Koppal

ಯುವ ದಿನ : ಮೂಲಭೂತ ಹಕ್ಕು, ಕರ್ತವ್ಯಗಳ ಕುರಿತು ಕಾನೂನು ಅರಿವು


ಕೊಪ್ಪಳ ಜ.12 : ಸ್ವಾಮಿ ವಿವೇಕಾನಂದರು ಅಭೂತಪೂರ್ವ ಗುಣಗಳನ್ನು ಮತ್ತು ಅಪ್ರತಿಮ ಜ್ಞಾನದ ಶಕ್ತಿಯನ್ನು ಹೊಂದಿದ್ದ ಮಹಾನ್ ವ್ಯಕ್ತಿ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ.ಶ್ರೀನಿವಾಸ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆ ಇವರುಗಳ ಸಹಯೋಗದಲ್ಲಿ ರಾಷ್ಟಿçÃಯ ಯುವ ದಿನಾಚರಣೆ ಅಂಗವಾಗಿ ಯುವಕರಿಗೆ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ನಗರದ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಯಾಗೋದಲ್ಲಿ ವಿವೇಕಾನಂದರು ಮಾಡಿದ ಭಾಷಣ ಇಂದಿಗೂ ಪ್ರೇರಣೆಯಾಗಿದ್ದು, ಭಾಷಾಭಿಮಾನ, ದೇಶಾಭಿಮಾನವನ್ನು ಹೊಂದಿದೆ. ಅವರ ಹುಟ್ಟಿದ ದಿನವನ್ನು ರಾಷ್ಟಿçÃಯ ಯುವ ದಿನಾಚರಣೆಯಾಗಿ ನಾವು ಆಚರಿಸುತ್ತಿರುವುದು ನಿಜಕ್ಕೂ ಸಂತಸ. ಈ ದಿನವನ್ನು ಯುವಕರಿಗೆ ಮೀಸಲಿಟ್ಟ ಕಾರಣವನ್ನು ನಾವು ಅರ್ಥೈಸಿಕೊಳ್ಳಬೇಕು. ದೇಶದ ಅಭಿವೃದ್ಧಿಗೆ ಯುವಕರ ಶಕ್ತಿ ಬಹುಮುಖ್ಯವಾಗಿದ್ದು, ಯುವಕರನ್ನು ಹುರಿದುಂಬಿಸಿ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕಾರ್ಯ ಆಗಬೇಕಿದೆ. ಸಂಘ ಜೀವಿಯಾದ ಮಾನವರು ಸಮಾನ ಮನಸ್ಕರಾಗಬೇಕು. ಮೇಲು-ಕೀಳು, ಜಾತಿ-ಧರ್ಮದ ತಾರತಮ್ಯವನ್ನು ಕಿತ್ತಾಕಿ ಶ್ರೇಯಸ್ಸು ಹೊಂದಬೇಕು ಎಂದು ಯುವ ಜನತೆಗೆ ಕರೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಅತ್ಯಾಚಾರ, ಕೊಲೆಗಳಂತ ಅನೈತಿಕ ಕೃತ್ಯಗಳು ನಡೆಯುತ್ತಿರುವುದು ಬೇಸರ. ಆದರೆ ನಮ್ಮಲ್ಲಿ ಎಂಥ ಕೆಟ್ಟ ಕೆಲಸಕ್ಕೂ ಜೀವಿತಾವಧಿ ಶಿಕ್ಷೆಯಿದೆ ಹೊರತು ಮರಣದಂಡನೆ ಶಿಕ್ಷೆ ವಿಧಿಸುವುದಿಲ್ಲ. ನಮ್ಮಲ್ಲಿನ ವೇದ, ಪುರಾಣಗಳನ್ನು ನೋಡಿದಾಗ ನಮ್ಮ ದೇಶದಲ್ಲಿ ಮಾನವೀಯ ಗುಣಗಳ ಉಲ್ಲೇಖವಿದ್ದು, ನಾವು ಅವುಗಳನ್ನು ರೂಢಿಸಿಕೊಳ್ಳಬೇಕಿದೆ. ಯುವಕರು ರಾಷ್ಟçವನ್ನು ಗೌರವಿಸಬೇಕು, ಅತೀಯಾದ ಮೊಬೈಲ್ ಬಳಕೆಯು ಸಂಸ್ಕೃತಿಯನ್ನು ಮರೆಸುತ್ತಿದ್ದು, ಅದರ ಬಳಕೆ ಹತೋಟಿಯಲ್ಲಿಟ್ಟು ನಾಗರೀಕತೆಯ ಜೊತೆಗೆ ಸಂಸ್ಕೃತಿಗಳನ್ನು ಕಾಪಾಡಿಕೊಳ್ಳಬೇಕು. ಬೇರೆಯವರ ಮೂಲಭೂತ ಹಕ್ಕು ಹಾಗೂ ಕರ್ತತವ್ಯಗಳಿಗೆ ಚ್ಯುತಿ ಬಾರದಂತೆ ವರ್ತಿಸಬೇಕು ಹಾಗೂ ದೇಶದ ಉಜ್ವಲ ಭವಿಷ್ಯಕ್ಕಾಗಿ ವಿಚಾರವಾದಿಗಳಾಗಿ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಬೇಕು. ನಾವು ಸಹಜ ಜೀವನ ನಡೆಸಲು ಕಾನೂನಿನ ಅರಿವು ನಮಗೆ ಬಹಳ ಮುಖ್ಯವಾಗಿದ್ದು, ಕಾನೂನಿನ ಅಧ್ಯಯನದ ಜೊತೆಗೆ ಅದರ ಪರಿಪಾಲನೆ ಮಾಡಬೇಕು ಮತ್ತು ವಿದ್ಯಾರ್ಥಿ ಜೀವನವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಕೀಲರಾದ ಮೈಲಾರಗೌಡ ಎಂ. ಪಾಟೀಲ್ ಅವರು ಯುವಸ್ಪಂದನ ಅರಿವು ಮತ್ತು ಜೀವನ ಕೌಶಲ್ಯ ಕುರಿತು ಉಪನ್ಯಾಸ ಮಾಡಿ, ಸ್ವಾಮಿ ವಿವೇಕಾನಂದರು ಬಾಲ್ಯದಲ್ಲೇ ಆಧ್ಯಾತ್ಮದಲ್ಲಿ ಒಲವಿಟ್ಟು, ದೇವರನ್ನು ಹುಡುಕುವ ಪ್ರಯತ್ನವನ್ನು ಮಾಡಿದ್ದರು. 1893ರಲ್ಲಿ ಚಿಕ್ಯಾಗೋದ ವಿಶ್ವ ಧರ್ಮ ಸಮ್ಮೇಳನದಲ್ಲಿ ಆಕರ್ಷಕ ಭಾಷಣ ಮಾಡಿದ ವಿವೇಕಾನಂದರು ನಮ್ಮ ದೇಶದ ಸನಾತನ ತಾಕತ್ತು ಎಂದರು.
ವಿಶ್ವದಲ್ಲಿ ಅತಿ ಹೆಚ್ಚು ಯುವಕರನ್ನು ಹೊಂದಿರುವ ಭಾರತದಲ್ಲಿ ಯುವಕರಿಗೆ ನೈತಿಕ ಶಿಕ್ಷಣದ ಕೊರತೆಯಿದ್ದು, ಪೋಷಕರು ಸಹ ನೈತಿಕ ಮೌಲ್ಯಗಳನ್ನು ಹೇಳಿಕೊಡುವಲ್ಲಿ ವಿಫಲರಾಗುತ್ತಿದ್ದಾರೆ. ಆದ್ದರಿಂದ ಯುವಸಮೂಹ ಸೂಕ್ತ ಗುರಿಯನ್ನು ತಲುಪುವಲ್ಲಿ ಎಡವುತ್ತಿದೆ. ಆಧುನಿಕರಣ, ಜಾಗತೀಕರಣ ಹಾಗೂ ಪಾಶ್ಚಾತ್ತೀಕರಣದಿಂದ ಮೌಲ್ಯಗಳು ಮಾಯವಾಗುತ್ತಿವೆ. ಅದಕ್ಕೆ ನಾವುಗಳು ನಾಡಿನ ಶರಣರು, ದಾಸರು, ವಿದ್ವಾಂಸರು ನುಡಿದಂತೆ ನಡೆಯಬೇಕಿದೆ ಎಂದರು.

