ಸೇನಾ ನೇಮಕಾತಿ ರ್ಯಾಲಿ : ನೋಂದಣಿಗೆ ಜ.೧೮ ಕೊನೆಯ ದಿನಾಂಕ

ಕೊಪ್ಪಳ ಜ.೧೨ : ಬೆಳಗಾವಿಯ ಸೇನಾ ನೇಮಕಾತಿ ಕಚೇರಿಯಿಂದ ಫೆಬ್ರವರಿ ೦೪ ರಿಂದ ೧೫ ರವರೆಗೆ ಸೇನಾ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದ್ದು, ಬೆಳಗಾವಿ, ರಾಯಚೂರು, ಯಾದಗಿರಿ, ಬೀದರ್, ಕೊಪ್ಪಳ ಮತ್ತು ಕಲಬುರಗಿ ಜಿಲ್ಲೆಗಳ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಬಹುದು.ರ್ಯಾಲಿಯಲ್ಲಿ ಭಾಗವಹಿಸಲು ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಜ.೧೮ ಆನ್ಲೈನ್ ನೋಂದಣಿಗೆ ಕೊನೆಯ ದಿನವಾಗಿದೆ. ಸೈನಿಕ ಸಾಮಾನ್ಯ ಕರ್ತವ್ಯ, ಸೈನಿಕ ತಾಂತ್ರಿಕ, ಸೈನಿಕ ಕ್ಲರ್ಕ್, ಸ್ಟೋರ್ ಕೀಪರ್ ತಾಂತ್ರಿಕ, ಟ್ರೇಡ್ಸ್ಮನ್, ಸೈನಿಕ ನರ್ಸಿಂಗ್ ಸಹಾಯಕ ಮುಂತಾದ ಹುದ್ದೆಗಳಿಗೆ ನೇಮಕಾತಿ ರ್ಯಾಲಿ ನಡೆಯಲಿದೆ. ತಿತಿತಿ.ರಿoiಟಿiಟಿಜiಚಿಟಿಚಿಡಿmಥಿ.gov.iಟಿ ವೆಬ್ಸೈಟ್ನಲ್ಲಿ ವಯೋಮಾನ, ವಿದ್ಯಾರ್ಹತೆ ಮುಂತಾದ ಅರ್ಹತಾ ಅಂಶಗಳು ಹಾಗೂ ವಿವರಗಳ ಮಾಹಿತಿಯನ್ನು ಪಡೆಯಬಹುದು. ಅಭ್ಯರ್ಥಿಗಳು ಆನ್ಲೈನ್ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ ಪತ್ರಗಳನ್ನು ನೀಡಲಾಗುವುದು ಹಾಗೂ ಪ್ರವೇಶ ಪತ್ರ ಹೊಂದಿದವರಿಗೆ ಮಾತ್ರ ರ್ಯಾಲಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: ೦೮೩೧-೨೯೫೦೦೦೧ ಗೆ ಸಂಪರ್ಕಿಸಬಹುದು ಎಂದು ನೇಮಕಾತಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.