Belagavi

ಐತಿಹಾಸಿಕ ರಾಮ ಮಂದಿರ ನಿಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು- ಪ್ರಭು ನೀಲಕಂಠ ಸ್ವಾಮಿಜಿ


ಬೈಲಹೊಂಗಲ ೧೨- ರಾಷ್ಟçಪುರುಷ ಪ್ರಭು ಶ್ರೀ ರಾಮನ ಮಂದಿರ ನಿರ್ಮಾಣ ಕಾರ್ಯಕ್ಕೆ ನಾವೆಲ್ಲರೂ ಕೈ ಜೋಡಿಸುವ ಸೌಭಾಗ್ಯ ನಮಗೆ ಒದಗಿಬಂದಿರುವದು, ನಮ್ಮ ಪೂರ್ವಜನುಮದ ಪುಣ್ಯದ ಫಲ ಎಂದು ಸಾನಿಧ್ಯ ವಹಿಸಿದ ಶಾಖಾ ಮೂರುಸಾವಿರ ಮಠದ ¥ಪೀಠಾಧಿಪತಿಗಳಾದ ಪ್ರಭು ನೀಲಕಂಠ ಸ್ವಾನೀಜಿ ಹೇಳಿದರು.
ಅವರು ಪಟ್ಟಣದ ಬೆಳಗಾವಿ ರಸ್ತೆಯಲ್ಲಿರುವ ಸಿಂಡಿಕೇಠ ಬ್ಯಾಂಕ್ ನೆಲಮಹಡಿಯಲ್ಲಿ ಶ್ರೀ ರಾಮನ ಮಂದಿರ ನಿರ್ಮಾಣ “ನಿಧಿ ಸಮರ್ಪಣಾ ಅಭಿಯಾನ ಕಾರ್ಯಾಲಯವನ್ನು ಉಧ್ಘಾಟಿಸಿ ಮಾತನಾಡಿ ನಾವೆಲ್ಲರೂ ಹಾಗೂ ನಮ್ಮ ಯುವ ಪೀಳಿಗೆ ಸಾವಿರಾರೂ ವರ್ಷದಿಂದಲೂ ಶಿಕ್ಷಣದಲ್ಲಿ ಅಧ್ಯಯನ ಸಮಯದಲ್ಲಿ ನಮ್ಮ ಹಿಂದು ರಾಜ ಮಹಾರಾಜರ ವಧೆ ಮತ್ತು ಧರ್ಮದ ಐತಿಹಾಸಿಕ ದೇಗುಲ ಹಾಗೂ ಮಠ ಮಂದಿರಗಳನ್ನು ನಾಶಮಾಡಿಸುವ ಉದ್ಧೇಶದಿಂದ ಭಾರತಕ್ಕ ಆಗಮಿಸಿದ ಕೇವಲ ಮುಸ್ಲಿö್ಮಮ ರಾಜರ ಇತಿಹಾಸವನ್ನೆ ಓದುವದು ತಿಳಿಯುವದು ನಮ್ಮ ದುಧೈವವಾಗಿದೆ. ಇನ್ನು ಮುಂದಾದರೂ ಸರಕಾರ ಅಖಂಡ ಭಾರತದ ವಿಸ್ತಾರದ ರಾಜ ವೈಭವ ಆಗಿನ ನಮ್ಮ ಪರಂಪರೆಯ ಪರಿಕಲ್ಪನೆಯ ಪಾಠ ಬೋಧನೆಯಲ್ಲಿ ಪಠ್ಯತೇರ ವಿಷಯಗಳಲ್ಲಿ ಮೂಡಿಬರಬೇಕಾಗಿದೆ ಅದಕ್ಕಾಗಿ ನಾವೇಲ್ಲರೂ ಹಿಂದೂಗಳು ಜಾತಿಬೇಧ ಮರೆತು ಒಂದಾಗಬೇಕಾಗಿದೆ ಎಂದರು.ಮುರಗೋಡದ ಅಡವಿ ಸಿದ್ಧೇಶ್ವರ ಶ್ರೀಗಳು ಹಾಗೂ ಕೇಂಗೇರಿ ಮಠದ ಶ್ರೀ ದೀವಾಕರ ದೀಕ್ಷಿತ್ ಶ್ರೀಗಳು ಮಾತನಾಡಿದರು.
ಬೆಳಗಾವಿ ವಿಶ್ವ ಹಿಂದು ಪರಿಷದ್ ಜಿಲ್ಲಾಧ್ಯಕ್ಷ ಶ್ರೀಕಾಂತ ಕದಮ ಅಧ್ಯಕ್ಷ ಡಾ.ಚಿದಂಬರ ಕುಲಕರ್ಣಿ, ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ವೇದಿಕೆಯಲ್ಲಿದ್ದರು.
ಬೆಳಗಾವಿ ಸಂಘ ಪರಿವಾರದ ದೀಲಿಫ ವೇರ್ಣೇಕರ, ಅಚ್ಚುತ ಕುಲಕರ್ಣಿ, ಬಸವರಾಜ ಕರಲಿಂಗನ್ನವರ, ಸುಧೀಂದ್ರ ಹಂಪಿಹೋಳಿ, ಚಿದಂಬರ ಮೇಟಿ, ಯಲ್ಲಪ್ಪ ದೇವರಹುಬ್ಬಳಿ ಉಪಸ್ಥಿತರಿದ್ದರು.
ವಿಶ್ವ ಹಿಂದೂ ಪರಿಷದ್ ತಾಲೂಕಾ ಉಪಾಧ್ಯಕ್ಷ ರಾಜು ಬಡಿಗೇರ, ಶಿವಾನಂದ ಬಡ್ಡಿಮನಿ, ವಿವೇಕ ಪೂಜಾರ, ಸುಧೀರ ಮಾಳ್ವೋದೆ, ಅಶೋಕ ಸವದತ್ತಿ ಮಹಾನಿಂಗ ಬಂಡಿವಡ್ಡರ, ಬಸವರಾಜ ಈಟಿ, ಮಹಾಂತೇಶ ಅಕ್ಕಿ, ಸಂತೋಷ ಹಡಪದ. ಎಬಿವಿಪಿ ಪ್ರಶಾತ ಅಮ್ಮಿನಭಾವಿ, ರಮೇಶ ಯರಗಟ್ಟಿ ಹಾಗೂ ಬಾಜಪ, ಆರ್.ಎಸ್.ಎಸ್, ವಿಹೆಚ್ಚಪಿ, ಭಜರಂಗ್ ಧಳದ ಕಾರ್ಯಕರ್ತರು ಹಾಜರಿದ್ದರು.
ವಿಶ್ವ ಹಿಂದು ಪರಿಷದ್ ತಾಲೂಕ ಗೌರವ ಅಧ್ಯಕ್ಷ ಡಾ.ಚಿದಂಬರ ಕುಲಕರ್ಣಿ ಸ್ವಾಗತಿಸಿದರು, ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ವಂದಿಸಿದರು. ಮುಕ್ಕುಂದ ಕುಕಲರ್ಣಿ ನಿರೂಪಿಸಿದರು.


Leave a Reply