ಚುನಾಯಿತ ಸದಸ್ಯರ ಸಮ್ಮುಖದಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕ್ರಿಯೆ ನಡೆಸಲು ಸ್ಥಳ ನಿಗದಿ

ವಿಜಯಪುರ ಜ.೧೧: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಗ್ರಾಮ ಪಂಚಾಯತಿಗಳ ಚುನಾಯಿತ ಸದಸ್ಯರ ಸಮ್ಮುಖದಲ್ಲಿ ನಿಗದಿಪಡಿಸಬೇಕಾಗಿದ್ದು, ಈ ಪ್ರಕ್ರಿಯೆ ನಡೆಸಲು ಈ ಕೆಳಕಂಡ ತಾಲ್ಲೂಕುವಾರು ದಿನಾಂಕಗಳನ್ನು ಹಾಗೂ ಸ್ಥಳವನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.
ಕೋಲ್ಹಾರ ತಾಲೂಕಿನಲ್ಲಿ ದಿನಾಂಕ : ೧೬-೦೧-೨೦೨೧ ರಂದು ಬೆಳಿಗ್ಗೆ ೧೧-೦೦ ಗಂಟೆಗೆ ಶಾದಿಮಹಲ್, ಕೋಲ್ಹಾರದಲ್ಲಿ ನಡೆಯಲಿದೆ. ಅದರಂತೆ ನಿಡಗುಂದಿಯಲ್ಲಿ ಮಧ್ಯಾಹ್ನ ೩-೦೦ ಗಂಟೆಗೆ ಮುದ್ದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ತಿಕೋಟಾ ತಾಲೂಕಿನಲ್ಲಿ ದಿನಾಂಕ : ೧೭-೦೧-೨೦೨೧ ರಂದು ಬೆಳಿಗ್ಗೆ ೧೧-೦೦ ಗಂಟೆಗೆ ಹಾಜಿ ಮಸ್ತಾನ್ ಶಾದಿಮಹಲ್, ತಿಕೋಟಾದಲ್ಲಿ ನಡೆಯಲಿದೆ. ಅದರಂತೆ ಬಬಲೇಶ್ವರ ತಾಲೂಕಿನಲ್ಲಿ ಮಧ್ಯಾಹ್ನ ೩-೦೦ ಗಂಟೆಗೆ ಹರಳಯ್ಯನ ಗುಂಡ ಸಮುದಾಯಭವನ, ಶೇಗುಣಸಿ ಗ್ರಾಮದ ಹತ್ತಿರ, ಬಬಲೇಶ್ವರದಲ್ಲಿ ನಡೆಯಲಿದೆ.
ವಿಜಯಪುರ ತಾಲೂಕಿನಲ್ಲಿ ದಿನಾಂಕ : ೧೮-೦೧-೨೦೨೧ ರಂದು ಬೆಳಿಗ್ಗೆ ೧೧-೦೦ ಗಂಟೆಗೆ ಶ್ರೀ ಕಂದಗಲ್ ಹಣಮಂತರಾಯ ರಂಗಮAದಿರದಲ್ಲಿ ವಿಜಯಪುರದಲ್ಲಿ ನಡೆಯಲಿದೆ. ಅದರಂತೆ ಬ.ಬಾಗೇವಾಡಿ ತಾಲೂಕಿನಲ್ಲಿ ಮಧ್ಯಾಹ್ನ ೩-೦೦ ಗಂಟೆಗೆ ಶ್ರೀ ಜಗದ್ಗುರು ಪಂಚಾಚಾರ್ಯ ಜನಕಲ್ಯಾಣ ಭವನ ಕೆಎಸ್‌ಆರ್‌ಟಿಸಿ ಡಿಪೋ ಹತ್ತಿರ ಮುದ್ದೇಬಿಹಾಳ ರೋಡ್, ಬ.ಬಾಗೇವಾಡಿಯಲ್ಲಿ ನಡೆಯಲಿದೆ.
