ಹನಿ ನೀರಾವರಿ ಯೋಜನೆಯಲ್ಲಿ ರೈತರಿಗೆ ಅನ್ಯಾಯ : ರಕ್ಷಣಾ ವೇದಿಕೆ

0

ಕುಷ್ಟಗಿ: ತಾಲೂಕಿನಲ್ಲಿ ರೈತರಿಗೆ ಹನಿ ನೀರಾವರಿ ಯೋಜನೆ ಹೆಸರಿನಲ್ಲಿ ಅಧಿಕಾರಿಗಳು ಮತ್ತು ಡೀಲರ್ಸ್ಗಳು ಕೋಟ್ಯಾಂತರ ರೂಪಾಯಿಗಳನ್ನು ಕೊಳ್ಳೆಹೊಡೆದರು ಈ ಬಗ್ಗೆ ಕರ್ನಾಟಕ ರಕ್ಷಣಾ ಸ್ವಾಭಿಮಾನಿ ಬಣ ಕುಷ್ಟಗಿ ತೋಟಗಾರಿಕೆ ಇಲಾಖೆ ಎದುರು ಧರಣಿ ನಡೆಸಿತು.

BJP  Add

ವಿಷಯಕ್ಕೆ ಸಂಬಂಧಿಸಿದಂತೆ 2018 ನೆ ಸಾಲಿನಿಂದ 19- 20 -21 ಸಾಲಿನವರೆಗೆ ಹಾಗೂ ಹಿಂದಿನಿಂದಲೂ ಸಹ ಕುಷ್ಟಗಿ ತೋಟಗಾರಿಕೆ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ ರೈತರಿಗೆ ಯಾವುದೇ ಮಾಹಿತಿಯನ್ನು ನೀಡದೆ ಆಧಾರ್ ಕಾರ್ಡ್ ಎಲ್ಲವನ್ನು ಪಡೆದು ರೈತರಿಗೆ ಕೇವಲ 11 ಎಕರೆ ಆಗುವ ಹಾಗೆ ಎಟಿಎಂ ಹಣ ಬಿಡುಗಡೆಗೊಂಡ ತಕ್ಷಣ ಹಣವನ್ನು ಎಟಿಎಂನಿಂದ ಹಣ ಪಡೆದುಕೊಂಡು ತೋಟಗಾರಿಕೆ ಅದರಲ್ಲಿ ಹೆಚ್ಚಿನ ಹಣವನ್ನು ಪ್ರತಿಶತ % ರೂಪದಲ್ಲಿ ನೀಡಿರುತ್ತಾರೆ. ರೈತರ ಹೆಸರಿನಲ್ಲಿ ಸುಮಾರು ವರ್ಷಗಳಿಂದ ಅಧಿಕಾರಿಗಳು ಹನಿ ನೀರಾವರಿ ಯೋಜನೆ ಅಡಿಯಲ್ಲಿ ಹಾಗೂ ಇನ್ನಿತರ ಯೋಜನೆಯಲ್ಲಿ ನಡೆಸಿದ ಭ್ರಷ್ಟಾಚಾರದ ಕರ್ಮಕಾಂಡ ಈ ಕೆಳಗಿನಂತೆ,ವಿವರಿಸಿದಲೋಪದೋಷ ಗಳಲ್ಲಿ ಕಂಡು ಬರುತ್ತದೆ. ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ನಾಯಕ್ ಮದ್ಯಮದೊಂದಿಗೆ ಭ್ರಷ್ಟಾಚಾರ ವಿವರ ತಿಳಿಸಿದರು.ಕುಷ್ಟಗಿ ತಾಲೂಕಿನಲ್ಲಿ 2017 -18 ನೇ ಸಾಲಿನಲ್ಲಿ 570 ರಿಂದ 600 ಜನ ರೈತರಿಗೆ ಹನಿ ನೀರಾವರಿ ಯೋಜನೆ ಜಾರಿಯಾಗಿದೆ. 2019ರಲ್ಲಿ 2018- 19 ನೇ ಸಾಲಿನಲ್ಲಿ 947 ಜನ ರೈತರಿಗೆ ಹನಿ ನೀರಾವರಿ ಯೋಜನೆ ಜಾರಿಯಾಗಿದೆ ತಮ್ಮ ಇಲಾಖೆಯಿಂದ ಮಾಹಿತಿ ಪ್ರಕಾರ ,2019 20 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಮಾಹಿತಿ ಮಾತ್ರ ನೀಡಿದ್ದು 786 ಜನ ರೈತರು ಜಾತಿ ಮತ್ತು ಪಂಗಡದ ಹನಿ ನೀರಾವರಿ ಯೋಜನೆಯ  21 ನೇ ಸಾಲಿನಲ್ಲಿ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಕಾಲಹರಣ ಮಾಡಿ ಡೀಲರ್ಸ್ ರಕ್ಷಣೆಗಾಗಿ ಕಂಕಣಬದ್ಧರಾಗಿದ್ದಾರೆ. ಈ ಮೇಲಿನ ಪ್ರತಿ ವರ್ಷದ ಫಲಾನುಭವಿಗಳ ಪಟ್ಟಿಯಲ್ಲಿ ಶೇಕಡ 60ರಷ್ಟು ರೈತರಿಗೆ ನಾಮ ಹಾಕಿದ್ದಾರೆ ಇನ್ನು ಪ್ರತಿ ರೈತರಿಂದ ಒಂದು ಎಕರೆಗೆ ಒಂದು ಲಕ್ಷದಿಂದ ಒಂದುವರೆ ಲಕ್ಷ ರೂಪಾಯಿಗಳ ವರೆಗೆ ಸಹಾಯಧನ ಜಮಾ ಆಗಿದೆ ಇದರಲ್ಲಿ ಜಿಲ್ಲೆಗಳು ಮತ್ತು ಅಧಿಕಾರಿಗಳು 20,000 ರೂ. ಸಾಮಗ್ರಿಗಳನ್ನು ನೀಡಿ ಉಳಿದ 80ರಿಂದ 90 ಸಾವಿರ ರೂಪಾಯಿಗಳನ್ನು ನುಂಗಿ ನೀರು ಕುಡಿದಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತೋಟಗಾರಿಕೆ ಇಲಾಖೆಯ ಮೇಲೆ ಆರೋಪಿಸಿದ್ದಾರೆ.ಈ ಸಂದರ್ಭದಲ್ಲಿ ಪ್ರಶಾಂತ್ ನಾಯಕ್ ಜಿಲ್ಲಾಧ್ಯಕ್ಷರು, ಹನುಮಂತ ಬಿಲ್ಲಿ ಜಿಲ್ಲಾ ಉಪಾಧ್ಯಕ್ಷರು, ದೇವರಾಜ ಎಚ್, ನೀಲಪ್ಪ ಆಡಿನ, ರಮೇಶ್ ಕಟ್ಟಿಮನಿ, ಸುರೇಶ್ ಜರ ಕುಂಟೆ, ಅಸಿನ್ ನದಾಫ್, ರಸುಲ್, ಚನ್ನಬಸವ ಮುಂತಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿ ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -

- Advertisement -

Leave A Reply

Your email address will not be published.