ಬಳ್ಳಾರಿ ಪತ್ರಕರ್ತರಿಂದ ನಿರ್ಗಮಿತ ಡಿಸಿ ನಕುಲ್ ಅವರಿಗೆ ಸನ್ಮಾನ

ಬಳ್ಳಾರಿ, ಜ.: ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಕೇಂದ್ರ ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜಿತರಾಗಿರುವ ನಿರ್ಗಮಿತ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರನ್ನು ಬಳ್ಳಾರಿ ಜಿಲ್ಲೆಯ ಪತ್ರಕರ್ತರು ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಸೋಮವಾರ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ನಿರ್ಗಮಿತ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಜಿಲ್ಲೆಯ ಅಭಿವೃದ್ಧಿಕಾರ್ಯಗಳಿಗೆ ಮಾಧ್ಯಮದವರು ತೋರಿದ ಸಹಕಾರ, ಇದುವರೆಗೆ ಕಾರ್ಯನಿರ್ವಹಿಸಿದ ಅನುಭವಗಳು ಹಾಗೂ ಕೋವಿಡ್ ಸಂದರ್ಭದಲ್ಲಿ ಜಿಲ್ಲಾಡಳಿತ ಕೈಗೊಂಡ ಕಾರ್ಯಗಳು, ಹಂಪಿ ಉತ್ಸವ ಸೇರಿದಂತೆ ವಿವಿಧ ವಿಷಯಗಳನ್ನು ಅವರು ಹಂಚಿಕೊಂಡರು.
ಪತ್ರಕರ್ತರಾದ ಮಧುಸೂದನ್ ಕಾಡ್ಲೂರು, ಕೆ.ಎಂ.ಮಂಜುನಾಥ, ಕೆ.ನರಸಿಂಹಮೂರ್ತಿ, ಪಿ.ಟಿ.ಚೌಧರಿ ಅವರು ಜಿಲ್ಲಾಧಿಕಾರಿಗಳು ಇದುವರೆಗೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ರೀತಿ ತೋರಿದ ಸಹಕಾರದ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಪತ್ರಕರ್ತರಾದ ಅಶೋಕ ನೀಮಕರ್, ಪುರುಷೋತ್ತಮ ಹಂದ್ಯಾಳ, ಮಾರುತಿ ಸುಣಗಾರ, ಎಂ.ಹುಲುಗಪ್ಪ, ಗಿರೀಶಕುಮಾರ್, ವೀರೇಶ, ನಾಗಭೂಷಣ, ಜಯಪ್ಪ ರಾಠೋಡ, ಶ್ರೀಧರ್ ಕವಾಲಿ, ಸಣ್ಣ ಉಳಿತಾಯ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನೂರಪ್ಪ, ವಾರ್ತಾ ಇಲಾಖೆಯ ಹನುಮಂತಪ್ಪ ಮತ್ತಿತರರು ಇದ್ದರು.

Leave A Reply

Your email address will not be published.