ಗಂಗಾವತಿ ನಗರಸಭೆ : ಆಕ್ಷೇಪಣೆ ಆಹ್ವಾನ

0

ಕೊಪ್ಪಳ ಜ.೧೨ : ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕನಕದಾಸ ವೃತ್ತದಿಂದ ಇಂದಿರಾ ನಗರದ ವೃತ್ತದವರೆಗೆ ಇರುವ ಬೈಪಾಸ್ ರಸ್ತೆಗೆ ಶ್ರೀ ಗೌಳಿ ಮಹಾದೇವಪ್ಪ ರಸ್ತೆ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದ್ದು, ಈ ಸಂಬAಧವಾಗಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
೨೦೧೮ ರ ಜೂನ್ ೨೬ ರಂದು ಗಂಗಾವತಿ ನಗರಸಭೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಮಹಾಸಭೆಯ ನಡುವಳಿ ನಿರ್ಣಯ ಸಂಖ್ಯೆ:೬೨೩ ರಂತೆ ಗಂಗಾವತಿ ತಾಲ್ಲೂಕಾ ಗೌಳಿ ಸಮಾಜ ಸಂಘದ ಕೋರಿಕೆಯಂತೆ ನಗರದ ಕನಕದಾಸ ವೃತ್ತದಿಂದ ಇಂದಿರಾ ನಗರದ ವೃತ್ತದವರೆಗೆ ಇರುವ ಬೈಪಾಸ್ ರಸ್ತೆಗೆ ಶ್ರೀ ಗೌಳಿ ಮಹಾದೇವಪ್ಪ ರಸ್ತೆ ಎಂದು ನಾಮಕರಣ ಮಾಡಲು ಸಭೆಯು ಒಪ್ಪಿಗೆ ನೀಡಿದ್ದು, ರಸ್ತೆ ನಾಮಕರಣಕ್ಕೆ ಆಕ್ಷೇಪಣೆಗಳು ಇದ್ದಲ್ಲಿ ಪ್ರಕಟಣೆ ಪ್ರಕಟಗೊಂಡ ೩೦ ದಿನಗಳೊಳಗಾಗಿ ನಗರಸಭೆ ಕಾರ್ಯಾಲಯಕ್ಕೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

- Advertisement -

Leave A Reply

Your email address will not be published.