Koppal

ದ್ರಾಕ್ಷಿ ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಹವಮಾನಾಧಾರಿತ ಸಲಹೆಗಳು


ಕೊಪ್ಪಳ ಜ.11: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಕಾಳು ಕಟ್ಟುವ ಹಂತದಲ್ಲಿದ್ದ ದ್ರಾಕ್ಷಿ ಬೆಳೆಗೆ ತೀವ್ರ ಹಾನಿಯಾಗುವ ಸಂಭವವಿದ್ದು, ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನ ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ಕೊಪ್ಪಳ ತೋಟಗಾರಿಕೆ ಇಲಾಖೆ (ಜಿಪಂ) ವತಿಯಿಂದ ದ್ರಾಕ್ಷಿ ಬೆಳೆಗಾರರಿಗೆ ಸಲಹೆ ನೀಡಲಾಗಿದೆ.
ದ್ರಾಕ್ಷಿ ಗೊಂಚಲುಗಳಲ್ಲಿನ ಕಾಯಿಗಳಲ್ಲಿ ಸಕ್ಕರೆ ಅಂಶ ಕಂಡುಬರುವ ಹಂತದಲ್ಲಿ ಕಾಳುಗಳು ಸೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಂತದಲ್ಲಿ ಚಿಲೇಟೆಡ್ ಕ್ಯಾಲ್ಸಿಯಂ 1 ಗ್ರಾಂ. ಜೊತೆಗೆ ಬೋರಾನ್ 1 ಗ್ರಾಂ. ಗಳನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ದ್ರಾಕ್ಷಿ ಗೊಂಚಲಿನಲ್ಲಿನ ಕಾಳುಗಳು ಇನ್ನೂ ನೀರು ತುಂಬುವ ಹಂತ ಪ್ರಾರಂಭವಾಗಿರದೇ ಇದ್ದಲ್ಲಿ ಕಾಳುಗಳು ಸೀಳುವ ಸಾಧ್ಯತೆ ಕಡಿಮೆ. ಮಳೆಯಾಗಿರುವ ಕಾರಣ ಡ್ರಿಪ್ ಮೂಲಕ ನೀರು ಹರಿಸುವುದನ್ನು ನಿಲ್ಲಿಸಬೇಕು.
ಈಗಾಗಲೇ ಡೌನಿರೋಗದ ಬಾಧೆ ಇರುವ ತೋಟಗಳಲ್ಲಿ ಫಾಸಟೀಲ್ ಎ.ಎಲ್. (ಅಲಿಯಟ್) 2 ಗ್ರಾಂ. 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಡೌನಿ ರೋಗ ಇಲ್ಲದೇ ಇರುವ ತೋಟಗಳಲ್ಲಿ ಮ್ಯಾಂಡಿಪ್ರೋಪಮಿಡ್ (ರೇವಸ್) 0.60 ಮಿ.ಲೀ. 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ದ್ರಾಕ್ಷಿ ಹಣ್ಣುಗಳು ಸಂಪೂರ್ಣವಾಗಿ ಸಕ್ಕರೆ ಅಂಶ ತುಂಬಿಕೊAಡಿದ್ದಲ್ಲಿ ಕ್ಯಾಲ್ಸಿಯಂ ಸಿಂಪರಣೆ ನಂತರ ಮರುದಿನ ಟ್ರೆöÊಕೋಡರ್ಮಾ ಎಂಬ ಜೈವಿಕ ಶಿಲೀಂದ್ರನಾಶಕವನ್ನು 5 ಗ್ರಾಂ. 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಮಹಾವಿದ್ಯಾಲಯ, ಮುನಿರಾಬಾದ್‌ನ ಸಹಾಯಕ ಪ್ರಾಧ್ಯಾಪಕ ಡಾ. ರಾಘವೇಂದ್ರ ಆಚಾರಿ, ಮೊ.ಸಂ. 9448876730, ಹಾರ್ಟಿ ಕ್ಲಿನಿಕ್ ಕೊಪ್ಪಳದ ವಿಷಯ ತಜ್ಞ ವಾಮನಮೂರ್ತಿ, ಮೊ.ಸಂ. 9482672039 ಮತ್ತು ತೋಟಗಾರಿಕೆ ಉಪನಿರ್ದೇಶಕರ ಕಛೇರಿಗೆ ಅಥವಾ ಆಯಾ ತಾಲ್ಲೂಕಾ ತೋಟಗಾರಿಕೆ ಇಲಾಖೆ ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply