ತಾಲೂಕಾ ೬ನೇ ಕ.ಸಾ.ಪ.ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅನ್ನಪೂರ್ಣಾಕ ಕನೋಜ ಆಯ್ಕೆ

ಬೈಲಹೊಂಗಲ ೧೨: ತಾಲೂಕಿನ ಯರಡಾಲ ಗ್ರಾಮದಲ್ಲಿ ಇದೇ ತಿಂಗಳು ಬರುವ ದಿ.೨೩ ರಂದು ನಡೆಯುವ ತಾಲೂಕಾ ೬ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಕ್ಕಳ ಸಾಹಿತಿ ಅನ್ನಪೂರ್ಣಾಕ ಕನೋಜ ಅವರು ಆಯ್ಕೆಯಾಗಿದ್ದಾರೆ.
ಪಟ್ಟಣದ ಪತ್ರಿಬಸವ ನಗರದಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನದ ಅಧ್ಯಕ್ಷರಾಗಿ ರಾಜ್ಯ ಮತ್ತು ರಾಷ್ಟç ಪ್ರಶಸ್ತಿ ಪಡೆದ ಶಿಕ್ಷಕಿ ಹಾಗೂ ಮಕ್ಕಳ ಸಾಹಿತಿ ಅನ್ನಪೂರ್ಣಾ ಕನೋಜ ಅವರನ್ನು ಆಯ್ಕೆಮಾಡಲಾಯಿತು. ಬರುವ ಶನಿವಾರ ದಿ.೨೩ ರಂದು ಯರಡಾಲ ಗ್ರಾಮದಲ್ಲಿ ತಾಲೂಕಾ ೬ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಲು ನಿರ್ಧರಿಸಲಾಯಿತು.
ಪೂರ್ವಭಾವಿ ಸಭೆಯಲ್ಲಿ ತಾಲೂಕಾ ಕ.ಸಾ.ಪ. ಅಧ್ಯಕ್ಷೆ ಗೌರಾದೇವಿ ತಾಳಿಕೋಟಿಮಠ, ಶರಣೆ ಪ್ರೇಮಕ್ಕ ಅಂಗಡಿ, ಶ್ರೀಕಾಂತ ಮಡಿವಾಳರ, ಮಹಾಂತೇಶ ರೇಶ್ಮಿ ಎಸ್.ಆರ್.ಮೆಳವಂಕಿ ಹಾಗೂ ಮುಕ್ತಾಯಕ್ಕೆ ಅಕ್ಕನ ಬಳಗದ ಸದಸ್ಯರು ಇದ್ದರು.

Leave A Reply

Your email address will not be published.