Ballary

ಪವನಕುಮಾರ್ ಮಲಪಾಟಿ ಬಳ್ಳಾರಿ ಜಿಲ್ಲಾಧಿಕಾರಿಗಳಾಗಿ ಅಧಿಕಾರ ಸ್ವೀಕಾರ


ಬಳ್ಳಾರಿ,ಜ.11 : ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಪವನಕುಮಾರ್ ಮಲಪಾಟಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಕೇಂದ್ರ ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜಿತರಾಗಿರುವ ನಿರ್ಗಮಿತ ಜಿಲ್ಲಾಧಿಕಾರಿ ‌ಎಸ್.ಎಸ್.ನಕುಲ್ ಅವರು ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.
ಪವನಕುಮಾರ್ ಮಲಪಾಟಿ ಅವರು 2012ನೇ‌ ಬ್ಯಾಚ್ ನ ಐಎಎಸ್‌ ಅಧಿಕಾರಿಗಳಾಗಿದ್ದು,ವಾಣಿಜ್ಯ ತೆರಿಗೆಗಳ(ಜಾರಿ)ಹೆಚ್ಚುವರಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಮಲಪಾಟಿ ಅವರು ಈ ಹಿಂದೆ ಹೊಸಪೇಟೆ ಸಹಾಯಕ ಆಯುಕ್ತರಾಗಿಯೂ ಕೆಲಸ ನಿರ್ವಹಿಸಿದ್ದರು.


Leave a Reply