ಜ. 12 ರಂದು ಕೊಪ್ಪಳ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

0

ಕೊಪ್ಪಳ ಜ.11 : ಕೊಪ್ಪಳ ನಗರದ ಐ.ಪಿ.ಡಿ.ಎಸ್. ವಿದ್ಯುತ್ ಕಾಮಗಾರಿ ನಿಮಿತ್ತ ಜನವರಿ 06 ರಂದು ನಗರದ ವಿವಿಧೆಡೆ ಬೆಳಿಗ್ಗೆ 10 ಗಂಟೆಯಿAದ ಸಂಜೆ 05 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ನಗರದ ಐ.ಪಿ.ಡಿ.ಎಸ್. ವಿದ್ಯುತ್ ಕಾಮಗಾರಿ ನಿಮಿತ್ತ ಗವಿಮಠ ಫೀಡರ್ 11 ಕೆ.ವಿ.ಗೆ ಒಳಪಡುವ ಸಜ್ಜಿಹೊಲ, ಕುಂಬಾರ ಓಣಿ, ಅಂಬೇಡ್ಕರ ಸರ್ಕಲ್, ಕಿತ್ತೂರರಾಣಿ ಚೆನ್ನಮ್ಮ ಸರ್ಕಲ್, ಬಿ.ಎಸ್.ಎನ್.ಎಲ್ ಆಫಿಸ್, ಪಲ್ಟನಗಲ್ಲಿ, ಫಿಶ ಮಾರ್ಕೆಟ್, ಮುಲ್ಲಾ ಆಸ್ಪತ್ರೆ, ವಾರಕಾರ ಓಣಿ, ಗೌರಿಅಂಗಳ, ಕೋಟೆ ಏರಿಯಾ, ಜೆ.ಪಿ. ಮಾರ್ಕೆಟ್ ಹಾಗೂ ಸುತ್ತಮುತ್ತ ಎಲ್ಲಾ ಏರಿಯಾಗಳಲ್ಲಿ ಜ. 12 ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಕಾಮಗಾರಿ ಕೆಲಸವು ಬೇಗನೇ ಮುಗಿದಲ್ಲಿ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್ ದುರಸ್ಥಿ ಕಾರ್ಯಗಳನ್ನು ಮಾಡಬಾರದು. ಒಂದು ವೇಳೆ ವಿದ್ಯುತ್ ಅವಘಡ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಜೆಸ್ಕಾಂ, ಕೊಪ್ಪಳ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

- Advertisement -

Leave A Reply

Your email address will not be published.