ಜಯಂತಿ ಆಚರಣೆ ಪೂರ್ವಭಾವಿ ಸಭೆ ಸಿದ್ಧರಾಮೇಶ್ವರ, ವೇಮನ ಹಾಗೂ ಚೌಡಯ್ಯ ಜಯಂತಿ ಸರಳ ಆಚರಣೆಗೆ ನಿರ್ಧಾರ : ಎಂ.ಪಿ ಮಾರುತಿ

0

ಕೊಪ್ಪಳ ಜ.11: ಶಿವಯೋಗಿ ಸಿದ್ಧರಾಮೇಶ್ವರ, ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಅವರು ಹೇಳಿದರು.
ಶಿವಯೋಗಿ ಸಿದ್ಧರಾಮೇಶ್ವರ, ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಆಚರಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು (ಜ.11) ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೇ ಜನವರಿ 14 ರಂದು ಶಿವಯೋಗಿ ಸಿದ್ಧರಾಮೇಶ್ವರ, ಜ. 19 ರಂದು ಮಹಾಯೋಗಿ ವೇಮನ ಹಾಗೂ ಜ. 21 ರಂದು ಅಂಬಿಗರ ಚೌಡಯ್ಯ ಜಯಂತಿಯನ್ನು ಆಯಾ ದಿನಾಂಕದAದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಗಣದಲ್ಲಿ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಪಣೆ ಮಾಡುವುದರ ಮೂಲಕ ಆಚರಿಸಲಾಗುವುದು. ಕೋವಿಡ್-19 ನಿಯಮಗಳನ್ನು ಅನುಸರಿ ಸರಳ ಜಯಂತಿ ಆಚರಣೆಗೆ ಸಂಬAಧಿಸಿದAತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯರು ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಸಮಾಜದ ಮುಖಂಡರಾದ ವೆಂಕಟೇಶ ಕಂಪಸಾಗರ, ರೇವಣಪ್ಪ ಮ್ಯಾಗೇರಿ, ಯಮನಪ್ಪ ಕಬ್ಬೇರ, ಗಂಗಾಧರ ಕಬ್ಬೇರ, ಹುಲಗಪ್ಪ ಬಾರಕೇರ, ಮಂಜುನಾಥ ಬಾರಕೇರ, ರಾಜು ಕಲೆಗಾರ, ಯಂಕಪ್ಪ ಬಾರಕೇರ, ಕಾಶಿನಾಥರೆಡ್ಡಿ, ಸಿದ್ದಪ್ಪ ಮೇಟಿ, ದಾನರೆಡ್ಡಿ, ಹೇಮರೆಡ್ಡಿ ಬಿಸರಳ್ಳಿ, ಚಂದ್ರಶೇಖರಗೌಡ, ರಾಮರೆಡ್ಡಿ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -

- Advertisement -

Leave A Reply

Your email address will not be published.