಾರ ಸಂಘ ನಿ, ಶಿವಣಗಿ ಹಾಗೂ ಪ್ರ.ದ.ಸ ಸಹಕಾರ ಸಂಘಗಳ ಉಪ ನಿಭಂದಕರು ವಿಜಯಪುರ ಅವರು ತಿಳಿಸಿದ್ದಾರೆ.
ಅದರಂತೆ ಈ ಸಂಘದ ಲೆಕ್ಕಪರಿಶೋದನೆ ಜರುಗಿಸಿದೆ ಇರುವದು ಹಾಗೂ ಸಂಘದ ಯಾವುದೇ ದಾಖಲಾತಿಗಳು ಲಭ್ಯವಾಗದಿರುವ ಕಾರಣ ಈ ಸಂಘದ ನೋಂದಣಿ ರದ್ದತಿ ಮಾಡುವ ಅವಶ್ಯಕತೆ ಇರುತ್ತದೆ. ಆದ್ದರಿಂದ ಈ ಸಂಘದ ಯಾವುದಾದರು ಆಕ್ಷೆಪಣೆಗಳಿಲ್ಲ ಎಂದು ಪರಿಗಣಿಸಿ ನೋಂದಣಿ ಕ್ರಮಾಂಕವನ್ನು ರದ್ದು ಪಡಿಸಲು ಕ್ರಮ ಜರುಗಿಸಲಾಗುವದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply