Belagavi

ಕಾಗವಾಡದಲ್ಲಿ ೩೦ ರಂದು ೧೪ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಮಂಗಲಾ ಮೆಟಗುಡ್ಡ


ಬೈಲಹೊಂಗಲ ೧೨: ರಾಜ್ಯದ ಗಡಿಭಾಗವಾಗಿರುವ ಕಾಗವಾಡದಲ್ಲಿ ಇದೇ ಬರುವ ದಿ. ೩೦ ಹಾಗೂ ೩೧ ರಂದು ಎರಡು ದಿನಗಳವರೆಗೆ ಬೆಳಗಾವಿ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷೆ ಮಂಗಲಾ ಮೆಟಗುಡ್ಡ ತಿಳಿಸಿದರು.
ಬೆಳಗಾವಿ ನಗರದಲ್ಲಿರುವ ಕನ್ನಡ ಭವನದಲ್ಲಿ ಮಂಗಳವಾರ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಇದು ನನ್ನ ಅವಧಿಯ ಕೊನೆಯ ಅಧಿವೇಶನವಾಗಿದೆ. ಈ ಸಮ್ಮೇಳನದಲ್ಲಿ ಡಾ.ಪ್ರಭಾಕರ ಬಸವಪ್ರಭು ಕೋರೆ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶನಿವಾರ ದಿ.೩೦ ರಂದು ಸಮ್ಮೇಳನ ಉದ್ಘಾಟನೆ ಮತ್ತು ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಲಿದೆ.
ಈ ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ, ಮಹಿಳಾಗೋಷ್ಠಿ, ಚಿಂತನಾಗೋಷ್ಠಿ, ಸರ್ವಾಧ್ಯಕ್ಷರೊಂದಿಗೆ ಸಂವಾದ, ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕರ ಸನ್ಮಾನ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಗಡಿಭಾಗದಲ್ಲಿ ಪ್ರಥಮವಾಗಿ ನಡೆಯುವ ಈ ಸಮ್ಮೇಳನದಲ್ಲಿ ಯುವಕ ಯುವತಿಯರಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದ್ದು ಈ ಕಾರ್ಯಕ್ರಮಕ್ಕೆ ಸಚಿವರು, ಶಾಸಕರು, ಸಂಸದರು, ರಾಜ್ಯದ ಹಿರಿಯ ಸಾಹಿತಿಗಳು, ಚಿಂತಕರು, ಕನ್ನಡ ಅಭಿಮಾನಿಗಳು ಆಗಮಿಸುವರು. ಇದೊಂದು ವಿಶೇಷ ಸಮ್ಮೇಳನವಾಗಿದೆ ಎಂದು ನುಡಿದರು.
ಕಾಗವಾಡ ತಾಲೂಕಾ ಕ.ಸಾ.ಪ. ಅಧ್ಯಕ್ಷ ಡಾ.ಸಿದ್ದಗೌಡ ಕಾಗೆ, ಜಿಲ್ಲಾ ಕೋಶಾಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಕಾರ್ಯದರ್ಶಿಗಳಾದ ಜ್ಯೋತಿ ಬದಾಮಿ, ಎಂ.ವಾಯ್.ಮೆನಶಿನಕಾಯಿ ವೇದಿಕೆ ಮೇಲಿದ್ದರು. ಜಿಲ್ಲೆಯ ವಿವಿಧ ತಾಲೂಕಿನ ತ.ಸಾ.ಪ. ಅಧ್ಯಕ್ಷರಾದ ಗೌರಾದೇವಿ ತಾಳಿಕೋಟಿಮಠ, ಮಹಾಂತೇಶ ತಾಂವಶಿ, ವಿಜಯ ಬಡಿಗೇರ, ಡಾ.ಮಹಾಂತೇಶ ಉಕ್ಕಲಿ, ಅನ್ನಪೂರ್ಣ ಕನೋಜ, ಪಾರ್ವತಿ ಪಾಟೀಲ, ಡಾ.ಹೇಮಾವತಿ ಸುನೊಳ್ಳಿ, ಶಶಿಕಲಾ ಯಲಿಗಾರ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾದಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾಗವಾಡ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬೆಳಗಾವಿ ಅಪರ ಜಿಲ್ಲಾಧಿಕಾರಿ ಅಶೋಕ ದುರಗುಂಟಿ ಅವರು ಬಿಡುಗಡೆ ಮಾಡಿದರು.


Leave a Reply