Koppal

೧೩ ರಂದು ಕುಷ್ಟಗಿ ತಾಲ್ಲೂಕು ಗ್ರಾಮ ಪಂಚಾಯತ ಮೀಸಲಾತಿ ಪಟ್ಟಿ ಪ್ರಕಟ


ಕುಷ್ಠಗಿ ; ಜ.೧೩ ರಂದು ಕುಷ್ಟಗಿ ಬಸವರಾಜ ಚಿತ್ರ ಮಂದಿರದಲ್ಲಿ ಗ್ರಾಮ ಪಂಚಾಯತ ಮೀಸಲಾತಿ ಪಟ್ಟಿ ಪ್ರಕಟ ಮಾಡಲಾಗುವುದು .

ಸರಕಾರದ ಆದೇಶದನ್ವಯ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ೩೬ ಗ್ರಾಮ ಪಂಚಾಯತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಪ್ರಕಟದ ಹಿನ್ನಲೆಯಲ್ಲಿ ಕುಷ್ಟಗಿಯ ಬಸವರಾಜ ಚಿತ್ರ ಮಂದಿರದಲ್ಲಿ ಇದೇ ದಿನಾಂಕ ಜ.೧೩ ರಂದು ನೆಡೆಯಲಿದ್ದು ತಾಲೂಕು ದಂಡಾಧಿಕಾರಿಗಳಾದ ಎಂ.ಸಿದ್ದೇಶ ಹಾಗೂ ಸಿ.ಪಿ.ಐ ನಿಂಗಪ್ಪ ಮತ್ತು ಪಿ.ಎಸ್.ಐ ತಿಮ್ಮಣ್ಣ ಸ್ಥಳ ಪರಿಶೀಲನೆ ನೆಡೆಸಿದರು.ಸ್ಥಳ ಪರಿಶೀಲನೆ ಮಾಡಿ ಮಾತನಾಡಿದ ಸಿ.ಪಿ.ಐ ನಿಂಗಪ್ಪ ರುದ್ರಪ್ಪಗೋಳ ರವರು, ಪ್ರತಿ ಗ್ರಾಮ ಪಂಚಾಯತಿಯ ಸರ್ವಸದಸ್ಯರು ಭಾಗವಹಿಸುತ್ತಿದ್ದು ಸರಿಯಾದ ರೀತಿಯಲ್ಲಿ ಆಸನಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮತ್ತು ವಾಹನವನ್ನು ಬಿಡಲು ಸ್ಥಳವನ್ನು ನಿಗಧಿ ಮಾಡಲಾಯಿತು.ಪ್ರತಿ ಗ್ರಾಮ ಪಂಚಾಯತಿಯಿಂದ ಬರುವಂತ ಗ್ರಾಮ ಪಂಚಾಯತ ಸದಸ್ಯರ ವಾಹನವನ್ನು ಬಿಡಲು ಚಿತ್ರ ಮಂದಿರದ ಮುಂಬಾಗದಲ್ಲಿ ಹಾಗೂ ಸಂತೆ ಮಾರುಕಟ್ಟೆಯಲ್ಲಿ ಬಿಡಲು ನಿರ್ಣಯ ಕೈಗೊಳ್ಳಲಾಯಿತು.ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ತಹಶೀಲ್ದಾರ ಕಛೇರಿಯ ಸಿಬ್ಬಂದಿಗಳು ಹಾಗೂ ಪೋಲಿಸ್ ಸಿಬ್ಬಂದಿಗಳು ಬಿಗಿ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ ಎಂ ಸಿದ್ದೇಶ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ, ಪುರಸಭೆ ವ್ಯವಸ್ಥಾಪಕ ಪ್ರಲ್ಹಾದ ಜೋಶಿ, ಚಿತ್ರ ಮಂದಿರದ ಮಾಲಿಕ ಮಹೇಶ ಕೊಳ್ಳೂರ, ಪೋಲಿಸ್ ಸಿಬ್ಬಂದಿ ರಂಗಪ್ಪ ಚೂರಿ ಸೇರಿದಂತೆ ಉಪಸ್ಥಿತರಿದ್ದರು.


Leave a Reply