ಮುದ್ದೇಬಿಹಾಳ ತಾಲೂಕಿನಲ್ಲಿ ದಿನಾಂಕ : ೨೨-೦೧-೨೦೨೧ ರಂದು ಬೆಳಿಗ್ಗೆ ೧೧-೦೦ ಗಂಟೆಗೆ ವಿಜಯ ಮಹಾಂತೇಶ ಮಂಗಲ ಕಾರ್ಯಾಲಯದಲ್ಲಿ ನಡೆಯಲಿದೆ. ಅದರಂತೆ ತಾಳಿಕೋಟಿ ತಾಲೂಕಿನಲ್ಲಿ ಮಧ್ಯಾಹ್ನ ೩-೦೦ ಗಂಟೆಗೆ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಇಂಡಿ ತಾಲೂಕಿನಲ್ಲಿ ದಿನಾಂಕ : ೨೩-೦೧-೨೦೨೧ ರಂದು ಬೆಳಿಗ್ಗೆ ೧೧-೦೦ ಗಂಟೆಗೆ ಶಾಂತೇಶ್ವರ ಮಂಗಲ ಕಾರ್ಯಾಲಯ, ಸಿಂದಗಿ ರೋಡ್, ಇಂಡಿಯಲ್ಲಿ ನಡೆಯಲಿದೆ. ಅದರಂತೆ ಚಡಚಣ ತಾಲೂಕಿನಲ್ಲಿ ಮಧ್ಯಾಹ್ನ ೩-೦೦ ಗಂಟೆಗೆ ಗುರುಕೃಪಾ ಭವನದಲ್ಲಿ ನಡೆಯಲಿದೆ.
ಸಿಂದಗಿ ತಾಲೂಕಿನಲ್ಲಿ ದಿನಾಂಕ : ೨೪-೦೧-೨೦೨೧ ರಂದು ಬೆಳಿಗ್ಗೆ ೧೧-೦೦ ಗಂಟೆಗೆ ಡಾ.ಭಾವಿಕಟ್ಟಿ ಕಲ್ಯಾಣ ಮಂಟಪ, ರಾಷ್ಟಿçÃಯ ಹೆದ್ದಾರಿ ಪಕ್ಕದಲ್ಲಿ, ವಿಜಯಪುರ ರೋಡ್, ಸಿಂದಗಿದಲ್ಲಿ ನಡೆಯಲಿದೆ. ಅದರಂತೆ ದೇ.ಹಿಪ್ಪರಗಿ ತಾಲೂಕಿನಲ್ಲಿ ಮಧ್ಯಾಹ್ನ ೩-೦೦ ಗಂಟೆಗೆ ಶ್ರೀ ಶ್ರೀ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಈ ಮೇಲೆ ನಿಗದಿಪಡಿಸಿದ ದಿನಾಂಕದAದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಗೆ ಹಾಜರಿರುವಂತೆ ತಾಲೂಕಿನ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಿಗಳ ನೂತನವಾಗಿ ಚುನಾಯಿತರಾದ ಹಾಗೂ ಅವಧಿ ಮುಕ್ತಾಯಗೊಳ್ಳದೆ ಇರುವ ಗ್ರಾಮ ಪಂಚಾಯತಿಗಳ ಚುನಾಯಿತ ಸದಸ್ಯರುಗಳಿಗೆ ಮುಂಚಿತವಾಗಿ ಲಿಖಿತವಾಗಿ ತಿಳಿಸಲು ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಸೂಚಿಸಲಾಗಿದೆ.
ಅದೇ ರೀತಿ ಕೋವಿಡ್ ಹಿನ್ನೆಲೆ ಸಾಮಾಜಿಕ ಅಂತರ ಹಾಗೂ ಸೂಕ್ತ ಮುಂಜಾಗ್ರತಾ ಕ್ರಮ ವಹಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.