Ballary

ಗಣಿನಾಡು ಬಳ್ಳಾರಿಗೆ ನೂತನ ಜಿಲ್ಲಾಧಿಕಾರಿಯಾಗಿ ಪವನಕುಮಾರ್ ಮಲಪಾಟಿ ಅಧಿಕಾರ ಸ್ವೀಕಾರ


ಬಳ್ಳಾರಿ ಜ ೧೧: ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಪವನಕುಮಾರ್ ಮಲಪಾಟಿ ಇಂದು ಅಧಿಕಾರ ಸ್ವೀಕರಿಸಿದರು.ಕೇಂದ್ರ ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜಿತರಾಗಿರುವ ನಿರ್ಗಮಿತ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ನೂತನ ಜಿಲ್ಲಾಧಿಕಾರಿ ಪವನಕುಮಾರ ಮಲಪಾಟಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.ಪವನಕುಮಾರ ಮಲಪಾಟಿ ೨೦೧೨ನೇ ಬ್ಯಾಚ್ ನ ಐಎಎಸ್ ಅಧಿಕಾರಿಗಳಾಗಿದ್ದು, ಇದುವರೆಗೆ ವಾಣಿಜ್ಯ ತೆರಿಗೆಗಳ (ಜಾರಿ) ಹೆಚ್ಚುವರಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಈ ಹಿಂದೆ ಸಹಾಯಕ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದರು.ಹೀಗಾಗಿ ನೂತನ ಜಿಲ್ಲಾಧಿಕಾರಿಗೆ ಬಳ್ಳಾರಿ ಜಿಲ್ಲೆಯ ಪರಿಚಯವಿದೆ. ಇದೀಗ ರಾಜ್ಯ ಸರ್ಕಾರ ಅಧಿಕೃತವಾಗಿ ಮಲಪಾಟಿ ಅವರಿಗೆ ನೂತನ ಡಿಸಿಯನ್ನಾಗಿ ಮಲಪಾಟಿ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿದೆ.


Leave a Reply