ಪಶುಗಳ ಹಠಾತ್ ಸಾವು : ರೈತರು ಕಂಗಾಲು

0

ಕುಷ್ಠಗಿ.ಜು : ಮಲಾಪುರ ಗ್ರಾಮದ ಪಶು ವೈದ್ಯಾದಿಕಾರಿಗಳ ನಿರ್ಲಕ್ಷ್ಯದಿಂದ ಜುಮಲಾಪುರ ರಾಂಪುರ ಗ್ರಾಮದ ಪಶುಗಳು ಏಕಾಏಕಿ ಸಾವನ್ನಪ್ಪಿತ್ತಿದ್ದು ರೈತರು ಕಂಗಾಲಾಗಿದ್ದಾರೆ , ಇದರ ಸಂಭಂದ ವೈದ್ಯಾದಿಕಾರಿಗಳು ಹತ್ತಿರ ಹೋದರೆ. 

ನಮ್ಮಲ್ಲಿ ಔಷಧಿ ಇಲ್ಲ. ಎನ್ನುವ ಬೇಜವಾಬ್ದಾರಿ ತನದಿಂದ ಹೇಳಿ ಕಳುಹಿಸುತ್ತಿದ್ದಾರೆ.ಮೊದಲೇ ರೈತರು ಕಷ್ಟದಲ್ಲಿದ್ದಾರೆ ಇಂತಹ ಸಮಯದಲ್ಲಿ ಹಸುಗಳು ಈ ರೀತಿ ಪ್ರಾಣ ಬಿಟ್ಟರೆ ಅವುಗಳ ನ್ನೆ ಅವಲಂಬಿಸಿದ ರೈತರ ಪರಿಸ್ಥಿತಿ ಮುಂದೆ ಹೇಗೆ ಅನ್ನುವ ಆಲೋಚನೆಯಲ್ಲಿ ರೈತರು ಕುಳಿತಿದ್ದಾರೆ.ಇಂತಹ ಸಮಯದಲ್ಲಿ ಹಸುಗಳಿಗೆ ಸರಿಯಾದ ಔಷಧಿ ಸಿಗುವ ವ್ಯವಸ್ಥೆ ಆಗಬೇಕು ,ಹಾಗೂ ಈ ಬಗ್ಗೆ ಜನಪ್ರತಿನಿಧಿಗಳು ,ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರ ಹಸುಗಳಿಗೆ ಆರೋಗ್ಯದಲ್ಲಿ ಸಮಸ್ಯೆಯಾದಾಗ ಸ್ಪಂದಿಸುವ ಕೆಲಸ ವಾಗಬೇಕಿದೆ ಎಂದು ಗ್ರಾಮಸ್ಥರು ವೈಧ್ಯರ ವಿರುದ್ದ ತಮ್ಮ ಅಳಲನ್ನು ಹೇಳಿದ್ದಾರೆ.ಹಾಗಾಗಿ ತಪ್ಪು ಮಾಡಿದ ವೈಧ್ಯರ ವಿರುದ್ಧ ಜುಮಲಾಪುರ ರಾಂಪುರ ಗ್ರಾಮದ ರೈತರು ,ಕುಷ್ಟಗಿ ತಾಲೂಕು ವೈದ್ಯಾಧಿಕಾರಿ ಗಳಿಗೆ ಲಿಖಿತ ದೂರು ನೀಡಿ. ಪಶುಗಳು ಸಾವಿಗೆ ಕಾರಣರಾದ ಜುಮಲಾಪುರ ಪಶು ವೈದ್ಯಾಧಿಕಾರಿಗಳನ್ನು ವಜಾ ಗಳಿಸಬೇಕೆಂದು ಲಿಖಿತ ವಾಗಿ ದೂರು ನೀಡಿದ್ದಾರೆ.ಈ ಸಂದರ್ಭದಲ್ಲಿ ಹನಮಂತ ಗರಡಿ,ಬಾಳಪ್ಪ ಕೊಡಗಲಿ,ಶಂಕ್ರಪ್ಪ ಛಲವಾದಿ ಸೇರಿ ಇತರರು ಉಪಸ್ಥಿತರಿದ್ದರು.

- Advertisement -

- Advertisement -

Leave A Reply

Your email address will not be published.