Ballary

ಯಶಸ್ವಿಯಾದ ರಾಗ್ ರಂಗ್ ಕಾರ್ಯಕ್ರಮ


ಬಳ್ಳಾರಿ, ಜ.೧೧: ವೇದಿಕೆಗಳು ಕಲಾವಿದರಿಗೆ ಸಿಗುವುದು ಇಂದಿನ ದಿನಮಾನಗಳಲ್ಲಿ ತುಂಬಾ ಕಷ್ಟಕರವಾಗಿದೆ. ಆ ನಿಟ್ಟಿನಲ್ಲಿ ಪ್ರತಿ ತಿಂಗಳು ೨ನೇ ರವಿವಾರದದಂದು ಜರುಗುವ ಮಾಸಿಕ ಸಂಗೀತ ಕಾರ್ಯಕ್ರಮಗಳ ಮೂಲಕ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಕಲಾಸಾಧಕ ಸಂಗೀತಗಾರರಿಗೆ ಇಲ್ಲಿ ವೇದಿಕೆಯನ್ನು ಕಲ್ಪಿಸಿರುವುದು ಅತ್ಯಂತ ಗಮನಾರ್ಹ ಸಂಗತಿಯಾಗಿದೆ ಎಂದು ಖ್ಯಾತ ತಬಲಾ ಕಲಾವಿದರಾದ ಪವಮಾನ ಅರಳಿಕಟ್ಟೆಯವರು ಅಭಿಪ್ರಾಯಪಟ್ಟರು. ಬಳ್ಳಾರಿ ಮಹಾನಗರದ ಸಿರುಗುಪ್ಪ ರಸ್ತೆಯ ವಿರಾಟ ನಗರದಲ್ಲಿ ಶ್ರೀ ಗಾನಯೋಗಿ ಕಲಾಕೇಂದ್ರದಲ್ಲಿ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ಆಯೋಜನೆ ಮಾಡಿದ್ದ ಪ್ರಥಮ ಮಾಸಿಕ ಸಂಗೀತ ಕಾರ್ಯಕ್ರಮ ತಾನ್‌ಪೂರ್ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮತ್ತೋರ್ವ ತಬಲಾ ಕಲಾವಿದರಾದ ಸಂಡೂರಿನ ಕೆ.ಉಮೇಶ್ ಅವರು ಮಾತನಾಢಿ ಈ ಸಂಗೀತ ಪಾಠಶಾಲೆಯಲ್ಲಿ ಗಾಯನ, ವಾದನ, ನರ್ತನದ ತ್ರಿವೇಣಿ ಸಂಗಮ ಇದೆ ಎಂದು ಅಭಿಮಾನದ ನುಡಿಗಳನ್ನು ಆಡಿದರು. ಕಾರ್ಯಕ್ರಮದಲ್ಲಿ ಶರಣ ಅಶ್ವತ್ಥಾಮ ತಾತನವರು ಉಪಸ್ಥಿತರಿದ್ದರು. ಆರ್.ವಸ್ತçದ್, ಸಂಖ್ಯಿಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಡಾ. ಅಣ್ಣಾಜಿ ಕೃಷ್ಣಾರೆಡ್ಡಿ, ಶಿವಾನಂದ ಕಥಕ್‌ನಳ್ಳಿ ಮುಂತಾದವರು ಭಾಗವಹಿಸಿದ್ದರು. ವೇದಿಕೆಯ ಮೇಲೆ ಅನೇಕ ಗಣ್ಯರನ್ನು ಸನ್ಮಾನಿಸಿದರು. ನಂತರ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಮತ್ತು ಆಹ್ವಾನಿತರ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಶಿಕ್ಷಕರಾದ ಅಮಾತಿ ಬಸವರಾಜ ನಿರೂಪಿಸಿದರು. ಶ್ರೀಮತಿ ಕವಿತ, ಶ್ರೀಮತಿ ಲಕ್ಷಿö್ಮ ಪ್ರಾರ್ಥಿಸಿದರು. ಕೆ.ದೊಡ್ಡಬಸವ ಗವಾಯಿಗಳು ಸ್ವಾಗತ, ಪ್ರಸ್ತಾವಿಕ ನುಡಿಗಳನ್ನು ಆಡಿದರು. ಕಾರ್ಯಕ್ರಮದಲ್ಲಿ ಕೆ.ಶಿವಕುಮಾರ್, ಇಂದ್ರಕುಮಾರ್ ರಾಜಭಕ್ಷಿ, ಸಿದ್ದಲಿಂಗೇಶ್, ಪುಟ್ಟರಾಜ ಕಗ್ಗಲ್, ಪಂಚಾಕ್ಷರಿ ಯೋಗೀಶ್ ಬಣಗಾರ ಮುಂತಾದವರು ಭಾಗವಹಿಸಿದ್ದರು.


Leave a Reply