ಕುರಣಿವಾಡಿ ಗ್ರಾಮದಲ್ಲಿ ರೈತರ ತರಬೇತಿ ಕಾರ್ಯಕ್ರಮ

ಸಂಕೇಶ್ವರ ಜ.ಮಣ್ಣು ಆರೋಗ್ಯ ಚೀಟಿ ಯೋಜನೆಯಡಿ ಪ್ರಾತ್ಯಕ್ಷಿಕೆ ಮತ್ತು ರೈತರ ತರಬೇತಿ ಕಾರ್ಯಕ್ರಮವನ್ನು ಹುಕ್ಕೇರಿ ತಾಲೂಕಿನ ಸಂಕೇಶ್ವರ ಹೋಬಳಿಯ ಕುರಣಿವಾಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ  ಶ್ರೀ ಎಲ್.ಆಯ್.ರೂಡಗಿ ಉಪಕೃಷಿ  ನಿರ್ದೇಶಕರು ಚಿಕ್ಕೋಡಿ, ಶ್ರೀ ಎಮ್.ಎಸ್. ಪಟಗುಂದಿ, ಸಹಾಯಕ ಕೃಷಿ ನಿರ್ದೇಶಕರು,ಡಾll ಎಮ್. ಎನ್.ಮಾಲವಾಡಿ  ಬೇಸಾಯ ಶಾಸ್ತ್ರಜ್ಞರು ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿ. ಡಾll ಎಸ್.ವಿ ಹೂಗಾರ ಕೀಟ ಶಾಸ್ತ್ರಜ್ಞರು ಕೃಷಿ ಸಂಶೋಧನಾ ಕೇಂದ್ರ ಸಂಕೇಶ್ವರ,ಶ್ರೀಮತಿ ಶೈಲಜಾ ಬೆಳ್ಳಂಕಿಮಠ ಕೃಷಿ ಅಧಿಕಾರಿ ಮಣ್ಣು ಆರೋಗ್ಯ ಕೇಂದ್ರ ಗೋಕಾಕ, ರಾಘವೇಂದ್ರ ತಳವಾರ ಕೃಷಿ ಅಧಿಕಾರಿ ಸಂಕೇಶ್ವರ,  ಯು.ಸಿ. ಆಗನೂರ, ಬಿ.ಎನ್.ದೊಡಮನಿ, ಎಸ್.ಎಸ್.ಹಿರೆಕುಡಿ  ಮತ್ತು ಬಜಂತ್ರಿ, ಎಸ್.ಆಯ್. ಯರಗಟ್ಟಿ ಸಹಾಯಕ ಕೃಷಿ ಅಧಿಕಾರಿಗಳು  ಭಾಗವಹಿಸಿದ್ದರು.

ಡಾll ಎಮ್.ಎನ್.ಮಾಲವಾಡಿ ಅವರು ಬೀಜೋಪಚಾರ ಮಾಡಿ,ನೀರಿನ ಮಿತ ಬಳಕೆ, ಬೆಳೆಗಳ ಸಂರಕ್ಷಣೆ, ಕಬ್ಬಿನ ರವದಿ ಉಪಯುಕ್ತತೆ ಮಹತ್ವ ಮತ್ತು ಶಿಫಾರಸಿತ ಪ್ರಮಾಣ ರಸಗೊಬ್ಬರ ಬಳಕೆಗಳ ಮಹತ್ವ ಸವಿವರವಾಗಿ ಹೇಳಿದರು. ಡಾ ll ಎಸ್.ವಿ.ಹೂಗಾರ ಅವರು ಖರ್ಚಿಲ್ಲದ ಬೇಸಾಯ ಕ್ರಮಗಳ ಬಗ್ಗೆ, ಮಣ್ಣಿನಿಂದ ಬರುವ ರೋಗಗಳನ್ನ ತಡೆಗಟ್ಟುವ ಕ್ರಮಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.ಶ್ರೀ ಎಲ್.ಆಯ್.ರೂಡಗಿ ಮಣ್ಣಿಗೂ ಜೀವವಿದೆ ಅದನ್ನ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಮತ್ತು ಕೃಷಿ ಇಲಾಖೆ ಯೋಜನೆ, ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆತ್ಮ ನಿರ್ಭರ ಯೋಜನೆಯ ಬಗ್ಗೆ  ಮಾಹಿತಿ ನೀಡಿದರು. ಶ್ರೀ ಎಮ್ .ಎಸ್. ಪಟಗುಂದಿ ಅವರ ಸಮಗ್ರ ಕೃಷಿ, ಸಾವಮವ ಕೃಷಿ ಮಾಡಿ ಮಣ್ಣನ್ನು ಜೀವಂತವಾಗಿಡಿ, ಮಣ್ಣಿನ ವೈವಿಧ್ಯತೆಯನ್ನು ರಕ್ಷಿಸಿ ಅಂತಾ ಕರೆ ಕೊಟ್ಟರು.

ಶ್ರೀಮತಿ ಶೈಲಜಾ ಬೆಳ್ಳಂಕಿಮಠ ಅವರು ಮಣ್ಣಿನ ಸಂರಕ್ಷಣೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸುವ ಕ್ರಮಗಳು ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಮಣ್ಣಿನ ಪರೀಕ್ಷೆ ವಿಧಾನವನ್ನು ಪ್ರಾಯೋಗಿಕವಾಗಿ ರೈತರ ಕ್ಷೇತ್ರದಲ್ಲಿ ಅರಿವು ಮೂಡಿಸಲಾಯಿತು.

ಶ್ರೀ ರಾಘವೇಂದ್ರ ತಳವಾರ ಅವರು ಬೆಳೆ ಸಮೀಕ್ಷೆ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

ರೈತರು ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸಮೀರ ಲೋಕಾಪೂರ ತಾಲೂಕು ತಾಂತ್ರಿಕ ವ್ಯವಸ್ಥಾಪಕರು ಅವರು ನಿರೂಪಣೆ ಮತ್ತು ವಂದನಾರ್ಪಣೆ ಮಾಡಿದರು

Leave A Reply

Your email address will not be published.