ಉಪನ್ಯಾಸಕಿ ಕವಿತಾ ವಿ. ಮನು ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಉಪನ್ಯಾಸ ಮಾಡಿ, ಸ್ವಾತಂತ್ರö್ಯ ಪೂರ್ವದಲ್ಲಿ ನಮ್ಮ ರಾಷ್ಟç ನಾಯಕರು ಅನೇಕ ಸಮಸ್ಯೆಗಳನ್ನು ಎದುರಿಸಿ ಕಾನೂನಾತ್ಮಕವಾಗಿ, ಸಮಾನವಾಗಿ ಬದುಕಲು ಸಂವಿಧಾನ ರಚನೆ ಮಾಡಿದರು. ಅದು ವ್ಯಕ್ತಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಮಾಡಿಕೊಟ್ಟಿತು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವಿ.ಕೆ ಬಂಡವಡ್ಡರ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ.ವಿ ಸಜ್ಜನ್, ಪ್ರೌಢಶಾಲೆಯ ಆಡಳಿತಾಧಿಕಾರಿ ಗವಿಸಿದ್ದಪ್ಪ ಕೊಪ್ಪಳ, ಶೈಕ್ಷಣಿಕ ಸಂಯೋಜಕ ಶ್ರೀನಿವಾಸ ಬಿ. ಸೇರಿದಂತೆ ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Leave a Reply