BallaryBelagaviGadaggulburgakarwar uttar kannadaKoppalStatevijayapur

ಅಭಿವೃದ್ಧಿ ನೆಪದಲ್ಲಿ ಪಾರಂಪರಿಕ ಕಟ್ಟಡಗಳ ನೆಲಸಮ ಮಾಡದಂತೆ ಮುಖ್ಯಮಂತ್ರಿಗಳಿಗೆ ಮನವಿ


ಕುಷ್ಟಗಿ ; ಕುಷ್ಟಗಿ  ತಾಲೂಕಿನ ವ್ಯಾಪ್ತಿಯ ಕುಷ್ಟಗಿ ನಗರದಲ್ಲಿನ ಪಾರಂಪರಿಕ ಕಟ್ಟಡಗಳನ್ನು ರಕ್ಷಿಸುವಂತೆ ಕಳೆದ ಹಲವು ವರ್ಷಗಳಿಂದ ತಾಲೂಕಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಹಾಗೂ ಒತ್ತಾಯ ಮಾಡಲಾಗುತ್ತಿದೆ.

ಶತಮಾನದ ಅಂಚಿನಲ್ಲಿರುವ ಹೈದರಾಬಾದ್-ಕರ್ನಾಟಕ ಪ್ರದೇಶದ ನಿಜಾಮರ ಆಡಳಿತ ಕಾಲಾವಧಿಯಲ್ಲಿ ನಿರ್ಮಿಸಲಾದ ಸುಂದರ ಹಾಗೂ ಸುಸಜ್ಜಿತ ಕಟ್ಟಡಗಳನ್ನು ತೆರವು ಮಾಡಬಾರದು”,ಎಂದು ಹೈದರಾಬಾದ್-ಕರ್ನಾಟಕ ಹೋರಾಟ ಸಮಿತಿ ತಾಲೂಕಾಧ್ಯಕ್ಷ ಹಾಗೂ ಅನುಭವಿ ಅಭಿಯಂತರ ವೀರೇಶ ಬಂಗಾರಶೆಟ್ಟರ ಪುರಾತನ ಸರಕಾರಿ ಕಟ್ಟಡಗಳ ಸಂರಕ್ಷಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿದರು. ನಗರದ ಪಾರಂಪರಿಕ ಪೊಲೀಸ್ ಠಾಣೆಯ ಕಟ್ಟಡವನ್ನು ಸ್ಮಾರಕವಾಗಿ ಸಂರಕ್ಷಿಸಿಕೊಳ್ಳಬೇಕು ಕಾರಣ ಕಟ್ಟಡವು ದಕ್ಷತೆಯಿಂದ ಕೂಡಿದ್ದು ಅವುಗಳು ಕಿಟಕಿ-ಬಾಗಿಲು ಹಾಗೂ ಗೋಡೆಗಳು ಗಟ್ಟಿಯಾಗಿವೆ. ಕುಷ್ಟಗಿಯ ಹಳೆ ತಹಸಿಲ್ ಕಚೇರಿ ಹಾಗೂ ತಾವರಗೇರಾದ ಪೊಲೀಸ್ ಠಾಣೆಯನ್ನು ರಕ್ಷಿಸಿದಂತೆ, ಕುಷ್ಟಗಿ ಪೊಲೀಸ್ ಠಾಣೆಯನ್ನು ಕೂಡ ಸ್ಮಾರಕವಾಗಿ ಮುಂದಿನ ಪೀಳಿಗೆಯ ಅಭಿಯಂತರ ತಾಂತ್ರಿಕ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇದೊಂದು ಪ್ರಾತ್ಯಕ್ಷಿಕ ಪಾಠವಾಗಲಿದೆ,ಆದ್ದರಿಂದ ಸಂರಕ್ಷಿಸಿಕೊಳ್ಳಬೇಕೆಂದು ವಿನಂತಿಸಿಕೊಂಡರು.ಕಾರಣ, ಅಭಿವೃದ್ಧಿಯ ನೆಪದಲ್ಲಿ, ನೂತನ ಕಟ್ಟಡಗಳನ್ನು ನಿರ್ಮಿಸುವ ಸಲುವಾಗಿ ಪಾರಂಪರಿಕ ಮತ್ತು ಸಾಂಸ್ಕೃತಿಕ ಹೆಗ್ಗುರುತಾಗಿರುವ ಕಟ್ಟಡಗಳನ್ನು ಸಾಕಷ್ಟು ಸ್ಥಳ ಇದ್ದಾಗಲೂ ಕೆಡವಿ ಆ ಜಾಗದಲ್ಲಿ ನೂತನ ಕಟ್ಟಡಗಳನ್ನು ನಿರ್ಮಿಸುವುದು ಪರಂಪರೆಯ ನಾಶಕ್ಕೆ ಕಾರಣವಾಗಲಿದೆ. ಕೂಡಲೇ ದಶಕದ ಅಂಚಿನಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ತೆರವುಗೊಳಿಸುವ ಚಿಂತನೆಯನ್ನು ಬಿಟ್ಟು ಆಯಾ ಇಲಾಖೆಯ ವ್ಯಾಪ್ತಿಯಲ್ಲಿನ ಸ್ಥಳಗಳ ಲಭ್ಯತೆಗನುಗುಣವಾಗಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ನಜೀರಸಾಬ್ ಮೂಲಿಮನಿ,ಯುವ ಚಿಂತಕರಾದ ಸುಭಾನಿ ಆರ್.ಟಿ ವೀರೇಶ್ ಕರಡಿ ಹಾಗೂ ಬಸವರಾಜ್ ಗಾಣಿಗೇರ.ರಾಘವೇಂದ್ರ ಕುಲಕರ್ಣಿ ಉಪಸ್ಥಿತರಿದ್ದರು.


Leave a Reply