Ballary

ಮಾರುತಿ ತೊಗಲುಬೊಂಬೆ ಕಲಾ ಟ್ರಸ್ಟ್ ಉದ್ಘಾಟನೆ ಮತ್ತು ಸಂಕ್ರಾAತಿ ಸಂಭ್ರಮ


ಬಳ್ಳಾರಿ.ಜ.೧೧: ತೊಗಲುಗೊಂಬೆಯAತ ಸಾಂಪ್ರದಾಯಿಕ ಕಲೆಯನ್ನು ತನ್ನ ಪೂರ್ವಜರಿಂದ ಮುಂದು ವರೆಸಿಕೊಂಡು ಹೋಗುತ್ತ ತಮ್ಮ ಜೀವನವನ್ನು ಇದರಲ್ಲೆ ಕಂಡುಕೊAಡಿರುವ ಸುಬ್ಬಣ್ಣ ಮತ್ತು ಇತರೆ ಅವರ ಕುಟುಂಬಸ್ಥರು ಶ್ಲಾಘನೀಯರು ಎಂದು ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷರಾದ ನಾಡೋಜ ಬೆಳಗಲ್ ವೀರಣ್ಣನವರು ಶ್ಲಾಘಿಸಿದರು.
ಅವರು ನಗರದ ಕಾರ‍್ಲತೋಟದ ಹನುಮಾನ್ ನಗರದಲ್ಲಿ ಶ್ರೀ ಮಾರುತಿ ತೊಗಲುಬೊಂಬೆ ಕಲಾ ಟ್ರಸ್ಟ್ನ್ನು ಉದ್ಘಾಟನೆ ಮತ್ತು ಸಂಕ್ರಾAತಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಇಂತ ತಳಮಟ್ಟದ ಮತ್ತು ಕಷ್ಟಕರವಾದ ಕಲೆಯನ್ನು ಮುಂದುವರೆಸಿಕೊAಡು ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವ ಸುಬ್ಬಣ್ಣ ಮತ್ತು ಅವರ ತಂಡ ಇದಕ್ಕೆಂದು ಒಂದು ಕಲಾ ಟ್ರಸ್ಟ್ ಸ್ಥಾಪಿಸಿ ಕೊಂಡಿರುವುದು ಅತ್ಯಂತ ಸಂತೋಷದ ವಿಷಯ ಇವರ ಕಲಾ ಟ್ರಸ್ಟ್ ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಕಲಾ ಪ್ರದರ್ಶನವನ್ನು ಮಾಡುತ್ತಾ ಉತ್ತುಂಗಕ್ಕೆ ಬೆಳೆಯಲಿ ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಿದ್ದಲಿಂಗೇಶ್ ಕೆ ರಂಗಣ್ಣವರ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಳ್ಳಾರಿ ಇವರು ಮಾತನಾಡಿ ಈ ಕಲೆಯನ್ನು ಹೆಚ್ಚಾಗಿ ಅಲೆಮಾರಿ ಜನಾಂಗವೇ ವಾಸಿಸುವ ಮತ್ತು ಎಲ್ಲಾ ತರಹದ ಬುಡಕಟ್ಟು ಕಲಾವಿದರು ಇರುವಂತಹ ಹನುಮಾನ್ ನಗರದಲ್ಲೆ ಟ್ರಸ್ಟ್ನ ಉದ್ಘಾಟನೆ ಮತ್ತು ಸಂಕ್ರಾAತಿ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿರುವುದು ಕೂಡ ಅತ್ಯಂತ ಸಂತಸದ ವಿಷಯ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ ಪಾಲನ್ನ, ಮಾಜಿ ಸದಸ್ಯರು ಎ.ಪಿ.ಎಂ.ಸಿ, ಬಳ್ಳಾರಿ ಇವರು ವಹಿಸಿದ್ದರು. ವಿಶೇಷ ಅಹ್ವಾನಿತರಾಗಿ ಡಿ ಮಲ್ಲಿಕಾರ್ಜುನ, ಜಿಲ್ಲಾಧ್ಯಕ್ಷರು ಪರಿಸರ ಸಂರಕ್ಷಣಾ ವೇದಿಕೆ, ಬಳ್ಳಾರಿ, ಕೆ.ಸಿ ಸುರೇಶ್‌ಬಾಬು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರ, ಬಳ್ಳಾರಿ, ಸಿದ್ದರಾಮ ಕಲ್ಮಠ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬಳ್ಳಾರಿ ಜಿಲ್ಲೆ, ವೈ ಶಿವುಕುಮಾರ್, ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಧ್ಯಕ್ಷರು, ಬಳ್ಳಾರಿ, ಅಲೆಮಾರಿ ಬುಡಕಟ್ಟು ಮಹಾಸಭಾದ ಸಹಕಾರ್ಯದರ್ಶಿ ರಾಮಾಂಜಿನಿ, ಹಿರಿಯ ರಂಗಭೂಮಿ ಕಲಾವಿದರಾದ ರಮೇಶ್‌ಗೌಡ ಪಾಟೀಲ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ವೀಣಾಕುಮಾರಿ ಆದವಾನಿ, ಆರ್.ಕೆ ಕಲ್ಲಪ್ಪ ತೊಗಲುಗೊಂಬೆ ಕಲಾವಿದರು, ಶ್ರೀಜಾರೆಡ್ಡಿ ಅಧ್ಯಕ್ಷರು ಕಲಾಂಜಲಿ ಕಲಾ ಟ್ರಸ್ಟ್, ಬಳ್ಳಾರಿ, ಹುಲುಗಮ್ಮ ತೊಗಲುಗೊಂಬೆ ಕಲಾವಿದರನ್ನು ಸನ್ಮಾನಿಸಲಾಯಿತು.ಶ್ರೀ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ನ ಅ್ಲಧ್ಯಕ್ಷರಾದ ಸುಬ್ಬಣ್ಣ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಕೆ ಕಲ್ಲಪ್ಪ ಮತ್ತು ತಂಡ ಅಂದ್ರಾಳ್ ತಂಡದವರಿAದ ಪಂಚವಟಿ ತೊಗಲುಗೊಂಬೆ ಪ್ರದರ್ಶನ ಮತ್ತು ಶ್ರೀಜಾ ರೆಡ್ಡಿ ಮತ್ತು ತಂಡದವರಿAದ ಸಮೂಹ ನೃತ್ಯ ನೆರವೇರಿಸಲಾಯಿತು. ಬಸವರಾಜ ಅಮಾತಿ ನಿರೂಪಿಸಿದರು. ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಸಿ ಜಯಲಕ್ಷಿö್ಮಯವರು ವಂದಿಸಿದರು. ಜೆ ಜಕ್ರಿಯ, ಬಿ ಗೋವಿಂದಪ್ಪ, ಗಾಳೆಪ್ಪ ಸೇರಿದಂತೆ ಹಲವಾರು ತೊಗಲುಗೊಂಬೆ ಕಲಾವಿದರು ಮತ್ತು ಹನುಮಾನ್ ನಗರದ ನಿವಾಸಿಗಳು ಉಪಸ್ಥಿತರಿದ್ದರು.


Leave a Reply