ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ೧೪ನೇ ವಾರ್ಷಿಕ ಸರ್ವಸಾಧಾರಣ ಸಭೆ

ಬೆಳಗಾವಿ, ಜ.೧೧ : ಕೃಷಿ ವಿಸ್ತರಣಾ ಕೇಂದ್ರವು ಕೃಷಿ ಸಂಸ್ಥೆ ಅಥವಾ ಕಬ್ಬಿನ ಬೆಳೆಗೆ ಸೀಮಿತವಾಗಿರದೆ ಎಲ್ಲಾ ರೀತಿಯ ಬೆಳೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಹೊಂದಿದೆ. ಈ ಕೇಂದ್ರದಿAದ ಸ್ಥಳೀಯ ರೈತರಿಗೆ ಸಂಪೂರ್ಣ ಮಾಹಿತಿ ಲಭಿಸಲಿದೆ ಕಾರ್ಮಿಕ ಹಾಗೂ ಸಕ್ಕರೆ ಸಚಿವರಾದ ಅರೆಬೈಲ್ ಶಿವರಾಮ ಹೆಬ್ಬಾರ್ ಅವರು ಹೇಳಿದರು.
ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ (ಜ.೧೧) ನಡೆದ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ೧೪ನೇ ಸರ್ವಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಹಾಗೂ ಕೃಷಿ ವಿಶ್ವ ವಿದ್ಯಾಲಯ ಧಾರವಾಡದ ಒಡಂಬಡಿಕೆಯಲ್ಲಿ ಕೃಷಿ ವಿಸ್ತರಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಈಗ ಒಂದೇ ಸೂರಿನಡಿ ಎಲ್ಲಾ ಬೆಳೆಗಳ ಕುರಿತು ಮಾಹಿತಿಯನ್ನು ನೀಡುವ ಉದ್ದೇಶದಿಂದ ಕೃಷಿ ವಿಸ್ತರಣಾ ಕೇಂದ್ರ ಸ್ಥಾಪಿಸಲಾಗಿದ್ದು ಇದರಿಂದ ಬೆಳಗಾವಿಯ ಸುತ್ತು ಮುತ್ತಲಿನ ರೈತರಿಗೆ ಕಬ್ಬಿನ ಬೆಳೆಯ ಜತೆಗೆ ಇತರೆ ಬೆಳೆಗಳ ಮಾಹಿತಿಯನ್ನು ಒದಗಿಸುವ ಮೂಲಕ ಹೆಚ್ಚಿನ ಇಳುವರಿ ಪಡೆಯಲು ಸಹಾಯ ಮಾಡಲಿದೆ ಎಂದು ಅವರು ತಿಳಿಸಿದರು.
ರೈತರ ಹಾಗೂ ಕೃಷಿ ಕೃಷಿ ಭೂಮಿಯ ರಕ್ಷಣೆ ಮಾಡುವುದರೊಂದಿಗೆ ಅನ್ನದಾತ ರನ್ನು ಸ್ವಾವಲಂಬಿಗಳಾಗಿ ಬದುಕುವ ಒಂದು ಗುರಿಯನ್ನು ಕೃಷಿ ವಿಸ್ತರಣಾ ಕೇಂದ್ರ ಹೊಂದಿದ್ದು, ಅನುಭವಿ ಸಿಬ್ಬಂದಿಗಳನ್ನು ಶೀಘ್ರವೇ ನೇಮಕ ಮಾಡಿಕೊಂಡು ರೈತರಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ಕೇಂದ್ರಕ್ಕೆ ಬೇಕಾದ ಸಕಲ ಸೌಲಭ್ಯಗಳನ್ನು ನೀಡಲು ಸರಕಾರ ಸಿದ್ಧವಿದ್ದು, ಈಗಾಗಲೇ ವಿದ್ಯಾರ್ಥಿಗಳಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಬಿಲ್ ಪಾವತಿಸಲು ಕಾರ್ಖಾನೆಗಳಿಗೆ ಸೂಚನೆ:
ಸಕ್ಕರೆ ಕಾರ್ಖಾನೆಗಳು ರೈತರ ಬಿಲ್ ಗಳನ್ನ ಬಾಕಿ ಉಳಿಸಿಕೊಳ್ಳದೇ ನಿಗದಿತ ಸಮಯದಲ್ಲಿ ಪಾವತಿಸಬೇಕು ಎಂದು ಸೂಚನೆ ಎಂದು ಸಕ್ಕರೆ ಖಾತೆ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್ ತಿಳಿಸಿದರು.
ಇದೇ ವೇಳೆ ಮಾತನಾಡಿದ ಸಕ್ಕರೆ ಆಯುಕ್ತರಾದ ಅಕ್ರಂ ಪಾಷ, “ರೈತರಿಗೆ ತೊಂದರೆ ಆಗದೆ ಇರಲಿ ಎಂದು ಇನ್ನು ಮುಂದೆ ವರ್ಷ ಪೂರ್ತಿ ಸಕ್ಕರೆ ಕಾರ್ಖಾನೆ ಲೈಸೆನ್ಸ್ ನವೀಕರಣ ಮಾಡಿ ಕೊಡಲಾಗುವುದು. ಕಳೆದ ವರ್ಷದಲ್ಲಿ ಎಲ್ಲಾ ಕಾರ್ಖಾನೆಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದು, ಒಂದೆರಡು ಕಾರ್ಖಾನೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕಾರ್ಖಾನೆಗಳು ರೈತರಿಗೆ ಹಣ ಸಂದಾಯ ಮಾಡಿವೆ. ಈ ವರ್ಷ ಶೇಕಡಾ ೫೦ರಷ್ಟು ಹಣ ಸಂದಾಯ ಆಗಿದೆ” ಎಂದು ಹೇಳಿದರು.
ಎಲ್ಲಾ ಕಾರ್ಖಾನೆಗಳು ಎಥನಾಲ್ ಪ್ಲಾಂಟ್ ನಿರ್ಮಿಸಬೇಕು ಇದಕ್ಕೆ ಬೇಕಾದ ಸಾಲ ಸೌಲಭ್ಯವನ್ನು ಕೇಂದ್ರ ಸರ್ಕಾರವು ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅಕ್ರಂ ಪಾಶ ಹೇಳಿದರು.
ಎಸ್ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕರಾದ ಡಾ. ಆರ್. ಬಿ. ಖಾಂಡಗಾವೆ ಉಪಾಧ್ಯಕ್ಷರಾದ ಅಶೋಕ್ ಪಾಟೀಲ್, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಂ. ಬಿ. ಚೆಟ್ಟಿ ಹಾಗೂ ವಿವಿಧ ಸಕ್ಕರೆ ಕಾರ್ಖಾನೆಗಳ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.