ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕ, ಯುವತಿಯರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ

0

ವಿಜಯಪುರ ಜ.೧೧: ಜಿಲ್ಲೆಯ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ, ಯುವತಿಯರಿಂದ ವಿಶೇಷ ಕೇಂದ್ರಿಯ ನೆರವಿನಡಿ (ಎಸ್‌ಸಿಎ ಟು ಎಸ್‌ಸಿಎಸ್‌ಪಿ) ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಪರಿಶಿಷ್ಟ ಜಾತಿಯ ಫಲಾಪೇಕ್ಷಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆಯಡಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಟೆಲಿವಿಷನ್ ಜರ್ನಲಿಸಂ, ಕ್ಯಾಮರಾಮ್ಯಾನ್ ತರಬೇತಿಯನ್ನು ಮೆ: ಅನನ್ಯ ಕ್ರಿಯೇಷನ್ಸ್, ಮಂಡ್ಯದ ತರಬೇತಿ ಸಂಸ್ಥೆಯಲ್ಲಿ ೩ ತಿಂಗಳುಗಳ ಊಟ, ವಸತಿ ಸಹಿತ ಉಚಿತ ತರಬೇತಿ ನೀಡಲಾಗುವುದು ಎಂದು ವಿಜಯಪುರ, ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಅರ್ಜಿಗಳನ್ನು ಸಲ್ಲಿಸಲು ದಿನಾಂಕ : ೩೧-೦೧-೨೦೨೧ ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ಕಚೇರಿಯನ್ನು ಸಂಪರ್ಕಿಸಲು ಅಥವಾ ದೂ.ಸಂ : ೦೮೩೫೨-೨೭೬೭೪೩ ಮೂಲಕ ಮಾಹಿತಿ ಪಡೆಯಬಹುದಾಗಿದೆ. ವಯೋಮಿತಿ ೧೮ ರಿಂದ ೩೦ ನಿಗದಿಪಡಿಸಲಾಗಿದ್ದು, ತರಬೇತಿ ಸಂಪೂರ್ಣ ಉಚಿತ ಹಾಗೂ ಊಟ ವಸತಿ ಸೌಲಭ್ಯ ಹೊಂದಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

- Advertisement -

Leave A Reply

Your email address will not be published.