ಜಮೀನು ಮಾಲೀಕರಿಂದ ಅರ್ಜಿ ಆಹ್ವಾನ

ಕೊಪ್ಪಳ ಜ.೧೨: ಕೊಪ್ಪಳ ತಾಲ್ಲೂಕಿನ ಹಿರೇಕಾಸನಕಂಡಿಯ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ತಾಲ್ಲೂಕಿನಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲದ ಕಾರಣ ಖಾಸಗಿಯವರಿಂದ ಜಮೀನು ಖರೀದಿಸಲು ಉದ್ದೇಶಿಸಲಾಗಿದ್ದು, ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಜಮೀನು ಮಾರಾಟ ಮಾಡಲು ಆಸಕ್ತಿ ಉಳ್ಳ ಹಿಟ್ನಾಳ ಹೋಬಳಿ ವ್ಯಾಪ್ತಿಯಲ್ಲಿನ ಜಮೀನು ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಾರಾಟ ಮಾಡುವ ಜಮೀನು ಕನಿಷ್ಠ ೦೮ ರಿಂದ ೧೦ ಎಕರೆ ಇರತಕ್ಕದ್ದು. ಪ್ರಸ್ತಾಪಿತ ಜಮೀನನ ಮೇಲೆ ಯಾವುದೇ ಹೈಟೆನ್ಷನ್ ವಿದ್ಯುತ್ ತಂತಿ ಮಾರ್ಗ ಹಾದು ಹೋಗಿಲ್ಲವೆಂದು ಜೆಸ್ಕಾಂ ನಿಂದ ಪಡೆದ ಪ್ರಮಾಣ ಪತ್ರ, ಯಾವುದೇ ಬ್ಯಾಂಕ್ ಅಥವಾ ಸಹಕಾರ ಸಂಘದಲ್ಲಿ ಸಾಲ ಇಲ್ಲದಿರುವ ಬಗ್ಗೆ ಬೇಬಾಕಿ ದೃಢೀಕರಣ ಪತ್ರ, ಉಪನೋಂದಣಾಧಿಕಾರಿ ನೀಡಿದ ಮಾರ್ಗಸೂಚಿ ದರದ ಪ್ರತಿ, ಜಮೀನು ಮಾರಾಟ ಮಾಡಲು ಒಪ್ಪಿಗೆ ಪತ್ರ, ಜಮೀನು ಕುರಿತು ಕೋರ್ಟ್ ಹಾಗೂ ಇತರೆ ಯಾವುದೇ ವ್ಯಾಜ್ಯ/ತಕರಾರು ಇಲ್ಲದಿರುವ ಬಗ್ಗೆ ದೃಢೀಕರಣ, ಇತ್ತೀಚಿನ ಮೂಲ ಪಹಣಿ ಪತ್ರ, ಚೆಕ್ಕುಬಂಧಿ,
ಸ್ಕೆಚ್ ಕಾಪಿ, ಇ.ಸಿ.ಮ್ಯುಟೇಷನ್, ಸರ್ಕಾರಕ್ಕೆ ಕಂದಾಯ ಪಾವತಿಸಿದ ರಶೀದಿ ಪ್ರತಿ ಸೇರಿದಂತೆ ಜಮೀನಿಗೆ ಸಂಬAಧಿಸಿದ ಅಗತ್ಯ ದಾಖಲೆಗಳೊಂದಿಗೆ ಜನವರಿ.೨೦ ರೊಳಗಾಗಿ ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಹೊಸಪೇಟೆ ರಸ್ತೆ, ಕೊಪ್ಪಳ ಇಲ್ಲಿಗೆ ಅರ್ಜಿ ಸಲ್ಲಿಸಬೇಕು ಎಂದು ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.