ರಾಷ್ಟಿçÃಯ ಯುವ ದಿನ : ಜ. 12 ರಂದು ಟಣಕನಕಲ್‌ನಲ್ಲಿ ಕೌಶಲ್ಯ ಜಾಗೃತಿ ಕಾರ್ಯಕ್ರಮ

ಕೊಪ್ಪಳ ಜ.11: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೊಪ್ಪಳ ಜಿಲ್ಲಾ ಕೌಶಲ್ಯ ಮಿಷನ್ ಹಾಗೂ ಸರಕಾರಿ ಕೈಗಾರಿಕಾ ಸಂಸ್ಥೆ ಟಣಕನಕಲ್, ಇವರ ಸಹಯೋಗದಲ್ಲಿ ರಾಷ್ಟಿçÃಯ ಯುವ ದಿನದ ಅಂಗವಾಗಿ “ಕೌಶಲ್ಯ ಜಾಗೃತಿ” ಕಾರ್ಯಕ್ರಮವನ್ನು ಜ. 12 ರಂದು ಬೆಳಿಗ್ಗೆ 11 ಗಂಟೆಗೆ ತಾಲ್ಲೂಕಿನ ಟಣಕನಕಲ್ ಗ್ರಾಮದ ಸರಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಆಸಕ್ತಿವುಳ್ಳ ಯುವಕ, ಯುವತಿಯರು ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ, ಜಿಲ್ಲಾ ಮಿಷನ್ ಕೊಪ್ಪಳ ಕಚೇರಿ, ದೂರವಾಣಿ ಸಂಖ್ಯೆ. 08539-225901 ಹಾಗೂ ಪ್ರವೀಣ್ ಕುಮಾರ್ ಮೊ.ಸಂ. 9448799909, ಹೆಚ್.ಆರ್ ತಿಪ್ಪೇಸ್ವಾಮಿ ಮೊ.ಸಂ. 9480155091, ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯ ಮಿಷನ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.